Friday, 22nd November 2024

Diwali Jewel Shopping Tips: ಧನ್‌ ತೆರಾಸ್‌ ಹಬ್ಬದಂದು ಆಭರಣ ಖರೀದಿಸುವ ಮಹಿಳೆಯರಿಗೆ ಇಲ್ಲಿವೆ 5 ಸಿಂಪಲ್‌ ಐಡಿಯಾ

Diwali Jewel Shopping Tips

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೀಪಾವಳಿಗೂ ಮುನ್ನ ಆಗಮಿಸುವ ಧನ್‌ತೆರಾಸ್‌ ಹಬ್ಬದ ಸೆಲೆಬ್ರೆಷನ್‌ ಖುಷಿಗೆ ಸಾಕಷ್ಟು ಮಹಿಳೆಯರು ಬಂಗಾರದ ಆಭರಣಗಳನ್ನು ಖರೀದಿಸುತ್ತಾರೆ. (Diwali Jewel Shopping Tips) ಅಂತಹ ಸಮಯದಲ್ಲಿ ಟ್ರೆಂಡ್‌ ಹಾಗೂ ವಿನ್ಯಾಸಕ್ಕೆ ಪ್ರಾಮುಖ್ಯತೆ ನೀಡಿ, ಆಭರಣದ ಆಯ್ಕೆ ಹಾಗೂ ಖರೀದಿ ಮಾಡುವುದು ಹೇಗೆ ಎಂಬುದರ ಬಗ್ಗೆ ಜ್ಯುವೆಲ್‌ ಎಕ್ಸ್‌ಪರ್ಟ್ ರಾಮ್‌ ರತನ್‌ ಒಂದಿಷ್ಟು ಐಡಿಯಾ ನೀಡಿದ್ದಾರೆ.

ಚಿತ್ರಗಳು: ಪಿಕ್ಸೆಲ್‌

ಥೀಮ್‌ ಆಭರಣಗಳ ಆಯ್ಕೆ

ಇತ್ತೀಚೆಗೆ ಥೀಮ್‌ ಆಧಾರಿತ ಆಭರಣಗಳಿಗೆ ನೀಡುವ ಪ್ರಾಮುಖ್ಯತೆ ಮೊದಲಿಗಿಂತ ಅಧಿಕಗೊಂಡಿದೆ. ಹಬ್ಬದ ಸೀಸನ್‌ಗೆ ತಕ್ಕಂತೆ, ಸಂದರ್ಭಕ್ಕೆ ಸೂಟ್‌ ಆಗುವಂತೆ ಟೆಂಪಲ್‌, ಫ್ಲೋರಲ್‌, ಕಂಟೆಂಪರರಿ ವಿನ್ಯಾಸ ಹೀಗೆ ನಾನಾ ಥೀಮ್‌ಗೆ ತಕ್ಕಂತಹ ಆಭರಣಗಳನ್ನು ಆಯ್ಕೆ ಮಾಡಬಹುದು.

ಕಲಾಕೃತಿಯಂತೆ ಕಾಣುವ ಹ್ಯಾಂಡ್‌ಮೇಡ್‌ ಆಭರಣಗಳು

ಕಲಾಕೃತಿಯಂತೆ ಕಾಣುವ ಆಭರಣಗಳು ಬೇಕೆಂದಲ್ಲಿ, ಕೈಗಳಲ್ಲಿ ಮೂಡಿಸಿದ ವಿನ್ಯಾಸ ಹೊಂದಿರುವ ಹ್ಯಾಂಡ್‌ಮೇಡ್‌ ಜುವೆಲ್‌ಗಳಿಗೆ ಆದ್ಯತೆ ನೀಡಿ. ಮೇಕಿಂಗ್‌ ಚಾರ್ಜ್‌, ವೆಸ್ಟೇಜ್‌ ಚಾರ್ಜ್‌ ಆದರೂ ಇವು ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಬಾಳಿಕೆ ಬರುತ್ತವೆ.

ಡಿಸೈನರ್‌ ಲೈಟ್‌ವೇಟ್‌ ಆಭರಣಗಳು

ಈ ಆಭರಣಗಳ ತೂಕಕ್ಕಿಂತ ಡಿಸೈನ್‌ಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಹೆಚ್ಚು ಖರ್ಚು ಮಾಡದೇ ನಾನಾ ವಿನ್ಯಾಸದ ಆಭರಣಗಳನ್ನು ಖರೀದಿ ಮಾಡಬೇಕಿದ್ದಲ್ಲಿ ಹಿಂದೂ-ಮುಂದೂ ನೋಡದೇ ಲೈಟ್‌ವೈಟ್‌ ಆಭರಣಗಳನ್ನು ಖರೀದಿ ಮಾಡಿ. ಅತಿ ತೂಕದ ಒಂದು ಜ್ಯುವೆಲರಿ ಕೊಳ್ಳುವ ಬದಲು ಮೂರ್ನಾಲ್ಕು ಆಭರಣಗಳನ್ನು ಖರೀದಿಸಿ ಸಂತಸ ಪಡಬಹುದು.

ಆ್ಯಂಟಿಕ್‌ ಬಂಗಾರದ ಆಭರಣಗಳು

ಟ್ರೆಡಿಷನಲ್‌ ಲುಕ್‌ ಬೇಕು ಎನ್ನುವವರು ಆ್ಯಂಟಿಕ್‌ ಬಂಗಾರದ ಆಭರಣಗಳನ್ನು ಖರೀದಿಸಬಹುದು. ಕುಸುರಿ ಕೆಲಸಕ್ಕೆ ಸಾಕ್ಷಿಯಾಗುವ ಟ್ರೆಡಿಷನಲ್‌ ಆ್ಯಂಟಿಕ್‌ ವಿನ್ಯಾಸದ ಜುವೆಲರಿಗಳು ಇಂದಿಗೂ ತಮ್ಮ ಸೊಗಡನ್ನು ಉಳಿಸಿಕೊಂಡಿವೆ. ಹೆಚ್ಚು ದಿನ ಬಾಳಿಕೆ ಕೂಡ ಬರುತ್ತವೆ. ಹಬ್ಬ-ಹರಿದಿನಗಳ ಉಡುಪುಗಳಿಗೆ ಸರಿಯಾದ ಆಯ್ಕೆ.

ಈ ಸುದ್ದಿಯನ್ನೂ ಓದಿ | Deepavali Fashion 2024: ದೀಪಾವಳಿ ಹಬ್ಬದ ದೇಸಿ ಫ್ಯಾಷನ್‌‌‌ನಲ್ಲಿ ಟ್ರೆಂಡಿಯಾದ ಗೋಲ್ಡನ್‌ ಎಥ್ನಿಕ್‌ ಡಿಸೈನರ್‌ವೇರ್ಸ್

ಜೆನ್‌ ಜಿ ಹುಡುಗಿಯರ ನೆಚ್ಚಿನ ಫ್ಯಾಷನ್‌ ಜ್ಯುವೆಲರಿ

ಕಂಟೆಂಪರರಿ ವಿನ್ಯಾಸದ ಆಭರಣಗಳು ಬೇಕಿದ್ದಲ್ಲಿ, ಫ್ಯಾಷನ್‌ ಜ್ಯುವೆಲರಿಗಳನ್ನು ಆಯ್ಕೆ ಮಾಡಿ. ಊಹೆಗೂ ಮೀರಿದ ಡಿಸೈನ್‌ನವು ದೊರೆಯುತ್ತವೆ. ಇವನ್ನು, ಜೆನ್‌ ಜಿ ಹುಡುಗಿಯರು ಮಾತ್ರವಲ್ಲ, ಉದ್ಯೋಗಸ್ಥ ಮಹಿಳೆಯರು ಧರಿಸಬಹುದು. ದಿನನಿತ್ಯದ ಕ್ಯಾಶುವಲ್‌ ಉಡುಪುಗಳೊಂದಿಗೂ ಧರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)