Wednesday, 11th December 2024

ಪೋಷಕರು ಮಕ್ಕಳನ್ನು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ : ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ

ಹರಪನಹಳ್ಳಿ ; ಪೋಷಕರು ಮಕ್ಕಳನ್ನು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿ, ಕಾನೂನನ್ನು ಗೌರಿಸಬೇಕು ಕಾನೂನು ಎಂಬ ಜ್ಞಾನವನ್ನು ಸೃಜನಾತ್ಮಕ ವಿಚರದಲ್ಲಿ ತಿಳಿದುಕೊಂಡು, ನೆರವೆರಯರಿಗೆ ಮಾರ್ಗದರ್ಶಿ ವ್ಯಕ್ತಿಯಾಗಿ ತಿಳಿದುಕೊಳ್ಳಬೇಕು. ಮಕ್ಕಳು ಬರೇ ಶಾಲೆ ಓದಿದರೆ ಸಾಲದು, ಮಹನೀಯರ ಆದರ್ಶದ ಬದುಕನ್ನು ನೋಡಿ ಕಲಿಯಬೇಕು, ಫಾರಿನ್ ಶಿಕ್ಷಣವನ್ನು ಬಿಟ್ಟು ದೇಶದ ಶಿಕ್ಷಣವನ್ನು ಪಡೆದು ತಂದೆ. ತಾಯಿಗೆ ಮಾದರಿ ಮಕ್ಕಳಾಗಿ ಎಂದು ಹರಪನಹಳ್ಳಿ ಜೆ.ಎಂ.ಎಫ್.ಸಿ. ನ್ಯಾಯಾಲ ಯದ ನ್ಯಾಯಾಧೀಶರಾದ ಎಂ. ಭಾರತಿ ಪ್ರತಿಪಾದಿಸಿದರು.

ಪಟ್ಟಣದ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆರ್ಹ ಫಲಾನುಭವಿ ಗಳಿಗೆ ಸರ್ಕಾರದ ಕಲ್ಯಾಣ ಯೋಜನೆಯನ್ನು ವಿತರಿಸುವ ಮೇಗಾ ಶಿಬಿರ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಕಲ ಚೇತನರಿಗೆ ಗುರುತಿನ ಚೀಟಿ ವಿತರಿಸಿದ ಬಳಿಕ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಯು ಸಹ ಕಾನೂನು ಬಗ್ಗೆ ತಿಳಿದುಕೊಳ್ಳಲು ಅವಕಾಶ ವಿರುತ್ತದೆ, ದೌರ್ಜನ್ಯಕ್ಕೆ ಒಳಗಾದ ಸಾರ್ವಜನಿಕರು ಪ್ರತಿಯೊಬ್ಬರೂ ಕಾನುನಿನ ಅರಿವು ನೆರವು ಪಡೆದುಕೊಳ್ಳಬೇಕು . ಹುಟ್ಟಿದಾಗಿನಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಕಾನೂನು ಬಗ್ಗೆ ತಿಳಿದುಕೊಳಬೇಕು, ವಾಹನ ಸವಾರರು ಪ್ರತಿಯೋಬ್ಬರು ಪರವಾನಿಗೆ ಪಡೆದುಕೊಂಡು ವಾಹನ ಚಲಾಯಿಸಬೇಕು, ಎಂದರು

ಹಿರಿಯರನ್ನು ಗೌರವಿಸಿದರೆ ನಿಮ್ಮದಿಯ ಜೀವನವನ್ನು ಕಾಣುವುದಕ್ಕೆ ಸಾದ್ಯವಾಗುತ್ತದೆ, ಹಿರಿಯ ನಾಗರಿಕರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ನೆಮ್ಮದಿಯ ಜೀವನ ಮಾಡಿಕೊಳ್ಳಬೇಕು. ವಿಕಲಚೆತನರನ್ನು ಮನವಿಯತೆ ತೋರಬೇಕು ಗೌರವದಿಂದ ಕಾಣಬೇಕು, ಯಾರಿಗೂ ತಾರತಮ್ಯವನ್ನು ಮಾಡಬಾರದು, ವಿಕಲ ಚೇತನ ಎನ್ನುವುದು ಯಾವ ಶಾಪನುಲ್ಲ ವರನುಲ್ಲ , ಮಹಿಳೆಯರು ಆರೋಗ್ಯವಂತ ಮಕ್ಕಳನ್ನು ಪಡೆದುಕೊಳಬೇಕದರೆ ಪೌಷ್ಟಿಕ ಆಹಾರವನ್ನು ಸೆವಿಯಬೇಕು, ಜೀವ ಇದ್ದರೆ ಜೀವನ , ನೀರಿನ ಮೇಲೆ ತೇಲಾಡುವ ನಮ್ಮ ಜೀವನ ಯಾವ ಹಂತದಲ್ಲಿ ಏನಾಗುತ್ತದೆ ಎಂದು ನಮಗೆ ಗೋತ್ತಿಲ್ಲ ಇರುವಷ್ಟು ದಿನ ಸಮಾಜಕ್ಕಾಗಿ ಏನಾದರೂ ಸಾಧನೆ ಮಾಡಿ ಎಂದು ವಿಶ್ಲೇಷಿಸಿದರು.

ಸಿವಿಲ್ ನ್ಯಾಯಾಧೀಶರಾದ , ಫಕ್ಕೀರವ್ವ ಕೆಳಗೇರಿ, ಮಾತನಾಡಿ, ಆಧಾರ ಕಾರ್ಡ್ ಪ್ರತಿಯೊಬ್ಬ ಪ್ರಜೆಗೂ ಅತ್ಯವಶ್ಯಕ ,ಆಧಾರ ಕಾರ್ಡ್ ಕುಟುಂಬದ ಜವಾಬ್ದಾರಿ, ಯಾವುದೇ ರೀತಿ ದುರುಪಯೋಗ ಪಡೆದುಕೊಳ್ಳವುದನ್ನು ತಡೆಗಟ್ಟಬಹುದು, ಸಂಬAಧಪಟ್ಟ ಪ್ರಾಧಿಕಾರದ ಮುಂದೆ ಆಧರ್ ಕಾರ್ಡ್ನ್ನುನ್ನು ಬಳಿಸುತ್ತಾರೆ ಆದ್ದರಿಂದ ಸಾರ್ವಜನಿಕರು ತಪ್ಪದೇ ಕಡ್ಡಾಯವಾಗಿ ನಿಮ್ಮ ಜೀವದ ಜೊತೆ ಒಂದು ಆಧಾರ್ ಕಾರ್ಡ್ನ್ನು ಮಾಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ, ವಕೀಲರ ಸಂಘದ ಅಧ್ಯಕ್ಷ, ಕೆ.ಚಂದ್ರಗೌಡ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಎಂ.ಮೃತAಜಯ್ಯ, ಗ್ರೇಡ್ ೨ ತಹಶಿಲ್ದಾರ ಪ್ರಕಾಶಗೌಡ , ಧನರಾಜ್, ಸರೋಜ, ಶೇಖರ್ ಗೌಡ, ಬಿ.ಗೋಣಿ ಬಸಪ್ಪ, ಮುತ್ತಿಗಿ ರೇವಣಸಿದ್ದಪ್ಪ, ಕೆ.ಎಸ್. ವಾಮದೇವ, ಬಂಡ್ರಿ ಆನಂದ, ಎಸ್.ಜಿ.ತಿಪ್ಪೇಸ್ವಾಮಿ. ಸಿ. ಜಾತಪ್ಪ ಎಂ. ನಾಗೇಂದ್ರಪ್ಪ, ಸಿ. ಹನುಮಂತಪ್ಪ, ಬಿ.ತಿಪ್ಪೇಶ್, ರೇವಣಸಿದ್ದಪ್ಪ, ಬಸವರಾಜ್. ಬಿ. ಕೊಟ್ರೇಶ್,ಚನ್ನಮಲ್ಲಪ್ಪ, ಮತ್ತು ಇತರರು ಇದ್ದರು.