Thursday, 12th December 2024

ಬಟಗೇರಾದಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ

ಸೇಡಂ: ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 115ನೇ ಜಯಂತೋತ್ಸವ ಕಾರ್ಯಕ್ರಮವನ್ನು ತಾಲೂಕಿನ ಬಟಗೆರಾ ಬಿ ಗ್ರಾಮದಲ್ಲಿ ಆಚರಿಸಲಾಯಿತು.

ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಸೇಡಂ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಪುಷ್ಪನಮನ ಮಾಡಿ ಗೌರವ ನಮನ ಸಲ್ಲಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಮಲಕಪ್ಪ ಪೂಜಾರಿ, ಜೆಡಿಎಸ್ ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪವತಿ, ತಾಲೂಕ ಮಹಾ ಪ್ರಧಾನ ಕಾರ್ಯ ದರ್ಶಿ ಶಿವಪುತ್ರಪ್ಪ, ಎಸ್. ಮೋಘಾ, ಮಹಾದೇವಿ, ರಾಜೇಶ್ವರಿ, ಬಸರೆಡ್ಡಿ, ಶರಣು, ಗ್ರಾಮ ಪಂಚಾ ಯತ್ ಸದಸ್ಯರು, ಊರಿನ ಗಣ್ಯರು ಹಾಗೂ ಜೆಡಿಎಸ್ ಮುಖಡರು ಹಾಗು ಕಾರ್ಯಕರ್ತರು  ಉಪಸ್ಥಿತರಿದ್ದರು.