Friday, 25th October 2024

Deepavali Fashion 2024: ದೀಪಾವಳಿ ಹಬ್ಬದ ದೇಸಿ ಫ್ಯಾಷನ್‌‌‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಎಥ್ನಿಕ್‌ ಡಿಸೈನರ್‌ವೇರ್ಸ್

Deepavali Fashion 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿ ಹಬ್ಬದ (Deepavali Fashion 2024) ದೇಸಿ ಫ್ಯಾಷನ್‌ನಲ್ಲಿ ಇದೀಗ ಗೋಲ್ಡನ್‌ ಎಥ್ನಿಕ್‌ ಡಿಸೈನರ್‌ವೇರ್‌ಗಳು ಟ್ರೆಂಡಿಯಾಗಿವೆ. ಗೋಲ್ಡನ್‌ ಶಿಮ್ಮರ್‌, ಗೋಲ್ಡನ್‌ ಥ್ರೆಡ್‌ ವರ್ಕ್‌, ಕಾಪರ್‌ ಗೋಲ್ಡ್‌, ಬಂಗಾರ ವರ್ಣದ ಎಂಬ್ರಾಯ್ಡರಿ, ನೆಟ್ಟೆಡ್‌, ಜಾರ್ಜೆಟ್‌, ಸಿಲ್ಕ್‌ ಸೇರಿದಂತೆ ನಾನಾ ಬಗೆಯ ಗೋಲ್ಡನ್‌ ವರ್ಣದ ಡಿಸೈನರ್‌ವೇರ್‌ಗಳು ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಡಿಸೈನರ್‌ಗಳ ಕೈ ಚಳಕದಲ್ಲಿ, ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ಚಿತ್ರಕೃಪೆ: ಪಿಕ್ಸೆಲ್‌

ರಾಯಲ್‌ ಲುಕ್‌ ನೀಡುವ ಗೋಲ್ಡನ್‌ ಲುಕ್‌

ರಾಯಲ್‌ ಲುಕ್‌ಗೆ ಮತ್ತೊಂದು ಹೆಸರು ಗೋಲ್ಡ್‌ ಡಿಸೈನರ್‌ವೇರ್‌ಗಳು. ಫ್ಯಾಷನಿಸ್ಟಾ ಜಿಯಾ ಹೇಳುವಂತೆ, ಗೋಲ್ಡನ್‌ ಲುಕ್‌ ನೀಡುವ ಡಿಸೈನರ್‌ವೇರ್‌ಗಳು, ಮೊದಲೆಲ್ಲಾ ಕೇವಲ ರಾಯಲ್‌ ಫ್ಯಾಮಿಲಿಗೆ ಮಾತ್ರ ಸೀಮಿತವಾಗಿದ್ದವು. ಅದರಲ್ಲೂ ಶ್ರೀಮಂತರು ಧರಿಸುವ ಉಡುಗೆಗಳಲ್ಲಿದ್ದವು. ಜನರೇಷನ್‌ ಬದಲಾದಂತೆ, ಇದೀಗ ಈ ಚಿತ್ರಣ ಕಂಪ್ಲೀಟ್‌ ಬದಲಾಗಿದೆ. ಸಾಮಾನ್ಯರು ಕೂಡ ಧರಿಸುವಂತಹ ಗೋಲ್ಡನ್‌ ಡಿಸೈನರ್‌ವೇರ್‌ಗಳು ಕಡಿಮೆ ಬೆಲೆಯಲ್ಲಿ ದೊರಕುತ್ತಿವೆ. ಎಲ್ಲಾ ಫ್ಯಾಷನ್‌ ವರ್ಗದವರ ಕೈಗೆಟಕುವಂತಾಗಿದೆ ಎನ್ನುತ್ತಾರೆ.

ಶಿಮ್ಮರ್‌ ಗೋಲ್ಡ್‌ ಡಿಸೈನರ್‌ವೇರ್ಸ್‌ ಜಾದೂ

ಮಿನುಗುವ ಶಿಮ್ಮರ್‌ ಡಿಸೈನರ್‌ವೇರ್‌ಗಳು ಜೆನ್‌ ಜಿ ಹುಡುಗಿಯರನ್ನು ಸೆಳೆದಿವೆ. ಅದರಲ್ಲೂ ಕ್ರಾಪ್‌ ಟಾಪ್‌ ಇರುವ ಗಾಗ್ರಾ, ಲೆಹೆಂಗಾ ಹಾಗೂ ಸ್ಕರ್ಟ್‌ಗಳು ಬೇಡಿಕೆ ಸೃಷ್ಟಿಸಿಕೊಂಡಿವೆ. ಇದೀಗ ಶಿಮ್ಮರ್‌ ಫ್ಯಾಬ್ರಿಕ್‌ನಲ್ಲಿರುವ ಗೋಲ್ಡ್‌ ಡಿಸೈನರ್‌ವೇರ್‌ ಮೇಲೆ ಲೈಟ್‌ ಆಗಿರುವ ಗೋಲ್ಡ್‌ ವರ್ಕ್‌ ಇದೀಗ ಪಾಪುಲರ್‌ ಆಗಿದೆ ಎನ್ನುತ್ತಾರೆ ಡಿಸೈನರ್‌ ರಂಜಿನಿ.

ಆಕರ್ಷಕ ಗೋಲ್ಡ್‌ ವರ್ಕ್‌

ಬಂಗಾರ ವರ್ಣದ ವರ್ಕ್‌ ವಿಷಯಕ್ಕೆ ಬಂದಲ್ಲಿ, ಗೋಲ್ಡನ್‌ ವರ್ಣದ ಡಿಸೈನರ್‌ವೇರ್‌ನಲ್ಲಿ ಸಾಕಷ್ಟು ಮಲ್ಟಿ ಡಿಸೈನ್ಸ್‌ ಪ್ರಚಲಿತದಲ್ಲಿವೆ. ಕಂಪ್ಲೀಟ್‌ ಗೋಲ್ಡ್‌ ಥ್ರೆಡ್‌ ವರ್ಕ್‌ ಇರುವಂತಹ ಹ್ಯಾಂಡ್‌ ಹಾಗೂ ಮೆಷಿನ್‌ ಎಂಬ್ರಾಯ್ಡರಿ, ಗೋಲ್ಡ್‌ ಕ್ರಿಸ್ಟಲ್‌ ಹಾಗೂ ಬಾರ್ಡರ್ಸ್ ವಿನ್ಯಾಸ, ಕ್ರಾಪ್‌ ಟಾಪ್‌, ಚೋಲಿ, ಲೆಹೆಂಗಾ, ಸ್ಲಿಟ್‌ ಎಥ್ನಿಕ್‌ ಗೌನ್‌, ಮ್ಯಾಕ್ಸಿ ಗೌನ್‌ಗಳಲ್ಲಿ ರಾರಾಜಿಸುತ್ತಿವೆ.

ಸೆಲೆಬ್ರೆಟಿ ಲುಕ್‌ಗೆ ಗೋಲ್ಡನ್‌ ಡಿಸೈನರ್‌ವೇರ್ಸ್

ಸಂತಸದ ವಿಚಾರವೆಂದರೆ, ಗೋಲ್ಡನ್‌ ಡಿಸೈನರ್‌ವೇರ್‌ಗಳು ಎಂತಹವರಿಗೂ ಸೆಲೆಬ್ರಿಟಿ ಲುಕ್‌ ನೀಡುತ್ತವೆ. ಆದರೆ, ಡಿಸೈನರ್‌ವೇರ್‌ ಆಯ್ಕೆ ಮಾಡಿಕೊಳ್ಳುವಾಗ ಗೋಲ್ಡನ್‌ ವರ್ಣವನ್ನು ಸೂಕ್ತ ಡಿಸೈನ್‌ಗೆ ಮ್ಯಾಚ್‌ ಮಾಡುವುದು ಅಗತ್ಯ. ಅದಕ್ಕಾಗಿ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಡಿಸೈನರ್‌ ರೀಟಾ.

ಈ ಸುದ್ದಿಯನ್ನೂ ಓದಿ | Deepavali Jewel Fashion: ದೀಪಾವಳಿ ದೇಸಿ ಲುಕ್‌ಗೆ ಬಂತು ಡಿಸೈನರ್‌ ಕ್ಲಿಪಾನ್‌ ಮೂಗುತಿ

ಗೋಲ್ಡ್‌ ಡಿಸೈನರ್‌ವೇರ್‌ ಪ್ರಿಯರಿಗೆ ಒಂದಿಷ್ಟು ಟಿಪ್ಸ್

  • ಕಾಪರ್‌ ಗೋಲ್ಡ್‌ ಡಿಸೈನರ್‌ವೇರನ್ನು ಆ್ಯಂಟಿಕ್‌ ಜ್ಯುವೆಲರಿಯೊಂದಿಗೆ ಧರಿಸಿದಲ್ಲಿ ರಾಯಲ್‌ ಲುಕ್‌ ಗ್ಯಾರಂಟಿ.
  • ಯಾವುದೇ ಕಾರಣಕ್ಕೂ ಎಥ್ನಿಕ್‌ ಟಚ್‌ ನೀಡುವ ಗೋಲ್ಡ್‌ ವರ್ಕ್‌ ಇರುವ ಡಿಸೈನರ್‌ವೇರ್‌ಗೆ ಫಂಕಿ ಆಕ್ಸೆಸರೀಸ್‌ ಸೂಟ್‌ ಆಗದು.
  • ಮೇಕಪ್‌ ಕೂಡ ಮ್ಯಾಚ್‌ ಆಗಬೇಕು. ಗ್ರ್ಯಾಂಡ್‌ ಇಲ್ಲವೇ ಸ್ಯಾಟಿನ್‌, ಮಿನರಲ್‌ ಮೇಕಪ್‌ ಮಾಡಿ. ನೋಡಲು ಆಕರ್ಷಕವಾಗಿ ಕಾಣುವುದು.
  • ಗೋಲ್ಡ್‌ ಡಿಸೈನರ್‌ವೇರ್‌ಗೆ ಆದಷ್ಟೂ ಬಂಗಾರದ ಅಭರಣಗಳನ್ನು ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)