Friday, 27th September 2024

Ear Cuffs Fashion: ಯುವತಿಯರ ಕಿವಿಯನ್ನು ಅಲಂಕರಿಸುತ್ತಿರುವ ಇಯರ್‌ ಕಫ್ಸ್!

Ear Cuffs Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವೈವಿಧ್ಯಮಯ ಇಯರ್‌ ಕಫ್‌ಗಳು ಫ್ಯಾಷನ್‌ ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ಈ ಸೀಸನ್‌ನ ಫ್ಯಾಷನ್‌ ಜ್ಯುವೆಲರಿಗಳಲ್ಲಿ ಇದೀಗ ಹೊಸತಾಗಿ ನವನವೀನ ವಿನ್ಯಾಸಗಳಲ್ಲಿ ಆಗಮಿಸಿರುವ ನಾನಾ ಬಗೆಯ ಡಿಸೈನರ್‌ ಇಯರ್‌ ಕಫ್‌ಗಳು (Ear Cuffs Fashion) ಯುವತಿಯರ ಕಿವಿಗಳನ್ನು ಸಿಂಗರಿಸುತ್ತಿವೆ. ಕಿವಿಯೋಲೆ ಬೇಡ, ಕೊಂಚ ಡಿಫರೆಂಟಾಗಿ ಕಾಣಿಸಬೇಕು ಎಂದು ಬಯಸುವ ಯುವತಿಯರು ಇಯರ್‌ ಕಫ್‌ಗಳನ್ನು(Ear Cuffs) ಧರಿಸಬಹುದು. ಮೂಲತಃ ಹಾಲಿವುಡ್‌ (Hollywood) ನಟಿಯರಿಂದ ಸ್ಪೂರ್ತಿಗೊಂಡು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಈ ಇಯರ್‌ ಕಫ್‌ಗಳು ವೆಸ್ಟರ್ನ್‌ ಲುಕ್‌ಗೆ ಮಾತ್ರವಲ್ಲ, ದೇಸಿ ಎಥ್ನಿಕ್‌ ವೇರ್‌ಗಳಿಗೂ ಹೊಂದುವಂತಹ ಡಿಸೈನ್‌ನಲ್ಲಿ, ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ.

ಚಿತ್ರಕೃಪೆ: ಪಿಕ್ಸೆಲ್‌

ಏನಿದು ಇಯರ್‌ ಕಫ್‌

ಕಿವಿಯ ಮೇಲ್ಭಾಗವನ್ನು ಕವರ್‌ ಮಾಡುವ ದೊಡ್ಡದಾದ ಇಯರಿಂಗ್‌ಗಳಿವು. ನೋಡಲು ಕಿವಿಯ ಓಲೆಯಂತೆ ಧರಿಸಿದರೂ ಆ ಓಲೆಯ ಎಕ್ಸ್ಟೆಂಡೆಡ್‌ ಭಾಗವು ಕಿವಿಯ ಮೇಲ್ಭಾಗದವರೆಗೂ ಹರಡುತ್ತದೆ. ನೋಡಲು ಇಡೀ ಕಿವಿಯನ್ನು ಆವರಿಸುತ್ತದೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್ ಟೀನಾ.

ಅವರ ಪ್ರಕಾರ, ಈ ಇಯರ್‌ ಕಫ್‌ಗಳನ್ನು ಯಾರು ಬೇಕಾದರೂ ಸುಲಭವಾಗಿ ಧರಿಸಬಹುದು. ಇದನ್ನು ಧರಿಸಲು ಸಾಲುಸಾಲಾಗಿ ಕಿವಿ ಚುಚ್ಚಬೇಕೆಂದಿಲ್ಲ. ಸಾಮಾನ್ಯವಾಗಿ ಧರಿಸುವ ಓಲೆಯಂತೆಯೇ ಇವನ್ನು ಧರಿಸಿದರೇ ಸಾಕು, ಮೇಲ್ಭಾಗಕ್ಕೆ ತಿರುಗಿಸಿದರೇ ಸಾಕು ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಇಯರ್‌ ಕಫ್‌ಗಳು

ಮಲ್ಟಿ ಸ್ಟೋನ್ಸ್ ಪಾರ್ಟಿ ವೇರ್‌, ಬ್ಲ್ಯಾಕ್‌ ಸ್ಟೋನ್ಸ್, ಡ್ರ್ಯಾಗನ್‌ ರೆಪ್ಟೈಲ್ಸ್, ಜಾಮೆಟ್ರಿಕಲ್‌ ಡಿಸೈನ್‌, ಫ್ಲೋರಲ್‌ ಡಿಸೈನ್‌ನವು ಬ್ಲ್ಯಾಕ್‌ ಮೆಟಲ್‌, ವೈಟ್‌ ಮೆಟಲ್‌, ಸಿಲ್ವರ್‌ ಹೀಗೆ ನಾನಾ ಬಗೆಯಲ್ಲಿ ಟ್ರೆಂಡ್‌ನಲ್ಲಿವೆ. ಕೆಲವು ಇಯರ್‌ ಕಫ್‌ಗಳು ಫಂಕಿ ಲುಕ್‌ ಕೊಡುತ್ತವೆ. ಇವನ್ನು ರೆಟ್ರೊ ಸ್ಟೈಲ್‌ಗೂ ಮ್ಯಾಚ್‌ ಮಾಡಬಹುದು. ಇನ್ನು ಡಿಸೆಂಟ್‌ ಮಹಿಳೆಯರು ಧರಿಸಬಹುದಾದ ಜೆರ್ಕೋನ್‌, ಡೈಮಂಡ್‌, ಗೋಲ್ಡ್ ವಿನ್ಯಾಸದ ಇಯರ್‌ ಕಫ್‌ಗಳು ಇತ್ತೀಚೆಗೆ ಜ್ಯುವೆಲರಿ ಲೋಕದಲ್ಲಿ ನಿಧಾನಗತಿಯಲ್ಲಿ ಪಾಪುಲರ್‌ ಆಗುತ್ತಿವೆ.

ಇಯರ್‌ ಕಫ್‌ ಆಯ್ಕೆ ಹೇಗೆ?

ನಿಮ್ಮ ಮುಖಕ್ಕೆ ಹೊಂದುವಂತಹ, ನಿಮ್ಮ ಸ್ಟೈಲ್‌ಗೆ ಸೂಟ್‌ ಆಗುವಂತಹ, ವೈಯಕ್ತಿಕ ಅಭಿರುಚಿ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಸ್ಟೈಲ್‌ ಸೂಪರ್‌ ಆಗಿರದಿದ್ದರೂ ಸಿಂಪಲ್ಲಾದ ಇಯರ್‌ ಕಫ್‌ ಧರಿಸಿದರೂ ಸಾಕು, ಸ್ಟೈಲಿಶ್‌ ಲುಕ್‌ ನಿಮ್ಮದಾಗುತ್ತದೆ.

ಈ ಸುದ್ದಿಯನ್ನೂ ಓದಿ | Star Fashion: ಬ್ಲ್ಯಾಕ್‌ ಶೀರ್‌ ಸೀರೆಯಲ್ಲಿ ನಟಿ, ಮಾಜಿ ಮಿಸ್‌ ಕರ್ನಾಟಕ ಶಿಲ್ಪಾ ಮಂಜುನಾಥ್‌ ಗ್ಲಾಮರಸ್‌ ಲುಕ್!

ಕಂಪ್ಲೀಟ್‌ ಮೆಟಲ್‌ನಲ್ಲೆ ಡಿಸೈನ್‌ಗೊಂಡ ಇಯರ್‌ ಕಫ್ಸ್ ಫಾಸ್ಟ್‌ ಮೂವಿಂಗ್‌ನಲ್ಲಿದೆ. ಪಾರ್ಟಿಗೆ ಹೋಗುವಾಗ ಅತ್ಯಾಕರ್ಷಕವಾದ ಸ್ಟೋನ್ಸ್ ಇರುವಂತಹ ಇಯರ್‌ ಕಫ್‌ಗಳನ್ನು ಧರಿಸಬಹುದು. ಫ್ರೀ ಹೇರ್‌ಸ್ಟೈಲ್‌ ಬದಲು ಪೋನಿಟೇಲ್‌, ಹನ್‌ ಅಥವಾ ಬನ್‌ ಹೇರ್‌ಸ್ಟೈಲ್‌ ಈ ಸ್ಟೈಲಿಂಗ್‌ಗೆ ಹೊಂದುತ್ತದೆ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ಸಿಯಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)