Thursday, 19th September 2024

ನೆಲಮಂಗಲದ ಬಳಿ ಕಾರು ಪಲ್ಟಿ : ಮಾಜಿ ಶಾಸಕಿಗೆ ಗಾಯ

ನೆಲಮಂಗಲ : ಮಾಜಿ ಶಾಸಕ ಶಾರದಾ ಪೂರ್ಯ ನಾಯ್ಕ್ ಪ್ರಯಾಣಿಸುತ್ತಿದ್ದ ಕಾರು, ನೆಲಮಂಗಲದ ಬಳಿ ಪಲ್ಟಿಯಾಗಿ, ಮಾಜಿ ಶಾಸಕಿ ಶಾರಾ ಪೂರ್ಯ ನಾಯ್ಕ್ ಅವರು ಗಾಯಗೊಂಡಿದ್ದಾರೆ.

ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಪಕ್ಷದ ಸಭೆಗಾಗಿ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ಮಾಜಿ ಶಾಸಕಿ ಶಾರದಾ ಅವರ ಕಾರು, ನೆಲಮಂಗಲದ ಬಳಿಯಲ್ಲಿ ಪಲ್ಟಿಯಾಗಿದೆ. ಇದರಿಂದಾಗಿ ಶಾಸಕಿ ಶಾರದ ಅವರ ಎಡಗಾಲು ಮುರಿದಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗು ತ್ತಿದೆ.

ಕಾರು ಪಲ್ಟಿಯಾಗಲು ಅತಿ ವೇಗವೇ ಕಾರಣ ಎನ್ನಲಾಗುತ್ತಿದೆ. ಚಾಲಕ ರವಿಗೂ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.