Sunday, 15th December 2024

ರೋಡ ರೋಲರ್ ಹರಿದು ವ್ಯಕ್ತಿ ಸಾವು

ಕಮಲಾಪುರ: ಗ್ರಾಮದಲ್ಲಿ ರೋಡ ರೋಲರ್ ಹರಿದು ಓಕಳಿ ಗ್ರಾಮದ ನಿವಾಸಿ ಸಾಯಿಬಣ್ಣ ಮಲ್ಲೇಶಪ್ಪ ಮಾದರ (65) ಎಂಬವರು ಮೃತಪಟ್ಟಿದ್ದಾರೆ.

‘ಕಾರ್ಯದ ನಿಮಿತ್ತ ಕಮಲಾಪುರಕ್ಕೆ ಬಂದಿದ್ದ ಸಾಯಿಬಣ್ಣ ಅವರು ಮನೆಗೆ ಮರಳಲು ರಸ್ತೆ ದಾಟುತ್ತಿದ್ದರು. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಹಿಂಬದಿ ಚಲಿಸುತ್ತಿದ್ದ ರೋಡ್ ರೋಲರ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಹಿಂಬದಿಯಲ್ಲಿ ವ್ಯಕ್ತಿ ಇರುವುದಾಗಿ ಎಷ್ಟೇ ಕೂಗಿಕೊಂಡರೂ ರೋಲರ್ ಚಾಲಕ ಕಿವಿಗೊಡಲಿಲ್ಲ’ ಎಂದು ಪ್ರತ್ಯಕ್ಷರ್ಶಿಗಳು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.