-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಟ್ರೆಡಿಷನಲ್ ಫ್ಯಾಷನ್‌ನಲ್ಲಿ (Deepavali Fashion) ಇದೀಗ ನಾನಾ ವಿನ್ಯಾಸದ ರೇಷ್ಮೆಯ ಲೆಹೆಂಗಾಗಳು ಎಂಟ್ರಿ ನೀಡಿದ್ದು, ಜೆನ್ ಜಿ ಯುವತಿಯರನ್ನು ಆಕರ್ಷಿಸಿವೆ. ಪರಿಣಾಮ, ಹಬ್ಬದ ಸಂಭ್ರಮಕ್ಕೆ ಮ್ಯಾಚ್ ಆಗುವಂತಹ ನಾನಾ ಬಗೆಯ ಡಿಸೈನರ್ ರೇಷ್ಮೆ ಲೆಹೆಂಗಾಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.
ಆಕರ್ಷಕ ಲೆಹೆಂಗಾ ಡಿಸೈನ್ಸ್
ಅಂದಹಾಗೆ, ದೀಪಾವಳಿ ಹಬ್ಬ ಬೆಳಕಿನ ಹಬ್ಬ. ಕುಟುಂಬದವರು ಸೇರಿದಂತೆ, ಮನೆಯ ಹೆಣ್ಣು ಮಕ್ಕಳು ಒಟ್ಟಾಗಿ ಸಂಭ್ರಮಿಸುವ ಹಬ್ಬ. ಈ ಹಬ್ಬದಂದು ಕೆಲವರು ರೇಷ್ಮೆ ಸೀರೆ ಕೊಂಡರೇ, ಇನ್ನು ಕೆಲವರು ಟ್ರೆಡಿಷನಲ್‌ವೇರ್ ಖರೀದಿಸುತ್ತಾರೆ. ಮತ್ತೆ ಕೆಲವರು, ಕೊಂಚ ಫ್ಯಾಷೆನಬಲ್ ಆಗಿ ಕಾಣಿಸುವಂತಹ ಡಿಸೈನರ್‌ವೇರ್ ಮೊರೆ ಹೋಗುತ್ತಾರೆ. ಅಂತಹವರು ಟ್ರೆಡಿಷನಲ್ ಹಾಗೂ ಫ್ಯಾಷೆನಬಲ್ ಆಗಿ ಕಾಣಿಸುವಂತಹ ಮತ್ತು ಟ್ರೆಂಡಿಯಾಗಿರುವಂತಹ ರೇಷ್ಮೆಯ ಲೆಹೆಂಗಾಕ್ಕೆ ಸೈ ಎನ್ನುತ್ತಾರೆ.
ರೇಷ್ಮೆಯ ಫ್ಯಾಬ್ರಿಕ್‌ನ ಲೆಹೆಂಗಾ
ಅಂದಹಾಗೆ, ಈ ಲೆಹೆಂಗಾಗಳು ಸಾಮಾನ್ಯ ಫ್ಯಾಬ್ರಿಕ್‌ನದ್ದಲ್ಲ, ರೇಷ್ಮೆಯವು. ಇನ್ನು, ಇವುಗಳೊಂದಿಗೆ ಸೆಮಿ ರೇಷ್ಮೆ ಹಾಗೂ ಸಿಲ್ಕ್ ಮಿಕ್ಸ್ ನಲ್ಲೂ ಬಂದಿವೆ. ಇವುಗಳ ಡಿಸೈನ್ ಲೆಹೆಂಗಾದಂತೆಯೇ ಇದ್ದರೂ ಫ್ಯಾಬ್ರಿಕ್ ದೇಸಿ ರೇಷ್ಮೆ ಯಾಗಿರುವುದರಿಂದ ನೋಡಲು ಸಾಂಪ್ರದಾಯಿಕ ಲುಕ್ ನೀಡುವುದರೊಂದಿಗೆ ಹಬ್ಬಕ್ಕೆ ಗ್ರ್ಯಾಂಡ್ ಆಗಿಯೂ ಕಾಣಿಸುತ್ತದೆ ಎನ್ನುತ್ತಾರೆ ದೀಪ್ತಿ ಮೋಹನ್.
ಟ್ರೆಂಡಿಯಾಗಿರುವ ರೇಷ್ಮೆಯ ಲೆಹೆಂಗಾ
ಈ ಫೆಸ್ಟಿವ್ ಸೀಸನ್‌ನಲ್ಲಿ, ಕಾಂಚೀವರಂ, ಧರ್ಮಾವರಂ, ಗಾರ್ಡನ್ ರೇಷ್ಮೆ, ಬಾರ್ಡರ್ ರೇಷ್ಮೆ ಸೀರೆಯ ಲೆಹೆಂಗಾಗಳು ಟ್ರೆಂಡಿಯಾಗಿವೆ. ಬಹುತೇಕ ಸೆಮಿ ಸ್ಟಿಚ್‌ನಲ್ಲಿ ದೊರೆಯುವ ಇವನ್ನು ಅವರವರ ಬಾಡಿ ಫಿಟ್‌ಗೆ ಅನುಗುಣವಾಗಿ ಧರಿಸಬೇಕು. ಬ್ಲೌಸ್ ಹಾಗೂ ಲಂಗಕ್ಕೆ ಹಾಫ್ ಸೀರೆಯಂತೆಯೂ ಧರಿಸಬಹುದು ಎನ್ನುತ್ತಾರೆ ಡಿಸೈನರ್ಸ್.
ಸೆಮಿ ಸಿಲ್ಕ್ ಲೆಹೆಂಗಾ
ಊಹೆಗೂ ಮೀರಿದ ಡಿಸೈನ್ ಹಾಗೂ ಪ್ರಿಂಟ್ಸ್‌ನಲ್ಲಿ ಇವು ದೊರೆಯುತ್ತವೆ. ಇನ್ನು, ದುಬಾರಿ ಬೆಲೆಯ ಶುದ್ಧ ರೇಷ್ಮೆಯ ದಾವಣಿ-ಲಂಗ ಖರೀದಿಸಲು ಸಾಧ್ಯವಿಲ್ಲದವರು, ಸೆಮಿ ಸಿಲ್ಕ್‌ನಲ್ಲಿ ದೊರೆಯುವ ಸೆಟ್‌ನಲ್ಲೂ ರೇಷ್ಮೆ ಲೆಹೆಂಗಾ ಹೊಲೆಸಬಹುದು ಎನ್ನುತ್ತಾರೆ ಡಿಸೈನರ್ಸ್.
ಈ ಸುದ್ದಿಯನ್ನೂ ಓದಿ | Reliance Jio: ದೀಪಾವಳಿ ಆಫರ್, ಭಾರಿ ಡಿಸ್ಕೌಂಟ್; ಕೇವಲ 699 ರೂ.ಗೆ ಸಿಗಲಿದೆ ಜಿಯೋ ಭಾರತ್ 4 ಜಿ ಫೋನ್!
ರೇಷ್ಮೆಯ ಲೆಹೆಂಗಾದ ಆಯ್ಕೆ ಹೀಗಿರಲಿ
ಅವರವರ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿ.
ಬ್ರೋಕೆಡ್, ಬುಟ್ಟಾ ಡಿಸೈನ್‌ನವು ಟ್ರೆಡಿಷನಲ್ ಆಗಿ ಕಾಣುತ್ತವೆ.
ಮೇಕಪ್, ಹೇರ್‌ಸ್ಟೈಲ್ ಎಲ್ಲವೂ ಎಥ್ನಿಕ್ ಲುಕ್‌ಗೆ ಮ್ಯಾಚ್ ಆಗಬೇಕು.
ಮಾನೋಕ್ರೋಮ್ ಶೇಡ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)