Friday, 13th December 2024

ಮಧುಮೇಹ ಬರುವ ಪೂರ್ವ ಎಚ್ಚರಿಕೆ ಇರಲಿ: ಡಾ.ಮಂಜುನಾಥ

ಇಂಡಿ: ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವದಕ್ಕಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಡಾ. ಮಂಜುನಾಥ ಕೊಟ್ಟೇಣ್ಣವರ್ ಹೇಳಿದರು.

ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಜಯಪೂರ ಬಿ.ಎಲ್.ಡಿ ವಿಶ್ವವಿಧ್ಯಾಲಯ ಹಾಗೂ ತಾಲೂಕಾ ರೋಗ್ಯಕೇಂದ್ರ ಇಚಿಡಿ ಸಂಯುಕಾಶ್ರಯದಲ್ಲಿ ಹಮ್ಮಿಕೊಂಡ ಮಧು ಮೇಹ ರೋಗ ಉಚಿತ ಆರೋಗ್ಯ ತಪಾಸಣಾ ಶಿಬೀರ ಚಾಲನೆ ನೀಡಿ ಮಾತನಾಡಿದ ಅವರು ಅಧುನಿಕ ಶೈಲಿಯ ಭರಾಟೆಯಲ್ಲಿ ಪ್ರತಿಯೋಬ್ಬರು ನಮ್ಮ ಆರೋಗ್ಯದ ಕಡೆ ಗಮನ ನೀಡುತ್ತಿಲ್ಲ.

ಇಂದು ನಮ್ಮ ದೇಶದಲ್ಲಿ ಪ್ರತಿಶತ೧೫ ರಷ್ಟು ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದಾರೆ. ಮಧುಮೇಹಿ ರೋಗಿಗಳು ತಮ್ಮ ಅಗಾಗ ಕೈ,ಕಾಲು ಗಾಯಗಳ ವಾಸಿಯಾಗದ ಸಮಸ್ಯ ಗಳಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಬದಲ್ಲಿ ರೋಗಿಗಳು ಪದೆ ಪದೆ ವೈದ್ಯರ ಸಲಹೆ ಪಡೆಯಬೇಕು. ಮಧುಮೇಹಿಗಳು ಸಕ್ಕರೆ ಕಾಯಿಲೆ ಕಾಣಿಸಿಕೊಂಡರೆ ಜೀವನ ಪದ್ದತಿ ಬದಲಾವಣೆ ಮಾಡಿಕೊಳ್ಳಬೇಕು. ಈ ರೋಗ ಕೇವಲ ಕೈ,ಕಾಲುಗಳಿಗಷ್ಟೇ ಘಾಸಿ ಮಾಡುವುದಿಲ್ಲ. ಇತರೇ ಶರೀರದ ಕಿಡ್ನಿ, ಲಿವರ್ ಹೀಗೆ ಘಾಸಿ ಮಾಡುತ್ತದೆ. ಅತೀಯಾದ ಹಸಿವು,ಕೈ ,ಕಾಲು ನೋವು ಕಾಣಿಸಿಕೊಂಡರೆ ಮಧುಮೇಹದ ಲಕ್ಷಣಗಳು ಎಂದು ಅರ್ಥ. ಆದಷ್ಟು ರೋಗಿಗಳು ಮಿತವಾದ ಆಹಾರ ಸೇವನೆ, ವ್ಯಾಯಾಮ ಒಳ್ಳೇಯ ಆಹಾರ ಸೇವಿಸಿದರೆ ಮಧುಮೇಹ ಹತ್ತೋಟಿಗೆ ತರಲು ಸಾಧ್ಯ ಎಂದರು.

ಡಾ. ಅರ್ಚನಾ ಕುಲಕರ್ಣಿ, ಡಾ. ರಾಜಶೇಖರ ಕೋಳೆಕರ್ ಮಾತನಾಡಿದರು. ಡಾ.ಜಗದೀಶ ಬಿರಾದಾರ, ಡಾ.ಶ್ರೀಧರ ಪಾಟೀಲ, ಡಾ. ಪ್ರೀತಿ ಕೊಳೇಕರ್, ಡಾ,ರಮೇಶ ರಾಠೋಡ, ಡಾ.ಎಸ್.ಕೆ ಕೊಪ್ಪಾ, ಎ.ಎಸ್ ಗಾಣಿಗೇರ,ವೈ.ಎಂ ಪೂಜಾರ, ಎಸ್.ಎಚ ಅತನೂರ, ಗಂಗಾಧರ, ಶ್ರೀಮತಿ ಬೈರಶೆಟ್ಟಿ ಉಪಸ್ಥತರಿದ್ದರು. ೧೯೮೯-೯೦ನೇಸಾಲಿನ ಎಸ್.ಎಸ್.ಎಲ್,ಸಿ ಶ್ರೀಶಾಂತೇಶ್ವರ ಶಾಲೆಯ ಗೆಳೆಯವರ ಬಳಗದ ಸದಸ್ಯರು ಇದ್ದರು.