Thursday, 12th December 2024

ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತರಾಗಿರಲಿಲ್ಲ: ಹಿರಿಯ ನ್ಯಾಯಾಧೀಶೆ ಎಂ. ಭಾರತಿ

ಹರಪನಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಭಾರತ ಸಂವಿಧಾನ ರಚನೆ ಮಾಡಿದಾಗ ಯಾವುದೋ ಜಾತಿಗೆ ಸಂವಿಧಾನ ರಚನೆ ಮಾಡಲಿಲ್ಲ. ಅವರು ಈ ದೇಶದ ಪ್ರತಿಯೋಬ್ಬ ನಾಗರಿಕರಿಗೂ ಅನ್ವಯವಾಗುವಂತೆ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ತಾಲೂಕು ಅಧ್ಯಕ್ಷರಾದ ಎಂ. ಭಾರತಿ ಪ್ರತಿಪಾದಿಸಿದರು.

ಪಟ್ಟಣದ ವಕೀಲರ ಸಂಘದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಹರಪನಹಳ್ಳಿ ವಕೀಲರ ಸಂಘ, ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸಂವಿಧಾನ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಸಂವಿಧಾನದ ಪ್ರತಿಜ್ಞಾ ವಿಧಿಯ ಶಂಕಲ್ಪವನ್ನು ಭೋದಿಸಿ ಬಳಿಕ ಮಾತನಾಡಿದರು.

ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದೀ ಸರ್ವಧರ್ಮ ಸಮುಭಾವದ ಪ್ರಜಾಸತ್ತತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಅಮಸ್ತ ನಾಗರೀಕರಿಗೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಾ, ವಿಚಾರ, ಅಭಿವ್ಯಕ್ತಿ, ವಿಶ್ವಸ, ಧರ್ಮಶ್ರದ್ದೇ ಮತ್ತು ಉಪಾಸನಾ ಸ್ವಾತಂತ್ರö್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ಸಾರಿದ್ದಾರೆ ಎಂದು ವಿಶ್ಲೇಷಿಸಿದರು.

ಸಮಾಜದಲ್ಲಿ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟçದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃ ಭಾವನೆ ಯನ್ನು ವೃದ್ಧಿಗೊಳಿಸಲು ಕಾರಣಿಭೂತರಾಗಿದ್ದರು. ನಮ್ಮ ಸವಿಂದಾನ ಸಭೆಯಲ್ಲಿ ೧೯೪೯ ರ ನವ್ಹೆಂಬರ್ ೨೬ ರಂದು ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿ ಸಂವಿಧಾನ ದಿನವನ್ನಾಗಿ ಆಚರಿಸಲು ಅವಕಾಶ ಮಾಡಿ ಕೊಟ್ಟ ಮಹನೀಯರನ್ನು ಇಂದು ನೆನೆಯ ಬೇಕಾಗಿದೆ ಎಂದರು.

ನಮ್ಮ ದೇಶದಲ್ಲಿ ಕಾಡುತ್ತಿರುವ ಅನಿಷ್ಠ ಪದ್ದತಿಯಾದ ದೇವದಾಸಿ ಪದ್ದತಿಯನ್ನು ನಾವು ನೀವು ಎಲ್ಲರೂ ಸೇರಿ ಕಾನೂನಿನ ಚೌಕಟ್ಟಿನಲ್ಲೇ ನೀಚಪದ್ದತಿಯನ್ನು ಹೋಗಲಾಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಫಕ್ಕಿರವ್ವ ಕೆಳಗೇರಿ, ಅಪರ ಸರ್ಕಾರಿ ವಕೀಲ, ವಿ.ಜಿ. ಪ್ರಕಾಶ್‌ಗೌಡ, ವಕೀಲರ ಸಂಘದ ಉಪಾಧ್ಯಕ್ಷ ಟಿ. ವೆಂಕಟೇಶ್, ಕಣವಿಹಳ್ಳಿ ಮಂಜು ನಾಥ ಮಾತನಾಡಿದರು, ಸಹಾಯಕ ಸರ್ಕಾರಿ ಅಭಿಯೋಜಕರಾದ ಎನ್. ಮಿನಾಕ್ಷಿ, ನಿರ್ಮಲ, ವಕೀಲರಾದ ಮುತ್ತಿಗಿ ರೇವಣ ಸಿದ್ದಪ್ಪ, ನ್ಯಾಯಾಲಯದ ಸಿಬ್ಬಂಧಿಗಳಾದ ರೇವಣಸಿದ್ದಪ್ಪ, ಕೋಟ್ರೇಶ್, ಬಸವರಾಜ್, ಮತ್ತು ಇತರರು ಉಪಸ್ಥೀತರಿದ್ದರು.