Wednesday, 23rd October 2024

Dasara 2024: ವಿಜಯದಶಮಿಯ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ನೋಡಿ ಕುತೂಹಲಕಾರಿ ವಿಷಯ!

Dasara 2024

ಬೆಂಗಳೂರು: ನವರಾತ್ರಿಯ ಹತ್ತನೇ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಆದರೆ ಈ ಆಚರಣೆಗಳು ಭಾರತದ ವಿವಿಧ ಪ್ರದೇಶಗಳಲ್ಲಿ ಭಿನ್ನವಾಗಿವೆ ವಿಜಯದಶಮಿಯನ್ನು ದಸರಾ(Dasara 2024) ಎಂದು ಸಹ ಕರೆಯಲಾಗುತ್ತದೆ. ಮೈಸೂರಿನಲ್ಲಿ ದಸರಾವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂತಹ ಶುಭ  ದಿನದ ಇತಿಹಾಸ ಮತ್ತು ಮಹತ್ವ ಮತ್ತು ಪೂಜೆ ಮತ್ತು ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ.

ಹಿಂದೂ ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ಅಶ್ವಿನಿ ತಿಂಗಳಲ್ಲಿ ಶುಕ್ಲ ಪಕ್ಷದ ದಶಮಿಯಂದು ಅಥವಾ ಮಹಾ ನವಮಿಯ ಮರುದಿನ ಅಥವಾ ಶಾರದಾ ನವರಾತ್ರಿಯ ಕೊನೆಯಲ್ಲಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್  12ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಮತ್ತು ಅಂದಿಗೆ  ನವರಾತ್ರಿ ಉತ್ಸವ ಅಂತ್ಯವಾಗುತ್ತದೆ.

Dasara 2024

ಇತಿಹಾಸ:
ವಿಜಯದಶಮಿ ಎಂದರೆ  ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸುವುದನ್ನು ಸೂಚಿಸುತ್ತದೆ. ಮತ್ತು ಹಿಂದೂ ಪುರಾಣಗಳಲ್ಲಿ ಈ ಹಬ್ಬಕ್ಕೆ ಸಂಬಂಧಿಸಿದ ಎರಡು ಕಥೆಗಳಿವೆ. ಒಂಬತ್ತು ದಿನಗಳಿಗಿಂತ ಹೆಚ್ಚು ಕಾಲ ನಡೆದ ಭೀಕರ ಯುದ್ಧದ ನಂತರ ದುರ್ಗಾದೇವಿ ಮಹಿಷಾಸುರನನ್ನು ಸೋಲಿಸಿದಳು ಎಂದು ಹೇಳಲಾಗುತ್ತದೆ. ಮತ್ತೊಂದು ಪುರಾಣದ ಪ್ರಕಾರ, ಲಂಕಾದ ಹತ್ತು ತಲೆಯ ರಾಕ್ಷಸ ರಾಜ ರಾವಣನ ವಿರುದ್ಧ ರಾಮನ ವಿಜಯವನ್ನು ಸಾಧಿಸಿದ ದಿನದಂದು ದಸರಾವನ್ನು ಆಚರಿಸಲಾಗುತ್ತದೆ ಎನ್ನುತ್ತಾರೆ.

ಮಹತ್ವ:
ನಮ್ಮ ದೇಶದ ಕೆಲವು ಭಾಗಗಳಲ್ಲಿ ವಿಜಯದಶಮಿ ಅಥವಾ ದಸರಾ ದೀಪಾವಳಿ ಆಚರಣೆಗೆ ದಾರಿ ಮಾಡಿಕೊಡುತ್ತದೆ ಎನ್ನಲಾಗುತ್ತದೆ. ಯಾಕೆಂದರೆ  ರಾವಣನನ್ನು ಸಂಹರಿಸಿ ವಿಜಯ ಸಾಧಿಸಿದ ರಾಮ ತನ್ನ ಅಯೋಧ್ಯೆಗೆ ಮರಳಿದಾಗ ಅಲ್ಲಿನ ಪ್ರಜೆಗಳು ದೀಪಾವಳಿಯನ್ನು ಆಚರಿಸಿದ್ದಾರೆ ಎನ್ನಲಾಗಿದೆ.  ಹಾಗಾಗಿ ವಿಜಯ ದಶಮಿ ಎನ್ನುವುದು  ಕೆಟ್ಟದ್ದರ ಮೇಲೆ ಗೆಲುವನ್ನು ಸಾಧಿಸುವ ದಿನವಾದ್ದರಿಂದ ಈ ದಿನವನ್ನು ಆಚರಿಸುವುದರಿಂದ ಜನರು ಸಮೃದ್ಧಿಯ ಜೊತೆಗೆ ಜೀವನದಲ್ಲಿ ಗೆಲುವನ್ನು ಸಾಧಿಸುತ್ತಾರೆ ಎನ್ನಲಾಗಿದೆ.

Dasara 2024

ಆಚರಣೆ:
ದೇಶದಾದ್ಯಂತ, ದಸರಾವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ ಮತ್ತು ಈ ದಿನ ರಾವಣನ ಪ್ರತಿಕೃತಿಯನ್ನು ಸುಡುವುದರೊಂದಿಗೆ ಈ ಹಬ್ಬ ಕೊನೆಗೊಳ್ಳುತ್ತದೆ. ರಾವಣನ ಪ್ರತಿಯೊಂದು ತಲೆಯು ಒಂದು ಕೆಟ್ಟ ಗುಣವನ್ನು ಸಂಕೇತಿಸುವುದರಿಂದ ದಸರಾ ಪಾಪಗಳು ಅಥವಾ ಕೆಟ್ಟ ಗುಣಗಳನ್ನು ತೊಲಗಿಸುತ್ತದೆ ಎನ್ನಲಾಗುತ್ತದೆ. ದೇಶದ ಕೆಲವು ಭಾಗಗಳಲ್ಲಿ ವಿಜಯದಶಮಿಯ ದಿನದಂದು ಶಮಿ ಮರವನ್ನು ಪೂಜಿಸುತ್ತಾರೆ. ಏಕೆಂದರೆ ಪಾಂಡವರಲ್ಲಿ ಒಬ್ಬನಾದ ಅರ್ಜುನ ತನ್ನ ವನವಾಸದ ಸಮಯದಲ್ಲಿ ಶಮಿ ಮರದ ಒಳಗೆ ತನ್ನ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದಾನೆ ಎಂದು ನಂಬಲಾಗಿದೆ. ಹಾಗೇ ವಿಜಯ ದಶಮಿಯಂದು, ಭಕ್ತರು ದುರ್ಗಾ ಮಾತೆ ವಿಗ್ರಹವನ್ನು ವಿಸರ್ಜನೆ ಮಾಡುವ ಮೂಲಕ ದೇವಿಗೆ ವಿದಾಯ ಹೇಳುತ್ತಾರೆ.

ಇದನ್ನೂ ಓದಿ:ನವರಾತ್ರಿಯ 9ನೇ ದಿನ ಪೂಜಿಸುವ ಸಿದ್ಧಿಧಾತ್ರಿಯ ಮಹತ್ವ ಹಾಗೂ ಪೂಜೆಯ ಬಗ್ಗೆ ಇಲ್ಲಿದೆ ಮಾಹಿತಿ

ದಸರಾ ಮತ್ತು ವಿಜಯದಶಮಿ ಎರಡೂ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತವೆ. ಹಾಗಾಗಿ ಭಕ್ತರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಆ ಮೂಲಕ ಜೀವನದ ಎಲ್ಲಾ ಕಾರ್ಯಗಳಲ್ಲೂ ಗೆಲುವನ್ನು ಸಾಧಿಸಿ.