ಪಾವಗಡ: ಜೋಳಿಗೆ ಹಿಡಿದು ಭಿಕ್ಷೆ ಬೇಡಿ ತಂದು ಪಾವಗಡ ತಾಲೂಕಿನ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿರುವ ರಾಮಕೃಷ್ಣ ಸೇವಾ ಶ್ರಮದ ಜಪಾನಂದ ಸ್ವಾಮಿಜೀ ಹಾಗೂ ಇನ್ಫೋಸಿಸ್ ಸಂಸ್ಥೆಯ ಎನ್.ಆರ್.ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಯವರ ಕೊಡುಗೆಗೆ ಈ ಭಾಗದ ಜನರ ಋಣ ತೀರಿಸಬೇಕು ಎಂದು ಮಾಜಿ ಸಚಿವ, ಶಾಸಕ ವೆಂಕಟರಮಣಪ್ಪ ಹೇಳಿದರು.
ಇನ್ಫೋಸಿಸ್ ಫೌಂಡೇಶನ್, ರಾಮಕೃಷ್ಣ ಸೇವಾ ಆಶ್ರಮ ಸಹಯೋಗದೊಂದಿಗೆ ಪಟ್ಟದ ಶತಮಾನದ ಸರ್ಕಾರಿ ಮಾದರಿ ಹಿರಿಯ ಬಾಲಕರ ಪಾಠಶಾಲೆಯಲ್ಲಿ ದೂರತರಂಗ ಶಿಕ್ಷಣ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರು ಎಂಬು ದಾದ ಹೆಸರು ಕಟ್ಟ ಕಡೆಯವಾಗಿ ಶಾಶ್ವತವಾಗಿ ಉಳಿಯುವುದು ಶಿಕ್ಷಣವನ್ನು ನೀಡುವಂತಹ ಶಿಕ್ಷಕರಿಗೆ ಮಾತ್ರ ಸಲ್ಲುತ್ತದೆ.
ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಪೋಷಕರು ಕಳಿಸಲು ಹಿಂಜರಿಕೆ ಕಾರಣ ಎಂದರೆ ಶಿಕ್ಷಕರ ಕೊರತೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೇಳೆಗೆ ಬಸ್ ಸೌಕರ್ಯಗಳ ಸಮಸ್ಯೆ ಗಳಿಂದ ತಂದೆ ತಾಯಿ ಪಡುವ ಕಷ್ಟಗಳು ಮಕ್ಕಳು ಮನೆ ಮನೆ ಗೆ ಒಬ್ಬರು ಅಧಿಕಾರಿಗಳಾಗುತ್ತಿದ್ದರು.
ರಾಮಕೃಷ್ಣ ಸೇವಾ ಶ್ರಮದ ಜಪಾನಂದ ಸ್ಬಾಮಿ ಹೇಳುತ್ತಿದ್ದರು. ಆರು ಲಕ್ಷ ಜನರಿಗೆ ಆರೋಗ್ಯದ ದೃಷ್ಟಿಯಲ್ಲಿ ಸೇವೆ ಮಾಡಿರು ವುದು ನಿಜಕ್ಕೂ ಯಾರು ಮಾಡಿದಂತಹ ಸೇವೆ ಸ್ವಾಮಿಜಿ ಈ ತಾಲೂಕಿನಲ್ಲಿ ಮಾಡಿದ್ದಾರೆ. ಇಂದು ಸ್ವಾಮೀಜಿ ಮತ್ತು ಶಾಸಕರ ಅಭಿವೃದ್ಧಿ ಕೆಲಸಗಳಿಗೆ ಬಹಾಳಷ್ಟು ಬಗ್ಗೆ ಟೀಕೆ ಮಾಡುತ್ತಾರೆ ಟೀಕೆ ಮಾಡುವವರು ಬುದ್ಧಿಜೀವಿಗಳು ಮಾಡುವುದಿಲ್ಲ ಅಮಾಯಕರು ಇಂತಹ ಟೀಕೆ ಮಾಡುತ್ತಾರೆ ಎಂದರು.
ರಾಮಕೃಷ್ಣ ಸೇವಾ ಶ್ರಮದ ಅಧ್ಯಕ್ಷರಾದ ಜಪಾನಂಜೀ ಮಾತನಾಡಿ, ಕೋವಿಡ್ 19ರ ಭಯಾನಕ ಪರಿಣಾಮವಾಗಿ ಶಾಲೆಗಳಲ್ಲಿ ದೂರತರಂಗ ಶಿಕ್ಷಣ ಆರಂಭಗೊಂಡಿದ್ದು, ತಾಲ್ಲೂಕಿನ ಬಹುತೇಕ ಹಿಂದುಳಿದ ಪ್ರದೇಶಗಳ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಂತಹಾ ಶಾಲೆಗಳಿಗೆ ದೂರತರಂಗ ಶಿಕ್ಷಣ ನೀಡಲು ಮುಂದಾಗಿದ್ದೆವೆ.ಇನ್ನೂ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಮರಿದಾಸನ ಹಳ್ಳಿ ಯ ಶಾಲೆ. ಗೌಡೇಟಿ ಗ್ರಾಮ ಶಾಲೆ.ನಾಗಲಮಡಿಕೆ ಗ್ರಾಮದ ಶಾಲೆ.ದೊಡ್ಡಹಳ್ಳಿ ಗ್ರಾಮದ ಶಾಲೆ ಗಳು ದೂರತರಂಗ ಶಿಕ್ಷಣಕ್ಕೆ ಆಯ್ಕೆ ಮಾಡಲಾಗಿದೆ.
ಈ ವೇಳೆ ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ.ಪುರಸಭೆ ಉಪಾಧ್ಯಕ್ಷೆ ಸುಧಾಲಕ್ಷೀ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ, ಪವನ್ ಕುಮಾರ್ ರೆಡ್ಡಿ ಸದಸ್ಯ ಸುದೇಶ್ ಬಾಬು, ಬಸವರಾಜ್, ಸಾದೀಕ್ ಉಲ್ಲಾ ಷರೀಫ್ ಉಪಸ್ಥಿತರಿದ್ದರು.