Wednesday, 11th December 2024

ಕಾಂಗ್ರೆಸ್ , ಜೆಡಿಎಸ್ ಪಕ್ಷಗಳಿಂದ ದೇಶದ ಅಭಿವೃದ್ದಿ ಅಸಾಧ್ಯ

ಇಂಡಿ: ಕಾಂಗ್ರೆಸ್ , ಜೆಡಿಎಸ್ ಪಕ್ಷಗಳಿಂದ ದೇಶದ ಅಭಿವೃದ್ದಿ ಅಸಾಧ್ಯ. ಬಿಜೆಪಿ ಆಂತರಿಕ ಪ್ರಜಾಪ್ರಭುತ್ವ ಪಕ್ಷವಾಗಿದೆ ಕಾಂಗ್ರೆಸ್ ಸ್ವಾರ್ಥ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.

ತಾಲೂಕಿನ ತಡವಲಗಾ ಗ್ರಾಮದಲ್ಲಿ ಕೇಂದ್ರ ,ರಾಜ್ಯ ಸರಕಾರದ ಸಾಧನೆಗಳ ಕುರಿತು ಕರಪತ್ರ ವಿತರಣೆ ಸಮಾರಂಭ ಉದ್ಘಾಟಿ ಮಾತನಾಡಿದ ಅವರು ಚಾ ಮಾಉವನಿಗೆ ಪ್ರಧಾನಿ ಹುದ್ದೆ ದಲಿತ ವ್ಯಕ್ತಿ ದೇಶದ ರಾಷ್ಟç ಪತಿ ಆದಿವಾಸಿ ಮಹಿಳೆ ದೇಶದ ರಾಷ್ಟçಪತಿ ಮಾಡಿದ್ದು ಬೆಜೆಪಿ ಸರಕಾರ. ಬಿಜೆಪಿ ಕೋಮು ವಾದಿ ಪಕ್ಷ ಮುಸ್ಲಿಂ ವಿರೋಧಿ ಪಕ್ಷ ಅನ್ನುವಂತ ಧೋರಣೆ ಇದಿದ್ದರೆ ಡಾ. ಎ.ಪಿಜೆ ಅಬ್ದುಲ ಕಲಾಂ ಅರನ್ನು ತಂದು ರಾಷ್ಟçಪತಿ ಮಾಡುತ್ತಿರಲ್ಲಿಲ್ಲ .ಬಿಜೆಪಿ ನೀತಿ ಧೋರೆ ಯಾವುದೇ ಧರ್ಮ ಜಾತಿ ಸಿಮೀತವಲ್ಲ ಇಡೀ ದೇಶದ ಮಾನವ ಕುಲಕೋಟಿ ಶ್ರೇಯೋಭಿವೃದ್ದಿ ಯಾಗಿದೆ. ರೈತರ ಖಾತೆ ಹಣ ವರ್ಗಾವಣೆ ಮಾಡುತ್ತಿರುವುದು ಕೇವಲ ಎಲ್ಲಾ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ , ಗ್ರಂಥಾಲಯ, ರಸ್ತೆ, ವಿದ್ಯುತ , ಕುಡಿಯುವ ನೀರು ಮೂಲಭೂತ ಸೌಲಭ್ಯ ಬಿಜೆಪಿ ಸರಕಾರ ಒದಗಿಸಿದೆ. ಜಾತಿ ಧರ್ಮ ಮುಖ್ಯವಲ್ಲ ಎಲ್ಲರದು ಮಾನವ ಜಾತಿ ಚುನಾವಣೆ ಬರುತ್ತಿದಂತೆ ಇಂಡಿ ಮತಕ್ಷೇತ್ರದಲ್ಲಿ ಜಾತಿ ರಾಜಕಾರಣ ಹೆಚ್ಚಾಗಿದೆ ೧೦ನೇ ತರಗತಿ ಬರುವವರೆಗೆ ನನಗೆ ಜಾತಿ ಎಂಬ ಪರಿಕಲ್ಪನೆ ಬರಲ್ಲಿಲ್ಲ ಸ್ವಾರ್ಥ ರಾಜಕಾರಣ ಜಾತಿ ಮಾಡುತ್ತಿದ್ದಾರೆ ಎಂದರು.

ಬಾಳು ಮುಳಜಿ, ಸೋಮು ದೇವರ ಮಾತನಾಡಿದರು. ರೇವಣಯ್ಯಾ ಸ್ವಾಮಿ ಸಾನಿಧ್ಯ ವಹಿಸಿದರು. ರಮೇಶ ಧರೇನವರ್, ಸುನಂದಾ ವಾಲೀಕಾರ, ಭೀಮಸಿಂಗ ರಾಠೋಡ, ಶ್ರೀಶೈಲಗೌಡ ಬಿರಾದಾರ, ಸಾಹೇಬಗೌಡ ತಡ್ಲಗಿ, ಪ್ರಕಾಶ ಮಲಘಾಣ, ಸಂತೋಷ ಸಾರವಾಡ, ಆನಂದ ಹೊಟಗಾರ, ಉಮೇಶ ಡೊಂಬರ, ರಮೇಶ ಹೊಸಮನಿ, ನಿಂಗಪ್ಪ ಕುಂಬಾರ, ಸಂಜು ಅಸವಾಲೆ, ಮಳಸಿದ್ದ ನಡಗೇರಿ, ಚೆನ್ನ ಜಾಡರ್, ಸೋಮನಾಥ ಬಡಿಗೇರ, ಮಹಿಬೂಬ ಮೋಳಸಾವಳಗಿ, ಕಲ್ಲಪ್ಪ ಖಸ್ಕಿ ,ಅಣ್ಣಾರಾಯ ಮದರಿ, ಮಲ್ಲಿಕಾರ್ಜನ ಗುಡ್ಲಮನೆ ಸೇರಿದಂತೆ ಅನೇಕರಿದ್ದರು.

ಇದೇ ಸಂಧರ್ಬದಲ್ಲಿ ವಿವಿಧ ಪಕ್ಷಗಳನ್ನು ತೊರೇದು ಬಿಜೆಪಿ ಸೇರ್ಪಡೆಯಾದರು. ದಯಾಸಾಗರ ಪಾಟೀಲ ಅವರು ಪಕ್ಷದ ಧ್ವಜ ನೀಡಿ ಬರಮಾಡಿ ಕೊಂಡರು.