ಮಂಗಳೂರು : ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ (C. Brijesh Chowta) ಅವರನ್ನು ರಕ್ಷಣಾ ಸಚಿವಾಲಯದ (Defence ministry) ಸಲಹಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ (Rajnathsingh) ಹಾಗೂ ರಾಜ್ಯ ಸಚಿವ ಸಂಜಯ್ ಸೇಠ್ ಅಧ್ಯಕ್ಷತೆಯ ಈ ಸಲಹಾ ಸಮಿತಿಯಲ್ಲಿ ಲೋಕಸಭೆಯ 14 ಹಾಗೂ ರಾಜ್ಯ ಸಭೆಯ 6 ಸಂಸದರು ಹಾಗೂ ಇಬ್ಬರು ಪದನಿಮಿತ್ತ ಸದಸ್ಯರಿದ್ದಾರೆ. ಈ ಸಲಹಾ ಸಮಿತಿಯು ಸರ್ಕಾರದ ರಕ್ಷಣಾ ನೀತಿಗಳು ಹಾಗೂ ದೇಶದ ರಕ್ಷೆಗೆ ಸಂಬಂಧಿಸಿದ ಕುರಿತು ಸಲಹೆ ನೀಡಲಿದೆ. ರಾಷ್ಟ್ರದ ಭದ್ರತೆಯನ್ನು ಬಲಪಡಿಸುವ ರಕ್ಷಣಾ ನೀತಿಗಳ ರಚನೆ ಮತ್ತು ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲಿದೆ.
ನೇಮಕಾತಿಗೆ ಕೃತಜ್ಞತೆ ವ್ಯಕ್ತಪಡಿಸಿದ ಬ್ರಿಜೇಶ ಚೌಟ ” ಮಾಜಿ ಸೈನಿಕನಾಗಿ ಹಾಗೂ ಸಂಸದನಾಗಿ ದೇಶ ಸೇವೆಗೆ ಒಂದು ಅದ್ಭುತ ಅವಕಾಶ ಒದಗಿದೆ ಎಂದು ಹೇಳಿದ್ದಾರೆ. ಕಳೆದ ಬಾರಿಯ ಲೋಕ ಸಭೆ ಚುನಾವಣೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲುಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದ್ದರಿಂದ ಬ್ರಿಜೇಶ್ ಚೌಟಾಗೆ ಬಿಜೆಪಿ ಟಿಕೆಟ್ ನೀಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಕುದ್ರೋಳಿ ವಿರುದ್ಧ ಜಯಗಳಿಸಿದ ಚೌಟ ದಕ್ಷಿಣ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : Terror hideout Bust: ಪಾಕ್ ಉಗ್ರರ ಅಡಗುತಾಣ ಪುಡಿಗಟ್ಟಿದ ಭಾರತೀಯ ಸೇನೆ; 2 ಗ್ರೆನೇಡ್ಸ್, 3 ಗಣಿ ಪತ್ತೆ
ಭಾರತೀಯ ಸೇನೆಯಲ್ಲಿ ಸೇವೆ
2003 ರಿಂದ 2010 ರವರೆಗೆ ಏಳು ವರ್ಷಗಳ ಕಾಲ ಚೌಟಾ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು. ಅಧಿಕಾರಿ ತರಬೇತಿ ಅಕಾಡೆಮಿಯಿಂದ ಉತ್ತೀರ್ಣರಾದ ನಂತರ, ಅವರನ್ನು 8 ಗೂರ್ಖಾ ರೈಫಲ್ಸ್‌ನ 7 ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು. ಅಲ್ಪಾವಧಿಯ ಮಿಲಿಟರಿ ಅವಧಿಯಲ್ಲಿ, ಚೌಟಾ ಅವರು ಕ್ರಮವಾಗಿ ಮಣಿಪುರ ಮತ್ತು ಅಸ್ಸಾಂನಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದರು. ಸೈನ್ಯದಿಂದ ಹೊರಬಂದ ನಂತರ, ಅವರು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಲ್ಲಿ ಎಕ್ಸಿಕ್ಯುಟಿವ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂಗೆ ಸೇರಿದರು. ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಇವರು ತಳಮಟ್ಟದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ನಂತರ ಬಿಜೆಪಿಯ ಕರ್ನಾಟಕ ಘಟಕದ ರಾಜ್ಯ ಕಾರ್ಯದರ್ಶಿಯಾಗಿದ್ದರು.