Thursday, 12th December 2024

ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪ್ರಾರಂಭ

ಸುರಪುರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2021-22ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಆಟೋ ಮೊಬೈಲ್, ಸಿವಿಲ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ.

ಪ್ರವೇಶ ಪ್ರಕ್ರಿಯೆಯು ಸಂಸ್ಥೆಯ ಪ್ರಾಂಶುಪಾಲರ ಹಂತದಲ್ಲಿ ನೇರವಾಗಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಪ್ರವೇಶ ಪಡೆಯಲು ಆ.30 ಕೊನೆಯ ದಿನಾಂಕವಾಗಿದೆ. ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ನೀಡಲಾಗುವುದು ಎಂದು ಸಂಸ್ಥೆಯ ಪ್ರಾಂಶುಪಾಲ ಶ್ರೀಕಾಂತ್ ಜಿ.ಕೆ. ತಿಳಿಸಿದ್ದಾರೆ.

ಪ್ರವೇಶ ಶುಲ್ಕ ವಿವರ: ಸಾಮಾನ್ಯ ವರ್ಗಕ್ಕೆ ರೂ.4,270, ಪರಿಶಿಷ್ಟ ಜಾತಿ ಮತ್ತು ಪಂಗಡ ರೂ.430 (2.50 ಲಕ್ಷ ರೂ. ವರೆಗೆ ವಾರ್ಷಿಕ ಆದಾಯ), ಪರಿಶಿಷ್ಟ ಜಾತಿ ಮತ್ತು ಪ. ಪಂಗಡ ರೂ. 2,535 (2.50 ಲಕ್ಷದಿಂದ 10 ಲಕ್ಷ ವರೆಗೆ ವಾರ್ಷಿಕ ಆದಾಯ), ಪ್ರವರ್ಗ 1 ರೂ.960 (2.50 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ), 2ಎ/3ಎ/3ಬಿ (ಅಲ್ಪಸಂಖ್ಯಾತರ ಹೊರತುಪಡಿಸಿ) ರೂ.960, 2ಬಿ ಮುಸ್ಲಿಂ /ಪ್ರವರ್ಗ 2ಎ ವರ್ಗಕ್ಕೆ ರೂ. 4270, ಎಸ್‌ಎನ್ ಕ್ಯೂ ವರ್ಗಕ್ಕೆ ರೂ.1330 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಪ್ರಾಂಶುಪಾಲರು 9964492467, ಉಪನ್ಯಾಸಕರು 9743113812 ಸಂಪರ್ಕಿಸಿ.