-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸುಮಾರು ಎರಡು ದಿನಗಳ ಕಾಲ ಉದ್ಯಾನಗರಿಯಲ್ಲಿ ನಡೆದ ಅಲೆಕ್ಸ್ ಡಿಸೈನರ್ ಶೋನಲ್ಲಿ (Fashion Show News) ಸುಮಾರು 25ಕ್ಕೂ ಹೆಚ್ಚು ಮಾಡೆಲ್‌ಗಳು ಭಾಗವಹಿಸಿದ್ದರು. ಎಥ್ನಿಕ್ ರೌಂಡ್‌ನಲ್ಲಿ ಕಾಂಚೀವರಂ ರೇಷ್ಮೆ ಸೀರೆಯನ್ನು ಉಟ್ಟು ಮಾಡೆಲ್‌ಗಳು ದೇಸಿ ಸ್ಟೈಲ್‌ನಲ್ಲಿ ವಾಕ್ ಮಾಡಿದರೆ, ವೆಸ್ಟರ್ನ್ ರೌಂಡ್‌ನಲ್ಲಿ ನಾನಾ ಬಗೆಯ ಗೌನ್‌ಗಳನ್ನು ಧರಿಸಿ ರ‍್ಯಾಂಪ್ ವಾಕ್ ಮಾಡಿ ನೋಡುಗರ ಮನ ಗೆದ್ದರು. ಇಪ್ಪತ್ತೈದು ಮಾಡೆಲ್‌ಗಳ ನಡುವೆ ಎಥ್ನಿಕ್ ರೌಂಡ್‌ನಲ್ಲಿ, ದೇಸಿ ಲುಕ್ ನೀಡುವ ಕಾಂಚೀವರಂ ರೇಷ್ಮೆ ಸೀರೆಯಲ್ಲಿ ತಾಜ್ ಮಿಸ್ ಯೂನಿವರ್ಸ್ ಟೈಟಲ್ ವಿಜೇತೆ ಡಾ. ಸಂಗೀತಾ ಹೊಳ್ಳ (Sangeeta Holla) ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ರ‍್ಯಾಂಪ್ ವಾಕ್ ಮಾಡಿದರು. ವೆಸ್ಟರ್ನ್ ರೌಂಡ್‌ನಲ್ಲೂ, ಬ್ಲೇಜರ್ ಧರಿಸಿ, ವೆಸ್ಟರ್ನ್‌ವೇರ್‌ನಲ್ಲಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು.
ಡಾ. ಸಂಗೀತಾ ಹೊಳ್ಳ ಫ್ಯಾಷನ್ ಮಾತು
ನನಗೆ ರ‍್ಯಾಂಪ್‌ನಲ್ಲಿ ವಾಕ್ ಮಾಡುವುದೇ ಒಂಥರ ಖುಷಿ ನೀಡುತ್ತದೆ. ಅದರಲ್ಲೂ ಕಾಂಚೀವರಂ ರೇಷ್ಮೆ ಸೀರೆಯಲ್ಲಿ, ದೇಸಿ ಲುಕ್‌ನಲ್ಲಿ ವಾಕ್ ಮಾಡಿದ್ದು ವಿಶೇಷ ಎಂದೆನಿಸಿತ್ತು. ರೇಷ್ಮೆ ಸೀರೆಯಲ್ಲಿ ವಾಕ್ ಮಾಡುವ ಗಮ್ಮತ್ತೇ ಬೇರೇ. ಇದರೊಂದಿಗೆ ವೆಸ್ಟರ್ನ್ ರೌಂಡ್ ಕೂಡ ಆಕರ್ಷಕವಾಗಿತ್ತು. ರಾಜ್ ಶರ್ಮಾ ಕಲೆಕ್ಷನ್‌ನ ಟ್ರೆಂಡಿ ಬ್ಲೇಜರ್‌ನಲ್ಲೂ ಕೂಡ ವಾಕ್ ಮಾಡಲಾಯಿತು. ಇನ್ನು, ಅಲೆಕ್ಸ್ ಅವರ ನೇತೃತ್ವದಲ್ಲಿ ನಡೆದ ಈ ಡಿಸೈನರ್ ಶೋ, ಮಾಡೆಲ್‌ಗಳ ಸಮಾಗಮದಂತಿತ್ತು. ಅಲ್ಲದೇ, ಎರಡು ದಿನಗಳ ಕಾಲ ನಡೆದ ಈ ಶೋ ಎಲ್ಲರಲ್ಲೂ ಸಂತಸ ಮೂಡಿಸಿತು ಎಂದು ಸಂಗೀತಾ ಹೊಳ್ಳ ವಿಶ್ವವಾಣಿ ಡಿಜಿಟಲ್ ನ್ಯೂಸ್‌ಗೆ ಖುಷಿ ಹಂಚಿಕೊಂಡರು.
ಶೋ ಆಯೋಜಕ ಅಲೆಕ್ಸ್ ಅಲೆಕ್ಸಾಂಡರ್ ನೇತೃತ್ವದಲ್ಲಿ, ನಡೆದ ಈ ಡಿಸೈನರ್ ಶೋನ ಮಾಡೆಲ್‌ಗಳಿಗೆ ಇವರೇ ಮೆಂಟರ್ ಹಾಗೂ ಶೋ ಡೈರೆಕ್ಟರ್ ಕೂಡ ಆಗಿದ್ದರು.
ರ‍್ಯಾಂಪ್ ಶೋನಲ್ಲಿ ನಡೆದ ಫೋಟೋಗ್ರಾಪರ್ ಕಾರ್ಯಾಗಾರ
ರ‍್ಯಾಂಪ್ ಶೋ ಮಧ್ಯೆ ನಡೆದ ಕರ್ನಾಟಕ ರಾಜ್ಯ ಫೋಟೋಗ್ರಾಫರ್ ವರ್ಕ್‌ಶಾಪ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಫೋಟೋಗ್ರಾಫರ್ಸ್ ಭಾಗವಹಿಸಿದ್ದರು. ಕುನಾಲ್ ಮೌಸಮ್ ಮಾಡೆಲ್‌ಗಳ ಫೋಟೋಶೂಟ್‌ಗಳನ್ನು ಮಾಡಿದರು.
ಈ ಸುದ್ದಿಯನ್ನೂ ಓದಿ | Ear Cuffs Fashion: ಯುವತಿಯರ ಕಿವಿಯನ್ನು ಅಲಂಕರಿಸುತ್ತಿರುವ ಇಯರ್ ಕಫ್ಸ್!
ಇಡೀ ರ‍್ಯಾಂಪ್ ಶೋನ ಮಾಡೆಲ್‌ಗಳ ಮೇಕಪ್ ಉಸ್ತುವಾರಿಯನ್ನು, ತೇಜು ವೆಂಕಿ, ವರ್ಷ ರಘು ವಹಿಸಿಕೊಂಡಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)