-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ವೈವಿಧ್ಯಮಯ ಆಕಾಶ ದೀಪಗಳು ಅಥವಾ ಸ್ಕೈ ಲ್ಯಾಂಟೆರ್ನ್‌ಗಳು (Deepavali Sky Lanters) ಎಲ್ಲೆಡೆ ಎಂಟ್ರಿ ನೀಡಿವೆ. ಮನೆಯ ಮುಂಭಾಗದಲ್ಲಿ, ಬಾಲ್ಕನಿಯಲ್ಲಿ ಅಥವಾ ಗಾರ್ಡನ್‌ನಲ್ಲಿ ತೂಗು ಹಾಕಬಹುದಾದ ನಾನಾ ಬಗೆಯ ಲ್ಯಾಂಟೆರ್ನ್‌ಗಳು ಈಗಾಗಲೇ ಹಲವರ ಮನೆಯ ಮುಂದೆಯೂ ನೇತಾಡುತ್ತಿವೆ. ಅವುಗಳಲ್ಲಿ ಪ್ಯಾರಾಚೂಟ್, ಬಲೂನ್, ಆಕಾಶ ಬುಟ್ಟಿ ಹಾಗೂ ಚೈನಾ ಲ್ಯಾಂಟೆರ್ನ್ ಶೈಲಿಯವು ಹೆಚ್ಚು ಬೇಡಿಕೆ ಪಡೆದುಕೊಂಡು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಪ್ರಚಲಿತದಲ್ಲಿರುವ ಲ್ಯಾಂಟೆರ್ನ್ ಡಿಸೈನ್ಸ್
ಚೆಂಡಿನಾಕಾರ, ಹೃದಯಾಕಾರ, ಪೆಂಟಾಗನಲ್, ಎಕ್ಸಾಗನಲ್, ಆಕ್ಟಾಗನಲ್, ತಾವರೆ, ಗುಲಾಬಿ, ನಕ್ಷತ್ರಾಕಾರ, ಪ್ಯಾರಾಚೂಟ್, ಮೊಟ್ಟೆಯಾಕಾರ ಸೇರಿದಂತೆ ನಾನಾ ಡಿಸೈನ್‌ಗಳಲ್ಲಿ ಬಣ್ಣಗಳಲ್ಲಿ ರಾರಾಜಿಸುತ್ತಿವೆ.
ಫ್ರಿಂಝ್ ಡಿಸೈನ್ ಆಕಾಶ ದೀಪಗಳು
ಬಹಳಷ್ಟು ಆಕಾಶ ದೀಪ ಅಥವಾ ಲ್ಯಾಂಟೆರ್ನ್‌ಗಳು ಗಾಳಿಯಲ್ಲಿ ಹಾರಾಡುವ ಫ್ರಿಂಝ್ ಡಿಸೈನ್ ಹೊಂದಿವೆ. ಕೆಲವಕ್ಕೆ ಕೆಳಗೆ ಕುಚ್ಚುಗಳಿದ್ದರೆ, ಇನ್ನು ಕೆಲವು ಫ್ರಿಂಜ್ ಶೈಲಿಯಲ್ಲಿ ಎಳೆ ಎಳೆಯಾಗಿ ಹಾರಾಡುತ್ತಿರುತ್ತವೆ.
ಪರಿಸರ ಸ್ನೇಹಿ ಸ್ಕೈ ಲ್ಯಾಂಟೆರ್ನ್ಸ್
ಕಾಟನ್ ಬಟ್ಟೆ ಇಲ್ಲವೇ ದಪ್ಪನಾದ ಪೇಪರ್ ಮತ್ತು ಬಿದಿರಿನಿಂದ ತಯಾರಿಸಿದ ಪರಿಸರ ಸ್ನೇಹಿ ಆಕಾಶದೀಪಗಳಿಗೆ ಆದ್ಯತೆ ಹೆಚ್ಚಾಗಿದ್ದು, ಕಲಾತ್ಮಕ ಡಿಸೈನ್‌ನಲ್ಲಿ ಬಂದಿವೆ ಎನ್ನುತ್ತಾರೆ ಗಾಂಧಿ ಬಜಾರ್ ಶಾಪ್‌ವೊಂದರ ಮಾರಾಟಗಾರರಾದ ದೀಲಿಪ್.
ಇನ್‌ಡೋರ್ ಲ್ಯಾಂಟೆರ್ನ್
ಇದೀಗ ಇನ್‌ಡೋರ್ ಲ್ಯಾಂಟೆರ್ನ್‌ಗಳು ದೊರೆಯುತ್ತಿವೆ. ಬಲ್ಬ್ ಅಥವಾ ಕ್ಯಾಂಡಲ್ ಹೊತ್ತಿಸಿ ಡೆಕೋರೇಷನ್ ಮಾಡಬಹುದು.
ಸ್ಟಾರ್ ಸ್ಕೈ ಲ್ಯಾಂಟೆರ್ನ್
ಎಂದಿನಂತೆ ನಕ್ಷತ್ರಾಕಾರದ ಲ್ಯಾಂಟೆರ್ನ್‌ಗಳಿಗೆ ಬೇಡಿಕೆ ಕುಂದಿಲ್ಲ. ಇವುಗಳಲ್ಲೆ ನಾನಾ ಬಗೆಯವು ಬಂದಿವೆ. ಕ್ರೀಮ್, ರೆಡ್, ಗೋಲ್ಡ್, ಸಿಲ್ವರ್ ಹಾಗೂ ಮಿಲ್ಕಿ ವೈಟ್ ಶೇಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ಹಾಲೋಗ್ರಾಫಿಕ್ ಲ್ಯಾಂಟೆರ್ನ್
ಹಾಲೋಗ್ರಾಫಿಕ್ ಡಿಸೈನ್‌ನಲ್ಲಿ ಲಭ್ಯವಿರುವ ಮಿನಿ ಸ್ಟಾರ್ ಲ್ಯಾಂಟೆರ್ನ್‌ಗಳು ಕ್ಲಾಸಿಯಾಗಿ ಕಾಣಿಸುತ್ತವೆ. ಇವನ್ನು ಮನೆಯ ಯಾವ ಭಾಗದಲ್ಲಾದರೂ ತೂಗು ಹಾಕಬಹುದು.
ಈ ಸುದ್ದಿಯನ್ನೂ ಓದಿ | Giri Dwarakish: ತಮಿಳಿನ ಹಲವು ಸಿನಿಮಾಗಳಲ್ಲಿ ದ್ವಾರಕೀಶ್ ಕಿರಿಯ ಮಗ ಗಿರಿಗೆ ಅವಕಾಶ
ಲ್ಯಾಂಟೆರ್ನ್ ಪ್ರಿಯರಿಗೆ ಟಿಪ್ಸ್
· ಬಾಲ್ಕನಿಯಲ್ಲಿ ಆದಷ್ಟೂ ಫ್ರಿಂಝ್ ಶೈಲಿಯವನ್ನು ತೂಗು ಹಾಕಿ.
· ಒಳಾಂಗಣದಲ್ಲಾದಲ್ಲಿ ಲೈಟಿಂಗ್ಸ್ ಇರುವಂತದ್ದನ್ನು ಆಯ್ಕೆ ಮಾಡಿ.
· ಗಾರ್ಡನ್‌ನಲ್ಲಾದಲ್ಲಿ ಗಾಳಿಗೆ ಹಾರಿ ಹೋಗದ ಮೆಟಿರೀಯಲ್‌ನಲ್ಲಿ ಸಿದ್ಧಗೊಂಡ ಲ್ಯಾಂಟೆರ್ನ್ ತೂಗು ಹಾಕಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)