Thursday, 12th December 2024

ಐಎನ್‌ಎಸ್ ಕದಂಬಕ್ಕೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಕಾರವಾರ: ಏಷ್ಯಾದ ಅತಿದೊಡ್ಡ ನೌಕಾನೆಲೆ ಕಾರವಾರದ ಐಎನ್‌ಎಸ್ ಕದಂಬಕ್ಕೆ ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದು, ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿಗಳ ವೀಕ್ಷಣೆಗೆ ರಾಜನಾಥ್ ಸಿಂಗ್ ಆಗಮಿಸು ತ್ತಿದ್ದಾರೆ. ಇದೇ ವೇಳೆ ನೂತನವಾಗಿ ನಿರ್ಮಿಸಿರುವ ಜಟ್ಟಿಯೊಂದನ್ನು ಉದ್ಘಾಟಿ ಸಲಿದ್ದಾರೆ.

ಹೆಲಿಕಾಪ್ಟರ್ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಿಂದ ರಾಜನಾಥ್ ಸಿಂಗ್ ಮೊದಲಿಗೆ ಕೊಚ್ಚಿಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಮಧ್ಯಾಹ್ನ ನೌಕಾನೆಲೆಗೆ ಆಗಮಿಸಲಿದ್ದಾರೆಂದು ತಿಳಿದುಬಂದಿದೆ.

ಹವಾಮಾನ ವೈಪರೀತ್ಯ ಉಂಟಾಗಿದ್ದೇ ಆದರೆ, ರಸ್ತೆ ಮಾರ್ಗವಾಗಿ ಬರುವ ಸಾಧ್ಯತೆಗಳಿವೆ.