Sunday, 15th December 2024

ದುರ್ಗಾ ದೇವಿಗೆ ವಿಶೇಷ ಪೂಜೆ

ಕೊಲ್ಹಾರ: ಸರ್ವರಿಗೆ ನವರಾತ್ರಿಯು ಶಾಂತಿ, ಸೌಹಾರ್ದತೆ ಕರುಣಿಸಲಿ ನಾಡು ಸಮೃದ್ಧವಾಗಿರಲಿ ಎಂದು ಯುವನಾಯಕಿ ಸಂಯುಕ್ತಾ ಎಸ್ ಪಾಟೀಲ್ ಹೇಳಿದರು.

ನವರಾತ್ರಿಯ ಪ್ರಯುಕ್ತ ಪಟ್ಟಣದಲ್ಲಿ ದುರ್ಗಾ ದೇವಿಗೆ ವಿಶೇಷ ಪೂಜೆ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡು ಮಾತನಾಡಿದ ಅವರು ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಭಕ್ತಿಯ ಆರಾಧನೆ ಅಭಿ ವ್ಯಕ್ತಿಯ ವಿಶಿಷ್ಟ ವಾದ ಸದ್ಗುಣವನ್ನು ತೋರಿಸುತ್ತದೆ ಮತ್ತು ಆಧ್ಯಾತ್ಮಿಕತೆ ಯನ್ನು ಪ್ರಚೂರಪಡಿಸುತ್ತದೆ. ಒಂಬತ್ತು ಅವತಾರಗಳ ದುರ್ಗಾ ದೇವಿಯ ಕೃಪೆಯಿಂದ ನಾಡು ಶಾಂತಿ, ಸೌಹಾರ್ದತೆಯಿಂದ ಸಮೃದ್ಧವಾಗಿರಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡ ಸಿ.ಎಂ ಗಣಕುಮಾರ, ಮಲ್ಲು ಗಣಿ, ಪ.ಪಂ ಸದಸ್ಯರಾದ ಶ್ರೀಶೈಲ ಮುಳವಾಡ, ನಿಂಗು ಗಣಿ, ಮಹಾಂತೇಶ ಗಿಡ್ಡಪ್ಪಗೋಳ, ಇಕ್ಬಾಲ್ ನದಾಫ, ದಶರಥ ಈಟಿ, ಮುನ್ನಾ ಗಣಿ, ಮಹಾದೇವಿ ಈಟಿ, ಕಮಲಾಬಾಯಿ ಮಾಕಾಳಿ ಇತರರು ಇದ್ದರು.