-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದಲ್ಲಿ ಪುರುಷರನ್ನು ಅಂದಗಾಣಿಸಲು ಈಗಾಗಲೇ ನಾನಾ ಬಗೆಯ ವೈವಿಧ್ಯಮಯ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ (Deepavali Mens Fashion) ಕಾಲಿಟ್ಟಿವೆ. ಪಕ್ಕಾ ದೇಸಿ ಟಿಪಿಕಲ್ ಲುಕ್ ನೀಡುವಂತಹ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿದ್ದು, ಮಧ್ಯ ವಯಸ್ಕ ಪುರುಷರಿಂದಿಡಿದು, ಯುವಕರನ್ನು ಸೆಳೆದಿವೆ. ಇವುಗಳಲ್ಲಿ, ಎಂಬ್ರಾಯ್ಡರಿ ಕಾಲರ್ಡ್ ಕುರ್ತಾ, ಸಿಕ್ವೀನ್ಸ್ ಶೆರ್ವಾನಿ, ಶೈನಿಂಗ್ ಜುಬ್ಬಾ-ಪೈಜಾಮ ಸೇರಿದಂತೆ ಮಿನುಗುವ ಉಡುಗೆಗಳು ಮೆನ್ಸ್ ಫ್ಯಾಷನ್‌ನಲ್ಲಿ ಸದ್ಯ ಟಾಪ್ ಕೆಟಗರಿಯಲ್ಲಿ ಮಾರಾಟವಾಗುತ್ತಿವೆ ಎನ್ನುತ್ತಾರೆ ಶಾಪಿಂಗ್ ಸೆಂಟರ್‌ವೊಂದರ ಮ್ಯಾನೇಜರ್ ರಾಘವ್ ವರ್ಮಾ.
ಡಿಸೈನರ್ ಕಾಲರ್ಡ್ ಕುರ್ತಾ
ಡಿಸೈನ್ ಹೊಂದಿದ ಕಾಲರ್ಡ್ ಕುರ್ತಾಗಳು ಈ ಬಾರಿಯ ಮೆನ್ಸ್ ಫ್ಯಾಷನ್‌ನ ಹಿಟ್ ಲಿಸ್ಟ್‌ನಲ್ಲಿವೆ. ವಿಂಟರ್ ಸೀಸನ್‌ಗೂ ಸೂಟ್ ಆಗುವಂತಹ ಹಾಗೂ ಇತರೇ ಸಮಾರಂಭಗಳಿಗೂ ಧರಿಸಬಹುದಾದ ಡಿಸೈನ್‌ನವು ಸೆಟ್‌ನಲ್ಲಿ ಟ್ರೆಂಡಿಯಾಗಿವೆ.
ಯುವಕರನ್ನು ಸೆಳೆದ ಸಿಕ್ವಿನ್ಸ್ ಶೆರ್ವಾನಿ
ಕಲರ್ ಕಲರ್‌ನ ಸಿಕ್ವಿನ್ಸ್ ಶೆರ್ವಾನಿಗಳು ಈ ಫೆಸ್ಟಿವ್ ಸೀಸನ್‌ನಲ್ಲಿ ಸಿಂಪಲ್ ಡಿಸೈನ್‌ನಲ್ಲಿ ಬಿಡುಗಡೆಯಾಗಿವೆ. ಸರಳ ಕುಸುರಿ ಚಿತ್ತಾರವಿರುವ ಕಾಲರ್‌ನ್ನೊಳಗೊಂಡ ಈ ಶೆರ್ವಾನಿಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಕಾಂಟ್ರಸ್ಟ್ ವರ್ಣದವು ಚಾಲ್ತಿಯಲ್ಲಿವೆ.
ಜಬರ್ದಸ್ತ್ ಜುಬ್ಬಾ ಜಾದೂ
ಶೈನಿಂಗ್ ಇರುವಂತಹ ರೇಷ್ಮೆಯ ಜುಬ್ಬಾ -ಪೈಜಾಮಾಗಳು ಈ ಹಬ್ಬಕ್ಕೆ ಎಂಟ್ರಿ ನೀಡಿವೆ. ಇವು ನೋಡಲು ಪಕ್ಕಾ ಟಿಪಿಕಲ್ ಲುಕ್ ನೀಡುತ್ತವೆ. ಇನ್ನು, ಬಾದಾಮಿ ವರ್ಣದ, ಕ್ರೀಮ್ ಶೇಡ್ಸ್‌ನ ಜುಬ್ಬಾ-ಪೈಜಾಮ, ಧೋತಿಗಳು ಬೆಳಕಿನ ಹಬ್ಬಕ್ಕೆ ಹೇಳಿಮಾಡಿಸಿದಂತಿವೆ. ಪೂಜಾ ಸಮಯಕ್ಕೆ ಹೇಳಿ ಮಾಡಿಸಿದಂತಹ ಲುಕ್ ಹುಡುಗರಿಗೆ ನೀಡುತ್ತವೆ ಎನ್ನುತ್ತಾರೆ ಡಿಸೈನರ್ ಧವನ್.
ಈ ಸುದ್ದಿಯನ್ನೂ ಓದಿ | Reliance Jio: ದೀಪಾವಳಿ ಆಫರ್, ಭಾರಿ ಡಿಸ್ಕೌಂಟ್; ಕೇವಲ 699 ರೂ.ಗೆ ಸಿಗಲಿದೆ ಜಿಯೋ ಭಾರತ್ 4 ಜಿ ಫೋನ್!
ಮೆನ್ಸ್ ದೇಸಿ ಫ್ಯಾಷನ್‌ಗೆ ಸಿಂಪಲ್ ಟಿಪ್ಸ್
ಧರಿಸುವ ದೇಸಿ ಉಡುಪುಗಳಿಗೆ ಅವರ ಹೇರ್‌ಸ್ಟೈಲ್ ಹಾಗೂ ಚಪ್ಪಲಿ ಮ್ಯಾಚ್ ಆಗಬೇಕು. ಸ್ಪೋರ್ಟ್ಸ್ ಶೂ ಧರಿಸಕೂಡದು.
ಉಡುಪು ತೀರಾ ದೊಗಲೆಯಾಗಿರಕೂಡದು. ಸ್ಲೀವ್ ಮುಂಗೈ ಮುಟ್ಟಕೂಡದು.
ಜುಬ್ಬಾ ಅಥವಾ ಕುರ್ತಾ ಉದ್ದವಾಗಿರಬಾರದು. ಉದ್ದವಾಗಿದ್ದಲ್ಲಿ, ಹುಡುಗಿಯರ ಚೂಡಿದಾರ್‌ನಂತೆ ಕಾಣಬಹುದು.
ಧೋತಿ ಕೂಡ ಕಾಲಿಗೆ ಸಿಕ್ಕಕೂಡದು. ಕಾಲರ್ ಇಲ್ಲದಿದ್ದರೇ ಗೋಲ್ಡ್ ಚೈನ್ ಧರಿಸಬಹುದು.
ಫಂಕಿ ಹೇರ್‌ಸ್ಟೈಲ್ ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)