Friday, 22nd November 2024

Special Trains: ದೀಪಾವಳಿಗಾಗಿ ಬೆಂಗಳೂರಿನಿಂದ ಈ ಊರುಗಳಿಗೆ ವಿಶೇಷ ರೈಲುಗಳು

deepavali special trains

ಬೆಂಗಳೂರು: ದೀಪಾವಳಿ (Deepavali Festival) ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ (Bengaluru News) ಈ ಮಾರ್ಗಗಳಿಗೆ ಹೆಚ್ಚುವರಿ ವಿಶೇಷ ರೈಲು (Deepavali Special Trains) ಸೇವೆ ಒದಗಿಸಲು ಭಾರತೀಯ ರೈಲ್ವೇ (Indian Railways) ನಿರ್ಧರಿಸಿದೆ. ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈ ವೇಳೆ ಜನಗಳ ದಟ್ಟಣೆ ತಡೆಯಲು ಹಾಗೂ ಪ್ರಯಾಣ ಸುಗಮಗೊಳಿಸಲು ಈ ಮೂಲಕ ಉದ್ದೇಶಿಸಲಾಗಿದೆ.

ಹಬ್ಬಗಳ ಸಂದರ್ಭಗಳಲ್ಲಿ ರೈಲುಗಳು ತುಂಬಿ ತುಳುಕುತ್ತಿದ್ದು, ಇದನ್ನು ಗಮನಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು ಒದಗಿಸುತ್ತಿದೆ. ಇದೀಗ ದೀಪಾವಳಿ ಹಿನ್ನೆಲೆ ಬೆಂಗಳೂರಿನಿಂದ ಈ ಕೆಳಗಿನ ಮಾರ್ಗಗಳಿಗೆ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ನೀಡಲು ಮುಂದಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 7ರ ವರೆಗೆ ಈ ವಿಶೇಷ ರೈಲುಗಳು ಸೇವೆ ಒದಗಿಸಲಿದ್ದು, ಪ್ರಮುಖವಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಈ ವಿಶೇಷ ರೈಲುಗಳು ಸೇವೆ ನೀಡಲಿವೆ.

ಬೆಂಗಳೂರಿನಿಂದ ಜೋಧಪುರದ ಭಗತ್ ರೈಲ್ವೇ ನಿಲ್ದಾಣಕ್ಕೆ, ಹುಬ್ಬಳ್ಳಿಯಿಂದ ಉತ್ತರಖಂಡದ ಹೃಷಿಕೇಶಕ್ಕೆ ವಿಶೇಷ ರೈಲು ಸೇವೆ ಒದಗಿಸಲಿದೆ. ಅಲ್ಲದೆ, ಶೀಘ್ರದಲ್ಲೇ ಬೆಂಗಳೂರಿನಿಂದ ಕರ್ನಾಟಕದ ವಿವಿಧ ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ವಿಶೇಷ ರೈಲು ವೇಳಾಪಟ್ಟಿ ಬಿಡುಗಡೆ ಆಗಲಿದೆ.

  • ರೈಲು ಸಂಖ್ಯೆ 07363/07364 ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರ ಹೃಷಿಕೇಶ ಮಾರ್ಗದಲ್ಲಿ ವಾರದಲ್ಲಿ ವಿಶೇಷ ನಾಲ್ಕು ಟ್ರಿಪ್ ಒಡಲಿದೆ. 07363 ರೈಲು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾತ್ರಿ 8:30ಕ್ಕೆ ಹೊರಡಲಿದೆ. ಅಕ್ಟೋಬರ್ 14ರಿಂದ ನವೆಂಬರ್ 4ರ ವರೆಗೆ ಈ ವಿಶೇಷ ರೈಲು ಸೇವೆ ಒದಗಿಸಲಿದೆ. ಇನ್ನು ಇದೇ ಹೃಷಿಕೇಶದಿಂದ ಮರಳಿ ಹುಬ್ಬಳ್ಳಿಗೆ ಬರುವ ರೈಲು ಸಂಖ್ಯೆ 07364, ಹೃಷಿಕೇಶದಿಂದ ಬೆಳಗ್ಗೆ 6:15ಕ್ಕೆ ಹೊರಡಲಿದ್ದು, ಇದು ಅಕ್ಟೋಬರ್ 17ರಿಂದ ನವೆಂಬರ್ 7ರ ವರೆಗೆ ಸೇವೆ ಒದಗಿಸಲಿದೆ.
  • ಹುಬ್ಬಳ್ಳಿಯಿಂದ ಹೊರಡುವ ಈ ರೈಲು ಧಾರವಾಡ-ಲೊಂಡಾ-ಬೆಳಗಾವಿ-ಪುಣೆ-ಗ್ವಾಲಿಯರ್-ಮಥುರಾ-ಹಜ್ರತ್, ನಿಜಾಮುದ್ದೀನ್-ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಆಗಲಿದೆ. ಬಳಿಕ ಹೃಷಿಕೇಶ್ ತಲುಪಲಿದ್ದು, ಹೃಷಿಕೇಶ್‌ದಿಂದ ವಾಪಾಸ್‌ ಬರುವ ರೈಲು ಕೂಡ ಇದೇ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ತಿಳಿಸಿದೆ.
  • ರೈಲು ಸಂಖ್ಯೆ 06587/06588 ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಜೋಧಪುರದ ಭಗತ್ ಕೊಥಿ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ಈ ರೈಲು ಬೆಂಗಳೂರಿನಿಂದ ಸಂಜೆ 5:45ಕ್ಕೆ ಹೊರಡಲಿದೆ. ಇನ್ನು ಭಗತ್ ಕೊಥಿ ರೈಲು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗ ಈ ರೈಲು ಬೆಂಗಳೂರಿನತ್ತ ವಾಪಾಸ್‌ ಆಗಲಿದೆ. ಈ ರೈಲು ಬೆಂಗಳೂರಿನ ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಟು ಬಾಣಸವಾಡಿ-ತುಮಕೂರು-ದಾವಣಗೆರೆ-ಪುಣೆ-ಸೂರತ್-ವಡೋದರ ಹಾಗೂ ಅಬು ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಇದನ್ನೂ ಓದಿ: Tirupati train: ಭಕ್ತಾದಿಗಳಿಗೆ ಸಿಹಿ ಸುದ್ದಿ, ಕರಾವಳಿಯಿಂದ ತಿರುಪತಿಗೆ ರೈಲು ಸೇವೆ ವಿಸ್ತರಣೆ