Friday, 22nd November 2024

Deepavali Party Fashion: ತಾರೆಯರ ದೀಪಾವಳಿ ಪಾರ್ಟಿಯಲ್ಲಿ ಮಿನುಗಿದ ಎಥ್ನಿಕ್‌ ವೇರ್ಸ್!

Deepavali Party Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ನಲ್ಲಿ ದೀಪಾವಳಿ ಹಬ್ಬಕ್ಕೆ (Deepavali Party Fashion) ಮುನ್ನ ನಡೆಯುತ್ತಿರುವ ಪ್ರಿ- ದೀಪಾವಳಿ ಬ್ಯಾಶ್‌, ಸೆಲೆಬ್ರೇಷನ್‌ ಪಾರ್ಟಿಗಳಲ್ಲಿ ಬಾಲಿವುಡ್‌ ನಟ-ನಟಿಯರು ವೈವಿಧ್ಯಮಯ ಡಿಸೈನರ್‌ವೇರ್‌ಗಳಲ್ಲಿ ಮಿರ ಮಿರ ಮಿನುಗುತ್ತಿದ್ದಾರೆ. ಈ ಮೂಲಕ ಮುಂಬರುವ ಫೆಸ್ಟಿವ್‌ ಸೀಸನ್‌ ಎಥ್ನಿಕ್‌ವೇರ್ಸ್ ಫ್ಯಾಷನ್‌ ಟ್ರೆಂಡ್‌ಗೆ ನಾಂದಿಯಾಡಿದ್ದಾರೆ.

ಹಿರಿಯ ನಟಿಯರಾದ ರೇಖಾ, ಶಬಾನಾ ಅಜ್ಮಿ ಅವರೊಂದಿಗೆ ಮನೀಶ್ ಮಲ್ಹೋತ್ರಾ
ಬಾಲಿವುಡ್‌ ನಟಿ ಜಾನ್ವಿ ಕಪೂರ್‌.

ಪ್ರಿ-ದೀಪಾವಳಿ ಪಾರ್ಟಿಗಳಲ್ಲಿ ಎಥ್ನಿಕ್‌ವೇರ್ಸ್ ಅನಾವರಣ

ಅಂದಹಾಗೆ, ಪ್ರತಿವರ್ಷ ನಾನಾ ಬಾಲಿವುಡ್‌ ಸೆಲೆಬ್ರೆಟಿಗಳ ಹಾಗೂ ನಟ-ನಟಿಯರ ಮನೆಗಳಲ್ಲಿ ನಡೆಯುವ ದೀಪಾವಳಿ ಪಾರ್ಟಿಗಳು, ಹಬ್ಬಕ್ಕೂ ಮುನ್ನವೇ ಆರಂಭವಾಗುತ್ತದೆ. ಇಲ್ಲಿ, ಎಲ್ಲರೂ ಧರಿಸುವ ಉಡುಗೆ-ತೊಡುಗೆಗಳಿಗಷ್ಟೇ ಪ್ರಾಧಾನ್ಯತೆ. ಅದರಲ್ಲೂ ವೆಸ್ಟರ್ನ್ ಔಟ್‌ಫಿಟ್‌ಗೆ ತಾತ್ಕಲಿಕವಾಗಿ ವಿರಾಮ ಹಾಕಿ, ಎಲ್ಲರೂ ಇಂಡಿಯನ್‌ವೇರ್‌ಗಳಿಗೆ ಆದ್ಯತೆ ನೀಡುತ್ತಾರೆ. ಇದು ಪ್ರತಿವರ್ಷ ತಪ್ಪದೇ ನಡೆಯುತ್ತದೆ. ನಾನಾ ಬಗೆಯ ಡಿಸೈನರ್‌ವೇರ್‌ಗಳ ಅನಾವರಣವಾಗುತ್ತದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಡಿಸೈನರ್‌ ಮನೀಶ್ ಮಲ್ಹೋತ್ರಾ ಅವರೊಂದಿಗೆ ಬಾಲಿವುಡ್‌ ನಟ-ನಟಿಯರು.
ಸಹ ನಟರೊಂದಿಗೆ ತಮನ್ನಾ

ಮಿನುಗುವ ಡಿಸೈನರ್‌ವೇರ್ಸ್

ಇದಕ್ಕೆ ಪೂರಕ ಎಂಬಂತೆ, ಈ ಬಾರಿ ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಆಯೋಜಿಸಿದ್ದ ಈ ದೀಪಾವಳಿ ಬ್ಯಾಶ್‌ ಹೆಸರಿನ ಫೆಸ್ಟಿವ್‌ ಸೀಸನ್‌ ಪಾರ್ಟಿಯಲ್ಲಿ, ನಟ-ನಟಿಯರು ಈ ಫೆಸ್ಟಿವ್‌ ಸೀಸನ್‌ ಟ್ರೆಂಡ್‌ಗೆ ಲಗ್ಗೆ ಇಡಲಿರುವ ನಾನಾ ಬಗೆಯ ಜಗಮಗಿಸುವ ಶೈನಿಂಗ್‌, ಸಿಕ್ವೀನ್ಸ್ ಹಾಗೂ ಶಿಮ್ಮರಿಂಗ್‌ ಔಟ್‌ಫಿಟ್‌ಗಳಲ್ಲಿ ಕಂಗೊಳಿಸಿದರು. ಸದಾ ಗ್ಲಾಮರಸ್‌ ಹಾಗೂ ವೆಸ್ಟರ್ನ್ ಔಟ್‌ಫಿಟ್ಸ್‌ನಲ್ಲಿ ಕಾಣಿಸಿಕೊಳ್ಳುವ ತಾರೆಯರು, ಈ ಪಾರ್ಟಿಯಲ್ಲಿ ಮಾತ್ರ ಎಥ್ನಿಕ್‌ ಲುಕ್‌ನಲ್ಲಿ ಮಿಂಚಿದರು.

ಕರಣ್ ಜೋಹರ್ ತಂಡದೊಂದಿಗೆ.
ಕಿಯಾರಾ ಮತ್ತು ಸಿದ್ಧಾರ್ಥ್‌ ಮಲ್ಹೋತ್ರಾ
ಬಾಲಿವುಡ್‌ ನಟಿ ಕರೀಷ್ಮಾ ಕಪೂರ್‌
ಬಾಲಿವುಡ್‌ ನಟಿ ಅಲಿಯಾ ಭಟ್‌

ಬಾಲಿವುಡ್‌ ತಾರೆಯರ ಮಿಂಚಿಂಗ್‌

ಬಾಲಿವುಡ್‌ ನಟ-ನಟಿಯರಾದ ಜೆನಿಲಿಯಾ-ರಿತೇಶ್‌ ದೇಶ್‌ಮುಖ್‌, ಜಾನ್ವಿ, ಖುಷಿ ಕಪೂರ್‌, ವರುಣ್‌ ದವನ್‌ ದಂಪತಿ, ಓರಿ, ಅದಿತ್ಯಾ ರಾಯ್‌ ಕಪೂರ್‌, ಅನನ್ಯಾ ಪಾಂಡೇ, ಅಲಿಯಾ ಭಟ್‌, ಕಿಯಾರಾ ದಂಪತಿ, ಹಿರಿಯ ನಟಿ ರೇಖಾ, ತೃಪ್ತಿ ದಿಮ್ರಿ, ಕರೀಷ್ಮಾ, ತಮನ್ನಾ, ಶಾರ್ವರಿ ಸೇರಿದಂತೆ ಸಾಕಷ್ಟು ನಟ-ನಟಿಯರು ಈ ಪಾರ್ಟಿಯಲ್ಲಿ ಪಾಲ್ಗೊಂಡು ತಮ್ಮ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ಇವರಲ್ಲಿ ಒಬ್ಬರಿಗಿಂತ ಒಬ್ಬರ ಉಡುಪು ಹೈಲೈಟ್‌ ಆಗುತ್ತಿತ್ತು. ಅಲ್ಲದೇ, ಕೆಲವರು ಸೀರೆ, ರೆಡಿ ಸೀರೆಯಲ್ಲಿ ಕಂಗೊಳಿಸಿದರೆ, ಇನ್ನು ಕೆಲವರು ಶಿಮ್ಮರಿಂಗ್‌ ಇಂಡೋ-ವೆಸ್ಟರ್ನ್‌ವೇರ್‌ಗಳಲ್ಲಿ ಕಾಣಿಸಿಕೊಂಡರು. ನಟರು ಗ್ರ್ಯಾಂಡ್‌ ಶೆರ್ವಾನಿ, ಕುರ್ತಾ ಪೈಜಾಮಗಳಲ್ಲಿ ಕಾಣಿಸಿಕೊಂಡರು.

ಈ ಸುದ್ದಿಯನ್ನೂ ಓದಿ | MB Patil: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹೈಟೆಕ್ ಫಾರ್ಮಸುಟಿಕಲ್ಸ್ ಪಾರ್ಕ್

ವೈವಿಧ್ಯಮಯ ಸೀರೆ-ಲೆಹೆಂಗಾ-ಶರಾರಗಳ ಪ್ರದರ್ಶನ

ಇಂತಹ ದೀಪಾವಳಿ ಪಾರ್ಟಿಗಳಲ್ಲಿ ಸೆಲೆಬ್ರೆಟಿ ಡಿಸೈನರ್‌ಗಳ ಎಕ್ಸ್ ಕ್ಲೂಸೀವ್‌ ಸೀರೆಗಳು, ಲೆಹೆಂಗಾಗಳು, ಗಾಗ್ರಾ, ರೆಡಿ ಸೀರೆಗಳು, ಶರಾರ ಸೇರಿದಂತೆ ನಾನಾ ಬಗೆಯ ಡಿಸೈನರ್‌ವೇರ್‌ಗಳು ಭಾಗವಹಿಸುವ ನಟ-ನಟಿಯರ ಮುಖಾಂತರ ಪ್ರದರ್ಶನಗೊಳ್ಳುತ್ತವೆ. ಇವರೆಲ್ಲರೂ ಇಲ್ಲಿ ಧರಿಸುವ ಡಿಸೈನರ್‌ವೇರ್‌ಗಳು ಹಬ್ಬದ ಸೀಸನ್‌ನಲ್ಲಿ ಟ್ರೆಂಡಿಯಾಗುತ್ತವೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್‌ ನೈನಾ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)