-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬಕ್ಕೆ ನಿಮ್ಮ ಮನೆಯ ಮುದ್ದು ಶ್ವಾನಗಳು ಕೂಡ ಫ್ಯಾಷೆನಬಲ್ (Deepavali Pet Fashion) ಆಗಿ ಕಾಣಿಸಬಹುದು. ಹೌದು, ಅದು ಹೇಗೆ ಅಂತಿರಾ! ಈಗಾಗಲೇ ಪೆಟ್ ಡಿಸೈನಿಂಗ್ ಲೋಕದಲ್ಲಿ ಕ್ಯೂಟ್ ಶ್ವಾನಗಳಿಗೆ ಹಬ್ಬದಂದು ಹಾಕಿ ಸಿಂಗರಿಸಬಹುದಾದ ನಾನಾ ಡಿಸೈನ್‌ನ ವೈವಿಧ್ಯಮಯ ಕಲರ್‌ಫುಲ್ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳು ಎಂಟ್ರಿ ನೀಡಿವೆ. ಹಾಗಾದಲ್ಲಿ, ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಜುಜು ಪೆಟ್‌ಜೋನ್‌ನ ಪೆಟ್ ಡಿಸೈನರ್ ಅನಿತಾ ನಾಯಕ್ ತಿಳಿಸಿದ್ದಾರೆ.
ಪೆಟ್ ಡಿಸೈನರ್ ಅಭಿಪ್ರಾಯ ಹೀಗಿದೆ
“ಇಂದು ಮುದ್ದು ಶ್ವಾನಗಳು ಸಾಕಷ್ಟು ಕುಟುಂಬದ ಒಂದು ಭಾಗವಾಗತೊಡಗಿವೆ. ಅವನ್ನು ಮಕ್ಕಳಂತೆ ನೋಡಿಕೊಳ್ಳುವುದು ಮಾತ್ರವಲ್ಲ, ಹಬ್ಬ-ಹರಿದಿನಗಳಲ್ಲಿ ತಮ್ಮಂತೆಯೇ ಅವಕ್ಕೂ ಕೂಡ ಎಥ್ನಿಕ್‌ವೇರ್ ಹಾಕಿ ಸಂಭ್ರಮ ಪಡುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಫೆಸ್ಟಿವ್ ಸೀಸನ್‌ಗೆ ಹೊಂದುವಂತಹ ನಾನಾ ಬಗೆಯ ಗ್ರ್ಯಾಂಡ್ ಎಥ್ನಿಕ್ ಹಾಗೂ ಟ್ರೆಡಿಷನಲ್ ಡಿಸೈನರ್‌ವೇರ್‌ಗಳು ಈಗಾಗಲೇ ಆಗಮಿಸಿವೆ. ನೋಡುಗರ ಕಣ್ಮನ ಸೆಳೆಯುತ್ತಿವೆ” ಎನ್ನುತ್ತಾರೆ ಅನಿತಾ ನಾಯಕ್.
ಟ್ರೆಂಡಿಯಾಗಿರುವ ಪೆಟ್ ಡಿಸೈನರ್‌ವೇರ್‌ಗಳು
ದೀಪಾವಳಿ ಹಬ್ಬಕ್ಕೆ ಸಾಥ್ ನೀಡುವಂತಹ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳಲ್ಲಿ ಇದೀಗ ಡಾಗಿಗಳ ಬ್ರೋಕೆಡ್ ಕುರ್ತಾ, ಲೆಹೆರಿಯಾ ಕುರ್ತಾ, ಪ್ರಿಂಟೆಡ್ ಕುರ್ತಾ, ಸಾಫ್ಟ್ ಸಿಲ್ಕ್ ಸ್ಕಾಟರ್ಸ್, ಶೆರ್ವಾನಿ, ಹೆರಿಟೇಜ್ ಲುಕ್ ನೀಡುವ ಟ್ರೆಡಿಷನಲ್‌ವೇರ್ಸ್, ಕಲರ್‌ಫುಲ್ ಬಾರ್ಡರ್ ಫ್ರಾಕ್ಸ್, ಕ್ರಾಸ್ ಬಾಡಿ ಚೋಲಿ ವಿತ್ ಲೆಹೆಂಗಾ, ಬಾಂದನಿ ಡ್ರೆಸ್, ಬೋ ಟೈ, ಸಿಲ್ಕ್ ಶರ್ಟ್, ಜಾರ್ಜೆಟ್ ಶರ್ಟ್, ಫ್ರಾಕ್ ಹೀಗೆ ಆಯಾ ಮುದ್ದು ಶ್ವಾನಗಳಿಗೆ ಹೊಂದುವಂತಹ ಹಾಗೂ ಬ್ರೀಡ್‌ಗೆ ಮ್ಯಾಚ್ ಆಗುವಂತಹ ವೈವಿಧ್ಯಮಯ ಸ್ಟೈಲಿಶ್ ಟ್ರೆಡಿಷನಲ್‌ವೇರ್‌ಗಳು ಬಂದಿದ್ದು, ಹಬ್ಬಕ್ಕೂ ಮುನ್ನವೇ ಟ್ರೆಂಡಿಯಾಗಿವೆ ಎನ್ನುತ್ತಾರೆ ಡಿಸೈನರ್.
ಮುದ್ದು ಶ್ವಾನಗಳ ಎಥ್ನಿಕ್‌ವೇರ್ ಆಯ್ಕೆ ಹಾಗೂ ಸ್ಟೈಲಿಂಗ್‌ಗೆ 7 ಸೂತ್ರ
ನಿಮ್ಮ ಮುದ್ದು ಶ್ವಾನಗಳನ್ನು ಸಿಂಗರಿಸುವುದಾದಲ್ಲಿ ಆದಷ್ಟೂ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಎಕ್ಸ್‌ಪರ್ಟ್ಸ್. ಈ ಕುರಿತಂತೆ ಇಲ್ಲಿದೆ ಒಂದಿಷ್ಟು ಸಿಂಪಲ್ ಸಲಹೆ ಹಾಗೂ ಸ್ಟೈಲಿಂಗ್ ಐಡಿಯಾಗಳು.
ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ
ಶ್ವಾನದ ಆಕಾರಕ್ಕೆ ತಕ್ಕಂತೆ ಡಿಸೈನರ್‌ವೇರ್ ಆಯ್ಕೆ ಮಾಡಿ.
ಶ್ವಾನಕ್ಕೆ ಡ್ರೆಸ್ ಆಯ್ಕೆ ಮಾಡುವಾಗ ಡಿಸೈನರ್‌ಗಳ ನೆರವು ಪಡೆಯಿರಿ.
ಸಾಫ್ಟ್ ಫ್ಯಾಬ್ರಿಕ್‌ನ ಡಿಸೈನರ್‌ವೇರ್ ಆಯ್ಕೆ ಉತ್ತಮ.
ಪುಟ್ಟ ಶ್ವಾನಗಳಿಗೆ ಕ್ಯೂಟ್ ಲುಕ್ ನೀಡಿ.
ಟ್ರೆಂಡಿಯಾಗಿರುವ ಡ್ರೆಸ್‌ಗಳನ್ನು ಸೆಲೆಕ್ಟ್ ಮಾಡಿ.
ಶ್ವಾನಕ್ಕೆ ತಕ್ಕಂತೆ ಕಸ್ಟಮೈಸ್ಡ್ ಕೂಡ ಮಾಡಿಸಬಹುದು.
ಫಿಟ್ ಆಗಿ ಕೂರುವಂತಹ ಡಿಸೈನರ್‌ವೇರ್ ಅಂದವಾಗಿ ಕಾಣಿಸುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)