-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ನಯಾ ಲುಕ್‌ನಲ್ಲಿ (Fashion Guru Style Statement) ಕಾಣಿಸಿಕೊಂಡಿದ್ದಾರೆ. ಹೌದು, ಸದಾ ಒಂದಲ್ಲ ಒಂದು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಫ್ಯಾಷನ್ ಗುರು, ಈ ಬಾರಿ ವಿಭಿನ್ನ ಲುಕ್ ನೀಡುವ ಬೈನರಿ ಕೋಡ್ ಪ್ರಿಂಟ್ಸ್ ಇರುವಂತಹ ಇಕ್ಕಟ್ ಜಾಕೆಟ್ ಔಟ್‌ಫಿಟ್‌ನಲ್ಲಿ ಕೊಂಚ ಡಿಫರೆಂಟಾಗಿ ನಯಾ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಏನಿದು ಬೈನರಿ ಕೋಡ್ ಜಾಕೆಟ್?
ಅಂದಹಾಗೆ, ಈ ಔಟ್‌ಫಿಟ್ ವಿಶೇಷತೆ ಏನು ಗೊತ್ತೇ! ಇಡೀ ಇಕ್ಕಟ್ ಜಾಕೆಟ್ ತುಂಬೆಲ್ಲಾ ಒಂದು ಹಾಗೂ ಜೀರೋ ನಂಬರ್‌ಗಳ ಪ್ರಿಂಟ್ ಹರಡಿದೆ. ಎಲ್ಲೆಲ್ಲೂ ನಂಬರ್‌ಗಳ ರಾಶಿಯೇ ಕಾಣಿಸಿಕೊಂಡಿದೆ. ಸಾದಾ ಹಾಗೂ ಕಾಮನ್ ಪ್ರಿಂಟ್ಸ್ ಇದರ ಮೇಲಿಲ್ಲ! ಬದಲಿಗೆ ಎಂತಹವರನ್ನು ಕ್ಷಣ ಕಾಲ ಸೆಳೆಯುವಂತಹ ಡಿಫರೆಂಟ್ ಲುಕ್ ನೀಡುವಂತಹ ಬ್ಲ್ಯಾಕ್ ಅಕ್ಷರಗಳಲ್ಲಿ ಸಂಖ್ಯೆಗಳು ಹೈಲೈಟಾಗಿವೆ. ಈ ವಿಶೇಷ ಡಿಸೈನರ್‌ವೇರ್ ಡಿಸೈನ್ ಮಾಡಿರುವವರು ಬೇರ್ಯಾರು ಅಲ್ಲ! ಪ್ರಸಾದ್ ಬಿದ್ದಪ್ಪ ಅವರ ಸ್ನೇಹಿತರಾದ ಸೆಲೆಬ್ರೆಟಿ ಡಿಸೈನರ್ ಅಬ್ರಾಹಂ & ಠಾಕೂರ್. ಇಕ್ಕಟ್ ಜಾಕೆಟ್‌ನ ಈ ವಿಭಿನ್ನ ವಿನ್ಯಾಸ ಜಾಕೆಟ್ ಸೂಟ್‌ನಲ್ಲಿ ಖುದ್ದು ಪ್ರಸಾದ್ ಬಿದ್ದಪ್ಪ ಅವರೇ ಮಾಡೆಲ್‌ನಂತೆ ಕಾಣಿಸಿಕೊಂಡು ಫ್ಯಾಷನ್ ಪ್ರಿಯರನ್ನು ಸೆಳೆದಿದ್ದಾರೆ.
ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಫ್ಯಾಷನ್ ಟಾಕ್
ಆಗಾಗ್ಗೆ ನನ್ನ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಬದಲಾಗುತ್ತಿರುತ್ತವೆ. ಇನ್ನು, ಇಕ್ಕಟ್ ಜಾಕೆಟ್ ನನ್ನನ್ನು ಸೆಳೆದಿದೆ. ಬೈನರಿ ಕೋಡ್ ಹೊಂದಿರುವ ಈ ಜಾಕೆಟ್ ಕ್ಲಾಸಿಕ್ ಟೈಲರಿಂಗ್ ಕಾನ್ಸೆಪ್ಟ್ ಜತೆ ಟೆಕ್ ಜನರೇಷನ್ ಸ್ಪೂರ್ತಿಗೊಳ್ಳುವಂತಹ ಈ ವಿನ್ಯಾಸ ಈ ಸಾಂಪ್ರದಾಯಿಕ ಹಾಗೂ ವಿನೂತನ ಡಿಸೈನಿಂಗ್ ಥೀಮ್ ಹೊಂದಿದೆ. ಟೆಕ್ನಾಲಜಿ ಹಾಗೂ ಫ್ಯಾಷನ್‌ನ ಸಮ್ಮಿಲನ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ.
ಈ ಸುದ್ದಿಯನ್ನೂ ಓದಿ | Reliance Retail: ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಐಷಾರಾಮಿ ಬ್ಯೂಟಿ ಸ್ಟೋರ್ ಆರಂಭಿಸಿದ ಟಿರಾ!
ವಿಶೇಷತೆಯಿಂದ ಸೆಳೆದ ಇಕ್ಕಟ್ ಜಾಕೆಟ್
ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ ಪ್ರಸಾದ್ ಬಿದ್ದಪ್ಪ, ಇಂದು ಜನರೇಷನ್ ಬದಲಾದಂತೆ ಫ್ಯಾಷನ್ ಕೂಡ ಟೆಕ್ನಾಲಜಿಯ ಕಾನ್ಸೆಪ್ಟ್‌ಗಳನ್ನು ಅಳವಡಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಡಿಸೈನರ್ ಅಬ್ರಾಹಂ ಹಾಗೂ ಠಾಕೂರ್ ರೂಪಿಸಿರುವ ಈ ಇಕ್ಕಟ್ ಜಾಕೆಟ್ ತನ್ನದೇ ಆದ ಸಾಕಷ್ಟು ವಿಶೇಷತೆಯನ್ನು ಹೊಂದಿದೆ ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)