Sunday, 15th December 2024

ಮಾಜಿ ಶಾಸಕರ ಮೊಮ್ಮಕ್ಕಳು ಅನುಮಾನಾಸ್ಪದ ಸಾವು

ಸೂಕ್ತ ತನಿಖೆಗಾಗಿ ಶಾಸಕರಿಂದ ಗೃಹಮಂತ್ರಿಗೆ ಮನವಿ

ಮಾನವಿ : ತಾಲೂಕಿನ ಮಾಜಿ ಶಾಸಕ ಜಿ ಹಂಪಯ್ಯ ನಾಯಕ ಬಲ್ಲಟಗಿ ಇವರ 9 ವರ್ಷ ಮತ್ತು 4 ವರ್ಷದ ಮೊಮ್ಮಕ್ಕಳು ಮಾ.8 ರಂದು ಅನುಮಾನಾಸ್ಪದವಾಗಿ ಬಲ್ಲಟಗಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿರುವ ಬಗ್ಗೆ ಸೂಕ್ತ ತನಿಖೆಯನ್ನು ನಡೆಸುವಂತೆ ರಾಯಚೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಮಾನವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಇವರು ಇಂದು ರಾಜ್ಯದ ಗೃಹ ಮಂತ್ರಿ ಬಸವರಾಜ ಬೊಮ್ಮಯಿಯವರಿಗೆ ಮನವಿ ಸಲ್ಲಿಸಿದ್ದಾರೆ.

ರಾಯಚೂರು ಜಿಲ್ಲೆ ಮಾನ್ವಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಹಂಪಯ್ಯ ನಾಯಕ ಬಲ್ಲಟಗಿ ಇವರ 9 ವರ್ಷ ಮತ್ತು 4 ವರ್ಷದ ಮೊಮ್ಮಕ್ಕಳು, ಮಾ.7 ರಂದು ಮಧ್ಯಾಹ್ನ ಸಮಯದಲ್ಲಿ ಕಾಣೆಯಾಗಿದ್ದು, ಮಾ.8ರಂದು ಅನುಮಾನಾಸ್ಪದವಾಗಿ ಬಲ್ಲಟಗಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿರುತ್ತಾರೆ. ಇದೇ ರೀತಿಯ ಘಟನೆಯು ಕಳೆದ 2 ವರ್ಷದ ಹಿಂದೆ ಇದೇ ಗ್ರಾಮದ ಒಬ್ಬ ಬಾಲಕನು ಸಹ ಇದೇ ರೀತಿ ಶವವಾಗಿ ಪತ್ತೆಯಾಗಿದ್ದು, ಇದು ಬಲ್ಲಟಗಿ ಗ್ರಾಮದಲ್ಲಿ 4 ನೇ ಪ್ರಕರಣವಾಗಿರುತ್ತದೆ. ಇಂತಹ ಕೃತ್ಯಗಳು ನಡೆಯುತ್ತಿರುವುದರಿಂದ ತಾಲ್ಲೂಕು ತಲ್ಲಣಗೊಂಡಿದ್ದು ಮಕ್ಕಳನ್ನು ಹೊರಗೆ ಕಳುಹಿಸಲು ತಂದೆ ತಾಯಿ ಮತ್ತು ಪೋಷಕರು ಬಯಭೀತಗೊಂಡಿರುತ್ತಾರೆ. ಇದರಿಂದ ಹಿಂದೆ ಕಾಣದ ಕೈಗಳು ಮಕ್ಕಳನ್ನು ಅಪಹರಿಸಿ ಕೊಲ್ಲುವ ನೀಚಕೃತ್ಯಕ್ಕೆ ಕೈಹಾಕಿರುತ್ತಾರೆ.

ಆದ್ದರಿಂದ ತಾವುಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಒಂದು ವಿಶೇಷ ತಂಡವನ್ನು ರಚನೆ ಮಾಡಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಶಾಸಕರು ಮನವಿ ಪತ್ರ ನೀಡಿದ್ದಾರೆ‌. ಈ ಸಂಧರ್ಭದಲ್ಲಿ ಜೆ ಡಿ ಎಸ್ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತ ರಿದ್ದರು.