Saturday, 21st September 2024

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತರಗತಿಗಳನ್ನು ಮಾಡುತ್ತಿರುವ ಖಾಸಗಿ ಶಾಲೆಗಳು

ಕಣ್ಣು ಮುಚ್ಚಿ ಕುಳಿತ ಕ್ಷೇತ್ರ ಶಿಕ್ಷಣಾಧಿಕಾರಿ:ಸಿದ್ದಗಂಗಾಯ್ಯ

ಪಾವಗಡ: ರಾಜ್ಯದಲ್ಲಿ ಇತ್ತಿಚೆಗೆ ಕರೋನ ಪ್ರಕರಣಗಳು ಹೆಚ್ಚಾಗಿ ಸರ್ಕಾರಕ್ಕೆ ಒಂದು ಕಡೇ ತಲೆನೋವು ಅದರೆ ಇನ್ನೊಂದು ಕಡೆ ಶಿಕ್ಷಣ ಸಚಿವರ ಹಾಗೂ ಸರ್ಕಾರದ ಸೂಚನೆಗಳು ಸಹ ಪಾಲಿಸದೆ ಬಹುತೇಕ ಖಾಸಗಿ ಶಾಲೆಗಳು ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಈಗಾಗಲೇ ಬಹಾಳಷ್ಟು ಪೋಷಕರಿಗೆ ದಿಕ್ಕುತೋಚದೆ ರೀತಿಯಲ್ಲಿ ಸಮಸ್ಯೆ ಉಂಟಾಗಿದೆ.ಕೆಲವೊಂದು ಶಾಲೆಗಳಲ್ಲಿ ಶಾಲಾ ಶುಲ್ಕದ ಬಗ್ಗೆ ಪೋಷಕರಿಗೆ ಬ್ಲಾಕ್ ಮೇಲ್ ಸಹ ಮಾಡುತ್ತಿದ್ದರೆ ಎಂಬುದಾಗಿ ಪೋಷಕರು ತಿಳಿಸಿದ್ದಾರೆ. ಈಗಲೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ತಲೆ ಎತ್ತಿವೆ.ಇದರಿಂದಾಗಿ ಜನರಲ್ಲಿ ಆತಂಕ ಒಂದು ಕಡೆ ಇನ್ನೊಂದು ಕಡೆ ಮಕ್ಕಳ ಶಾಲೆಯ ಸಮಸ್ಯೆ ಯಿಂದ ಕಂಗಾಲಾಗಿದ್ದಾರೆ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಅನುಮತಿಯೊಂದಿಗೆ 6 ನೇ ತರಗತಿಯಿಂದ ಮೇಲ್ಪಟ್ಟ‌ ತರಗತಿ ಮಾತ್ರ ಆರಂಭಿಸಲು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.ಅದರೆ ಸರ್ಕಾರ ದಿಂದ ಅನುಮತಿ ಇಲ್ಲದಿದ್ದರೂ ಖಾಸಗಿ ಶಾಲೆಗಳು ನಡೆಯುತ್ತಿದ್ದರು ಸ್ಥಳಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದರೂ ಅಥವಾ ಖಾಸಗಿ ಶಾಲೆಯ ಸಂಸ್ಥಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೂ ಎಂಬುದು ಸ್ಥಳಿಯ ಸಾರ್ವಜನಿಕರು ಪ್ರಶ್ನೆಯಾಗಿದೆ.

**

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಹೇಳುವ ಪ್ರಕಾರ ನಮ್ಮ ಸಿಆರ್ಪಿ ಗಳು ವರದಿ ನೀಡಿದ್ದಾರೆ ಯಾವುದೇ ಖಾಸಗಿ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಗಳು ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ತಕ್ಷಣವೇ ಶಿಕ್ಷಣ ಇಲಾಖೆ ಯವರು ಕ್ರಮ ಕೈ ಕೊಂಡು ಮುಂದೆ ಅಗುವ ಅನಾಹುತ ತಡೆಗಟ್ಟುಬೇಕಾಗಿ ಕೆಲ ಪೋಷಕರು ಆರೋಪಿಸಿದ್ದಾರೆ.