Sunday, 15th December 2024

ಸಹಸ್ರ ದೀಪೋತ್ಸವ ಕಾರ್ಯಕ್ರಮ

ಮೂಡಲಗಿ: ಪಟ್ಟಣದ ಲಕ್ಷ್ಮೀನಗರದಲ್ಲಿರುವ  ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನಿಮಿತ್ತ ನಡೆದ ಸಹಸ್ರ ದೀಪೋತ್ಸವ ಕಾರ್ಯಕ್ರಮ ದಲ್ಲಿ ನೂರಾರು ಮಹಿಳೆಯರು, ಮಕ್ಕಳು ದೀಪಗಳನ್ನು ಬೆಳಗಿಸಿದರು.
ಇದಕ್ಕೂ ಮುಂಚೆ ಶ್ರೀ ಕಾಳಿಕಾದೇವಿ ದೇವಸ್ಥಾನದ ಅರ್ಚಕ ದೇವೇಂದ್ರ ಆಚಾರ್ಯ ಅವರು ಕಾಳಿಕಾದೇವಿಯನ್ನು ವಿಶೇಷವಾಗಿ ಅಲಂಕರಿಸಿ ವಿಶೇಷ ಪೂಜೆ, ಅಭಿಷೇಕವನ್ನು ನೆರವೇರಿಸಿದರು.
ಮಹಿಳೆಯರಿಗೆ, ಮಕ್ಕಳಿಗೆ ದೀಪೋತ್ಸವ ಮಂತ್ರವನ್ನು ಬೋಧಿಸಿದ ನಂತರ ಎಲ್ಲರೂ ದೀಪಗಳನ್ನು ಬೆಳಗಿಸಿದರು. ನಂತರ ಭೂ ದೇಣಿಗೆ ನೀಡಿದವರಿಗೆ ಸತ್ಕಾರ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ  ಶ್ರೀಕಾಂತ್ ಪತ್ತಾರ, ಉಪಾಧ್ಯಕ್ಷ ಭಗವಂತ ಬಡಿಗೇರ, ಕಾರ್ಯದರ್ಶಿ ಈರಪ್ಪ ಬಡಿಗೇರ, ಸಹ ಕಾರ್ಯದರ್ಶಿ  ರಾಜೇಶ ಬಡಿಗೇರ, ಖಜಂಚಿ ಪ್ರವೀಣ್ ದೇಸೂರಕರ, ನಿರ್ದೇಶಕರಾದ ಶ್ರೀಧರ ಪತ್ತಾರ, ರಾಜೇಂದ್ರ ಬಡಿಗೇರ, ರವಿ ಪತ್ತಾರ, ರಘು ಪತ್ತಾರ, ಮಾರುತಿ ಬಡಿಗೇರ, ಧರೇಪ್ಪ ಕಂಬಾರ, ಆನಂದ್ ಪತ್ತಾರ, ಸಂತೋಷ್ ಪತ್ತಾರ, ತುಕಾರಾಮ್ ಪತ್ತಾರ, ರಾಜು ಪತ್ತಾರ, ಶಶಿಕಾಂತ್ ಪತ್ತಾರ, ಆತ್ಮನಂದ್ ಬಡಿಗೇರ, ಚೇತನ್ ಪತ್ತಾರ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಮಕ್ಕಳು ಇದ್ದರು.