Wednesday, 18th September 2024

ಸ್ಪೀಕರ್ ದಲಿತ ಎಂಬ ಕಾರಣಕ್ಕೆ ಅಪಮಾನ-ಸಂಜೀವ ಚವ್ಹಾಣ, ಶೇಖರ ನಾಯಕ ಜಂಟಿ ಆರೋಪ

ಇಂಡಿ: ಸದನದ ಘನತೆ ಗೌರವ ಕಾಪಾಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ.

ಅಧಿವೇಶನ ನಡೇದ ಸಂದರ್ಬದಲ್ಲಿ ಸ್ಪೀಕರ್ ಘನತೆಗೆ ಧಕ್ಕೆಯುಂಟು ಮಾಡಿರುವ ನಿಮ್ಮ ನಡೆ ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿದಂತಾಗಿದೆ ಎಂದು ಮಾಜಿ ತಾ.ಪಂ ಅಧ್ಯಕ್ಷ ಬಂಜಾರ ಸಮುದಾಯದ ಮುಖಂಡ ಶೇಖರ ನಾಯಕ ಹಾಗೂ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಇಂಡಿ, ಕಾಂಗ್ರೆಸ್ ಜಿಲ್ಲಾ ಎಸ್ಸೀ ಸಂಘಟನಾ ಸಂಚಾಲಕ ಸಂಜೀವ ಚವ್ಹಾಣ ವಿಪಕ್ಷದ ನಾಯಕರ ನಡೆಯನ್ನು ಖಂಡಿಸಿದ್ದಾರೆ.

ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಪ್ರತಿನಿಧಿಗಳಿಗೆ ರಾಜ್ಯದ ಜನತೆ ಆರ್ಶೀವಾದ ಮಾಡಿ ಕಳಿಸಿರುವುದು ಕಚ್ಚಾಡಲು ಕಿತ್ತಾಡಿಕೊಳ್ಳಲು ಅಲ್ಲ, ರಾಜ್ಯದಲ್ಲಿ ಸಮರ್ಪಕ ಮಳೆಯಾಗದೆ ರೈತರ ಸಾಲ ಸೂಲ ಮಾಡಿ ಕಂಗಾ ಲಾಗಿದ್ದಾರೆ. ಪ್ರಸ್ತುತ ಸಂದರ್ಬದಲ್ಲಿ ರಾಜ್ಯದ ಜನರಿಗೆ ದಿನಸಿ ವಸ್ತುಗಳ ಬೆಲೆ ಹೆಚ್ಚಾಗಿ ಬಡವರು ಸಂಕಷ್ಟದಲ್ಲಿದ್ದಾರೆ.

ಬಿಜೆಪಿ ಸರಕಾರ ಈ ಹಿಂದೆ ಆಡಳಿತ ಮಾಡುವಾಗ ಕಿಂಚ್ಚಿತ್ತೂ ಬಡವರ ದೀನದುರ್ಬಲರ ಬಗ್ಗೆ ಯಾವುದೇ ಯೋಜನೆಗಳು ಮಾಡದೆ ಧರ್ಮ ಜಾತಿಯ ಹೆಸರಿನಲ್ಲಿ ಆಡಳಿತ ಮಾಡಿದ್ದಾರೆ. ಇಂತಹ ಸರಕಾರವನ್ನು ರಾಜ್ಯದ ಜನತೆ ಕಿತ್ತೇಸೆದಿದ್ದಾರೆ ಇಂದು ಕಾಂಗ್ರೆಸ್ ಮುಖ್ಯ ಮಂತ್ರಿ ಸಿದ್ದರಾ ಮಯ್ಯನವರು ಈ ರಾಜ್ಯ ಕಂಡ ಅಪರೂಪದ ಮುಖ್ಯ ಮಂತ್ರಿ ಬಡವರ ಬಗ್ಗೆ ಅಪಾರ ಕಾಳಜಿ ಇರುವ ನಾಯಕ, ಬಿಜೆಪಿ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಅಭಿವೃದ್ದಿಯ ಯೋಜನೆಗಳಿಗೆ ಬರೇ ವಿರೋಧ ವ್ಯಕ್ತಪಡಿಸುವುದೇ ಒಂದು ಕೆಲಸವಾದರೆ ಹೇಗೆ ಕೊಟ್ಟ ಕುದುರೆ ಏರದವರು ಧೀರರು ಅಲ್ಲ ವೀರರು ಅಲ್ಲ ನಿಮ್ಮ ಅಧಿಕಾರದಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದ್ದೀರಿ.

ಇಂದು ದಲಿತ ವ್ಯಕ್ತಿಯೋಬ್ಬ ಸ್ಪೀಕರ್ ಆಗಿದ್ದಾರೆ ಎಂದರೆ ನಿಮ್ಮ ಮನುವಾದಿ ಬುದ್ದಿ ಸುಖಾ ಸುಮ್ಮನಾಗದೆ ಅಧಿವೇಶನ ನಡೇದಾಗ ಸ್ಪೀಕರ ಅವರ ಮೇಲೆ ಕಾಗದ ಚೂರು ಬಿಸಾಡಿ ಅಪಮಾನ ಮಾಡಿರುವ ನಿಮ್ಮ ಬಿಜೆಪಿ ಪಕ್ಷದ ನಡೇ ಇಡೀ ದಲಿತ ಸಮುದಾಯಕ್ಕೆ ಗೊತ್ತು ಇನ್ನಾದರೂ ವಿರೋಧ ಪಕ್ಷದ ನಾಯಕರು ಸದನದ ಘನತೆ ಗೌರವ ಕಾಪಾಡುವಂತಾಗಲಿ ಎಂದು ಜಂಟಿ ಹೇಳಿಕೆ ನೀಡಿದ್ದಾರೆ.

 

Leave a Reply

Your email address will not be published. Required fields are marked *