ಬೆಂಗಳೂರು: ಶಿಕ್ಷಕರಲ್ಲಿ ಓದು ಮತ್ತು ಬರವಣಿಗೆಯ ಕೌಶಲವನ್ನು ಉತ್ತೇಜಿಸಲು ಬೆಂಗಳೂರಿನ ಸದಾತನ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು (Essay Competition) ಏರ್ಪಡಿಸಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ʼವರ್ತಮಾನದ ಸಮಸ್ಯೆಗಳಿಗೆ ಸನಾತನ ಧರ್ಮದಲ್ಲಿದೆ ಪರಿಹಾರʼ ಎಂಬ ವಿಷಯ ಕುರಿತು ಪ್ರಭಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸದಾತನ ಟ್ರಸ್ಟ್ನ ಟ್ರಸ್ಟೀ ಕೆ.ಎಸ್. ಉಪಾಧ್ಯಾಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು 13 ಬಹುಮಾನಗಳನ್ನು ನೀಡಲು ನಿರ್ಧರಿಸಲಾಗಿದ್ದು, ಪ್ರಥಮ ಬಹುಮಾನ 21 ಸಾವಿರ ರೂ., ದ್ವಿತೀಯ ಬಹುಮಾನ 18 ಸಾವಿರ ರೂ., ತೃತೀಯ ಬಹುಮಾನ 15 ಸಾವಿರ ರೂ., 10 ಮೆಚ್ಚುಗೆ ಬಹುಮಾನಗಳು ತಲಾ 10 ಸಾವಿರ ರೂ. ಆಗಿದೆ.
ಈ ಸುದ್ದಿಯನ್ನೂ ಓದಿ | Job Guide: ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ನ 118 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಸ್ಪರ್ಧೆಯಲ್ಲಿ ಭಾಗವಹಿಸಲು ನಿಯಮಗಳು ಏನೇನು?
ಖಾಸಗಿ-ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಭಾಗವಹಿಸಬಹುದು. ಪ್ರಬಂಧವು 2500 ರಿಂದ 3000 ಶಬ್ಧಗಳ ಮಿತಿಯಲ್ಲಿರಬೇಕು. ಸ್ಪರ್ಧಿಗಳು ಟೈಪ್ ಮಾಡಿ ಕಳುಹಿಸುವುದಾದಲ್ಲಿ ನುಡಿ ಅಥವಾ ಯೂನಿಕೋಡ್ನಲ್ಲಿ ಕಳಿಸಬೇಕಾದ ಇ-ಮೇಲ್: sadaatana2024@gmail.com
ಸ್ಪರ್ಧಿಗಳು ಕೈಬರಹದಲ್ಲಿ ಪ್ರಬಂಧವನ್ನು ಕಳುಹಿಸುವುದಾದಲ್ಲಿ ವಿಳಾಸ: ʼಸದಾತನʼ, ಎಸ್.ಎಫ್.-1, 73/6, ಶ್ರೀಲಕ್ಷ್ಮೀ ರೆಸಿಡೆನ್ಸಿ, ದೇವನಾಥಾಚಾರ್ ಸ್ಟ್ರೀಟ್, ಚಾಮರಾಜಪೇಟೆ, ಬೆಂಗಳೂರು-560 018
ಸ್ಪರ್ಧಿಗಳು ಪ್ರಬಂಧದೊಂದಿಗೆ ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಶಾಳೆಯ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದು ಕಳುಹಿಸಬೇಕು. ಹಾಗೂ ತಮ್ಮ ಶಾಲೆಯ ಗುರುತಿನ ಪತ್ರದ ನಕಲನ್ನು ಕಳುಹಿಸಬೇಕು. ಸ್ಪರ್ಧೆಗೆ ನೋಂದಣಿ ಶುಲ್ಕ 100 ರೂ. ಗಳಾಗಿದ್ದು, ನೋಂದಣಿಗೆ ಡಿ.31 2024 ಕೊನೆಯ ದಿನಾಂಕವಾಗಿದೆ.
ಈ ಸುದ್ದಿಯನ್ನೂ ಓದಿ | Bengaluru Power Cut: ಡಿ.11, 12ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಪ್ರಬಂಧ ತಲುಪಿಸಲು ಕೊನೆಯ ದಿನಾಂಕ ಜ.14 2025 ಆಗಿದ್ದು, ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ಆಯೋಜಕರ ನಿರ್ಣಯವೇ ಅಂತಿಮವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಮೊ.ಸಂ. 7483681708 WhatsApp ಮಾಡಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.