Tuesday, 19th November 2024

Father-son die: ಹಾವೇರಿಯಲ್ಲಿ ಘೋರ ಘಟನೆ; ಮಗ ಹೃದಯಾಘಾತದಿಂದ ಸಾವು, ಸುದ್ದಿ ತಿಳಿದು ತಂದೆಯೂ ನಿಧನ!

ಹಾವೇರಿ: ಒತ್ತಡದ ಜೀವನಶೈಲಿ, ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಹಾವೇರಿ ಜಿಲ್ಲೆಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಹೃದಯಾಘಾತದಿಂದ ತಂದೆ, ಮಗ (Father-son die) ಇಬ್ಬರೂ ಮೃತಪಟ್ಟಿರುವುದು ಕಂಡುಬಂದಿದೆ.

ಹಾವೇರಿಯಲ್ಲಿ ಡಾ. ವಿನಯ್ (38) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಸುದ್ದಿ ತಿಳಿದು ತಂದೆ ಡಾ. ವೀರಭದ್ರಪ್ಪ (68) ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಡಾ. ವಿನಯ್ ಅವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಈ ಸುದ್ದಿಯನ್ನೂ ಓದಿ | Viral News: ಎಣ್ಣೆ ಹೊಡೆಯುವಂತೆ ಪತಿಗೆ ಚಿತ್ರಹಿಂಸೆ ಕೊಟ್ಟ ಮಹಿಳೆ! ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್

ಬೆಡ್‌ಶೀಟ್‌ ಕೊಡಲ್ಲ ಎಂದ ಅಕ್ಕ, ಆತ್ಮಹತ್ಯೆ ಮಾಡಿಕೊಂಡ ತಂಗಿ

self harming

ಬೆಂಗಳೂರು: ಅಕ್ಕನ ಜೊತೆ ಬೆಡ್ ಶೀಟ್ ವಿಚಾರದಲ್ಲಿ ಜಗಳ ಮಾಡಿಕೊಂಡ ತಂಗಿಯೊಬ್ಬಳು ನಂತರ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru Crime news) ಚಾಮರಾಜಪೇಟೆಯಲ್ಲಿ ನಡೆದಿದೆ.

19 ವರ್ಷದ ಶ್ರಾವ್ಯ ಎಂಬ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿ ತೀರಾ ಸಣ್ಣ ವಿಷಯಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ. ಪೊಲೀಸ್ ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ ಶ್ರಾವ್ಯ ತನ್ನ ಅಕ್ಕನ ಜೊತೆ ಬೆಡ್ ಶೀಟ್ ಬಗ್ಗೆ ಜಗಳವಾಡಿದ್ದಳು. ಮರುದಿನ ಬೆಳಿಗ್ಗೆ 6 ಗಂಟೆ ಸುಮಾರಿಗೆ, ಆಕೆಯ ತಾಯಿ ಅವಳನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಹೀಗಾಗಿ ಕೋಣೆಯ ಬಾಗಿಲು ಒಡೆದು ನೋಡಿದಾಗ, ಶ್ರಾವ್ಯ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಆದರೆ, ಶ್ರಾವ್ಯಳ ಜಿಮ್ ಸ್ನೇಹಿತರು ಮತ್ತು ತರಬೇತುದಾರರು ಆಕೆ ತನ್ನ ಹೆತ್ತವರ ಜೊತೆ ಆಗಾಗ ಜಗಳವಾಡುತ್ತಿದ್ದದರಿಂದ ಬೇಸತ್ತಿದ್ದಳು ಎಂದು ಹೇಳಿದ್ದಾರೆ.

ಶ್ರಾವ್ಯ ರಾಜರಾಜೇಶ್ವರಿನಗರದ ಚನ್ನಸಂದ್ರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಬಿಎ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ವರದಿಗಳ ಪ್ರಕಾರ ಘಟನೆಯ ಹಿಂದಿನ ರಾತ್ರಿ ತನ್ನ ಅಕ್ಕನೊಂದಿಗೆ ಬೆಡ್‌ಶಿಟ್‌ ವಿಚಾರದಲ್ಲಿ ಗಲಾಟೆ ಮಾಡಿದ್ದಳು. ತಂದೆ ಬುದ್ದಿ ಹೇಳಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.