-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ದೀಪಾವಳಿ ಫೆಸ್ಟಿವ್ ಸೀಸನ್ ಶಾಪಿಂಗ್ (Deepavali Shopping 2024) ಕ್ರೇಝ್ ವೀಕೆಂಡ್‌ಗೆ ಮುನ್ನವೇ ಎಲ್ಲೆಡೆ ಶುರುವಾಗಿದೆ. ದೊಡ್ಡ ನಗರಗಳ ಮಾಲ್‌ಗಳಲ್ಲಿ ಮಾತ್ರವಲ್ಲ, ಬೀದಿ ಬದಿಯ ಶಾಪಿಂಗ್ ಸೆಂಟರ್‌ಗಳಲ್ಲಿ, ಸ್ಟ್ರೀಟ್‌ಸೈಡ್‌ನ ಚಿಕ್ಕ-ಪುಟ್ಟ ಶಾಪ್‌ಗಳಲ್ಲಿ- ಅಂಗಡಿಗಳಲ್ಲೂ ಹಬ್ಬದ ಶಾಪಿಂಗ್ ಮೇನಿಯಾ ಹರಡಿದೆ. ಇದಕ್ಕೆ ಪೂರಕ ಎಂಬಂತೆ, ಹಬ್ಬದ ರಂಗು ಹೆಚ್ಚಿಸುವ ಟ್ರೆಡಿಷನಲ್ ವೇರ್‌ಗಳು, ಸೀರೆಗಳು, ಆಭರಣಗಳು, ಪೂಜಾ ಸಾಮಾಗ್ರಿಗಳು, ನಾನಾ ಬಗೆಯ ಗೃಹಾಲಂಕಾರದ ಸಾಮಗ್ರಿಗಳು ಸೇರಿದಂತೆ ಎಲ್ಲವೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೀಪಾವಳಿ ಸೇಲ್ ಟ್ಯಾಗ್‌ಲೈನ್‌ನೊಂದಿಗೆ ಸಾಕಷ್ಟು ಡಿಸ್ಕೌಂಟ್ಸ್, ಭರಪೂರ ಆಫರ್ಸ್ ನೀಡಿ ಗ್ರಾಹಕರನ್ನು ಆಕರ್ಷಿಸಲಾಗುತ್ತಿದೆ.
ಬೆಳಕಿನ ಹಬ್ಬಕ್ಕೆ ಗ್ರ್ಯಾಂಡ್ ಎಥ್ನಿಕ್‌ವೇರ್ಸ್
ಬೆಳಕಿನ ಹಬ್ಬ ದೀಪಾವಳಿಗೆ ಸೆಲೆಬ್ರೆಟಿ ಲುಕ್ ನೀಡುವಂತಹ ವೈವಿಧ್ಯಮಯ ಗ್ರ್ಯಾಂಡ್ ಎಥ್ನಿಕ್‌ವೇರ್ಸ್ ಕಾಲಿಟ್ಟಿವೆ. ಮಹಿಳೆಯರಿಗಾಗಿ ಸಿಲ್ಕ್, ಜರತಾರಿ, ಜರ್ದೋಸಿ, ಎಂಬ್ರಾಯ್ಡರಿ ಸೇರಿದಂತೆ ಮಿರಮಿರ ಮಿನುಗುವಂತಹ ಡಿಸೈನರ್‌ವೇರ್‌ಗಳು ಹಾಗೂ ಸೀರೆಗಳು ಎಲ್ಲೆಡೆ ಜಗಮಗಿಸುತ್ತಿವೆ.
ಮೆನ್ಸ್ ವೇರ್ ಝಲಕ್
ಇನ್ನು, ಮೆನ್ಸ್ ಎಥ್ನಿಕ್‌ವೇರ್ ಕೆಟಗರಿಯಲ್ಲಿ ಸಿಕ್ವಿನ್ಸ್ ಶೆರ್ವಾನಿ, ಶೈನಿಂಗ್ ಶಿಮ್ಮರಿಂಗ್ ಧೋತಿ, ಮಿರರ್ ಮಲ್ಟಿ ಶೇಡ್ ಬಂದಗಾಲದಂತಹ ಇಂಡೋ-ವೆಸ್ಟರ್ನ್ ಶೈಲಿಯ ಗ್ರ್ಯಾಂಡ್ ಎಥ್ನಿಕ್‌ವೇರ್ಸ್ ಆಗಮಿಸಿವೆ.
ಹುಡುಗಿಯರ ಡಿಸೈನರ್‌ವೇರ್ ಕ್ರೇಜ್
ಟೀನೇಜ್ ಹುಡುಗಿಯರಿಗೆಂದೇ ಬಗೆಬಗೆಯ ಕ್ರಾಪ್, ಲೈಟ್‌ವೈಟ್ ಗ್ರ್ಯಾಂಡ್ ಲೆಹೆಂಗಾ, ಗಾಗ್ರಾ-ಲಾಚಾ, ಶರಾರ ಸೇರಿದಂತೆ ನಾನಾ ಡಿಸೈನರ್‌ವೇರ್‌ಗಳು ಲಗ್ಗೆ ಇಟ್ಟಿವೆ. ಇನ್ನು, ಮಕ್ಕಳಿಗೆ ಗ್ರ್ಯಾಂಡ್ ಮಿನಿ ಎಥ್ನಿಕ್‌ವೇರ್ಸ್ ಬಂದಿವೆ ಎನ್ನುತ್ತಾರೆ ಶಾಪಿಂಗ್ ಸೆಂಟರ್‌ವೊಂದರ ಸೇಲ್ಸ್ ಮ್ಯಾನ್ ರಾಮ್.
ಗ್ರ್ಯಾಂಡ್ ಆಭರಣಗಳ ಖರೀದಿ
ಬಂಗಾರದ ಬೆಲೆ ಏರಿದ್ದರೂ ಕೂಡ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಇನ್ನು ಲಕ್ಷ್ಮಿ ಪೂಜೆ ಹಾಗೂ ಧನ್‌ತೆರಾಸ್ ಮಾಡುವವರಿಗೆಂದೇ ಈಗಾಗಲೇ ಬೆಳ್ಳಿ-ಬಂಗಾರದ ಆಭರಣಗಳು ಕಾಲಿಟ್ಟಿವೆ. ಪ್ರತಿವರ್ಷದಂತೆ ಈ ವರ್ಷವೂ ಜ್ಯುವೆಲರಿ ಶಾಪ್‌ಗಳು ನಾನಾ ಬಗೆಯ ಕೊಡುಗೆಗಳನ್ನು ಪ್ರಕಟಿಸಿವೆ. ಇದರೊಂದಿಗೆ ವನ್ ಗ್ರಾಮ್ ಗೋಲ್ಡ್ ಹಾಗೂ ಇಮಿಟೇಷನ್ ಆಭರಣಗಳ ಸೆಟ್‌ಗಳ ಮಾರಾಟದಲ್ಲಿ ಹೆಚ್ಚಳ ಕಂಡಿದೆ.
ಈ ಸುದ್ದಿಯನ್ನೂ ಓದಿ | Sweta Srivastava: ಮನಮೋಹಕ ಲೆಹೆಂಗಾದಲ್ಲಿ ದೇವತೆಯಂತೆ ಕಂಗೊಳಿಸಿದ ಸ್ಯಾಂಡಲ್‌ವುಡ್ ನಟಿ ಶ್ವೇತಾ ಶ್ರೀವಾತ್ಸವ್
ಗೃಹಾಲಂಕಾರದ ಸಾಮಗ್ರಿಗಳು
ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಗೃಹಾಲಂಕಾರ ಹಾಗೂ ಎಲೆಕ್ಟ್ರಾನಿಕ್ ಐಟಂಗಳ ಮಾರಾಟ ಕೂಡ ಹೆಚ್ಚಾಗಿದೆ. ಮನೆಯ ಒಳಾಂಗಣ ಹಾಗೂ ಹೊರಾಂಗಣವನ್ನು ಆಕರ್ಷಕವಾಗಿಸುವ ಬಗೆಬಗೆಯ ಲೈಟಿಂಗ್ಸ್ ಹಾಗೂ ಲ್ಯಾಂಟೆರ್ನ್‌ಗಳ ಮಾರಾಟ ಹೆಚ್ಚಾಗಿದ್ದು, ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)