Tuesday, 17th December 2024

Feather Accessories Fashion: ಯುವತಿಯರನ್ನು ಸೆಳೆಯುತ್ತಿದೆ ಫಂಕಿ ಫೆದರ್ ಆಕ್ಸೆಸರೀಸ್!

Feather Accessories Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಿವಿಯಲ್ಲಿ ಬಣ್ಣ ಬಣ್ಣದ ರೆಕ್ಕೆ-ಪುಕ್ಕ ಹಾರಾಡುತ್ತಿದ್ದರೆ, ಕುತ್ತಿಗೆಯಲ್ಲಿ ಹಕ್ಕಿಯ ಪುಕ್ಕವೊಂದರ ಪೆಂಡೆಂಟ್ ನೇತಾಡುತ್ತಿದೆ. ಇನ್ನು ಹ್ಯಾಟ್‌ಗಳ ಮೇಲೆ ಸುಂದರವಾದ ಗರಿಗಳು ರಾರಾಜಿಸುತ್ತಿವೆ. ಹೌದು. ಇದು ಯುವತಿಯರ ಫಂಕಿ ಜ್ಯುವೆಲ್ ಲೋಕದಲ್ಲಿ ಟ್ರೆಂಡಿಯಾಗಿರುವ ಫೆದರ್ ಆ್ಯಕ್ಸೆಸರೀಸ್ (Feather Accessories Fashion) ಮಾಯೆ. ಪಕ್ಷಿಗಳ ಉದುರಿದ ರೆಕ್ಕೆ-ಪುಕ್ಕಗಳಿಂದ ತಯಾರಿಸಲಾಗುವ ಈ ಫೆದರ್ ಆ್ಯಕ್ಸೆಸರೀಸ್ ಸದ್ಯ ಫ್ಯಾಷನ್ ಪ್ರೇಮಿಗಳ ಜ್ಯುವೆಲ್ ಕಿಟ್ ಸೇರಿದೆ.

ಚಿತ್ರಕೃಪೆ: ಪಿಕ್ಸೆಲ್

ಹಾರುವ ಇಯರಿಂಗ್‌ಗಳಿವು

ಮೈನಾ, ಪಾರಿವಾಳ, ಲವ್ ಬರ್ಡ್ಸ್ ಸೇರಿದಂತೆ ನಾನಾ ಪಕ್ಷಿಗಳ ಉದುರಿದ ರೆಕ್ಕೆ-ಪುಕ್ಕಗಳನ್ನು ಸುಂದರವಾಗಿ ಜೋಡಿಸಿ, ಅದಕ್ಕೆ ಒಂದು ಆಕಾರ ನೀಡಿ ಫೆದರ್ ಆ್ಯಕ್ಸೆಸರೀಸ್ ರೂಪಿಸಲಾಗಿರುತ್ತದೆ. ಬೇಡಿಕೆ ಹೆಚ್ಚಿರುವುದರಿಂದ ಕೆಲವು ಒರಿಜಿನಲ್ ಬಣ್ಣಗಳಲ್ಲಿ ದೊರೆತರೆ, ಇನ್ನು ಕೆಲವು ಡೈ ಮಾಡಿದ ರೂಪದಲ್ಲಿ ದೊರೆಯುತ್ತಿವೆ. ಇಯರಿಂಗ್ಸ್, ನೆಕ್ಪೀಸ್, ಬ್ರೆಸ್ಲೆಟ್, ಪೆಂಡೆಂಟ್, ಹೇರ್ ಆ್ಯಕ್ಸೆಸರೀಸ್ ಹೀಗೆ ನಾನಾ ಬಗೆಯಲ್ಲಿ ಪ್ರಚಲಿತದಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಜತ್.

ನ್ಯಾಚುರಲ್ ಲುಕ್ ನೀಡುವ ಫಂಕಿ ಆ್ಯಕ್ಸೆಸರೀಸ್‌ಗಳಿವು

ಫ್ಯಾಷನ್ ರ‍್ಯಾಪ್ ಏರುವ ಮಾಡೆಲ್‌ಗಳಿಂದಿಡಿದು ಕಾಲೇಜು ಹುಡುಗಿಯರು ಈ ಫೆದರ್ ಆ್ಯಕ್ಸೆಸರೀಸ್ ಕ್ರೇಜ್‌ಗೆ ಮರುಳಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಬಹುತೇಕ ಫ್ಯಾಷನ್ ಶೋಗಳಲ್ಲಿ ಫೆದರ್ ಆಕ್ಸೆಸರೀಸ್ ಹೆಚ್ಚೆಚ್ಚು ಬಳಕೆಯಾಗುತ್ತಿದೆ. ಕಿವಿಯೊಲೆ, ಪೆಂಡೆಂಟ್, ಕೈ ಉಂಗುರ, ಕಿರೀಟ, ಹೆಡ್‌ಬ್ಯಾಂಡ್, ಹೇರ್‌ಬ್ಯಾಂಡ್ ಹೀಗೆ ನಾನಾ ಬಗೆಯಲ್ಲಿ ಈ ರೆಕ್ಕೆ-ಪುಕ್ಕಗಳ ಆಭರಣಗಳು ಬಳಕೆಯಾಗುತ್ತಿವೆ ಎನ್ನುತ್ತಾರೆ ಜ್ಯುವೆಲ್ ಆ್ಯಕ್ಸೆಸರೀಸ್ ಡಿಸೈನರ್ ರಿಶಿ.

ವಿಭಿನ್ನ ಲುಕ್

ಇನ್ನು ಕೂದಲನ್ನು ಕಟ್ಟದೇ ಬಿಟ್ಟಾಗ, ಈ ಫೆದರ್ ಇಯರಿಂಗ್‌ಗಳು ಹೇರ್ ಕಲರಿಂಗ್ ಮಾಡಿದಂತೆ ಬಿಂಬಿಸುತ್ತವೆ. ನೋಡಲು ವಿಭಿನ್ನವಾಗಿ ಕಾಣುತ್ತವೆ. ಇವನ್ನು ಧರಿಸಿದಾಗ ಮಾಡರ್ನ್ ಹಾಗೂ ವೆಸ್ಟರ್ನ್ ಲುಕ್ ಗ್ಯಾರಂಟಿ ಎನ್ನುತ್ತಾರೆ ಮಾಡೆಲ್ ದೀಪ್ತಿ.

ಫೆದರ್ ದರ್ಬಾರು

ಅಂದಹಾಗೆ, ಈ ಡಿಸೈನರಿ ಆ್ಯಕ್ಸೆಸರೀಸ್ ಬೆಲೆ ಕಡಿಮೆಯೇನಿಲ್ಲ! ಮಾಲ್‌ನಲ್ಲಿ ಇನ್ನೂರು ರೂ. ದಾಟಿದರೇ, ಫ್ಯಾನ್ಸಿ ಸ್ಟೋರ್‌ಗಳಲ್ಲಿ ಇವುಗಳ ಗುಣಮಟ್ಟದ ಮೇಲೆ ನಿರ್ಧರಿತವಾಗಿರುತ್ತವೆ. ಕುಶಲಕರ್ಮಿಗಳ ಕೈಗಳಲ್ಲಿ ತಯಾರಾಗಿ ಬರುವ ಇವುಗಳು ನಾನಾ ಬಗೆಯ ಡಿಸೈನ್‌ಗಳಲ್ಲಿ ಲಭ್ಯ. ಆಕಾರಕ್ಕೆ ತಕ್ಕಂತೆ ಬೆಲೆ. ಆದರೆ, ಹೆಡ್‌ಬ್ಯಾಂಡ್ ಹಾಗೂ ಫಿಂಗರ್ ರಿಂಗ್‌ಗಳ ಬೆಲೆ ತುಸು ಹೆಚ್ಚು ಎನ್ನುತ್ತಾರೆ ಡಿಸೈನರಿ ಗರಿ ಆ್ಯಕ್ಸೆಸರೀಸ್ ಮಾರಾಟಗಾರ ಮಹಮ್ಮದ್.

ಈ ಸುದ್ದಿಯನ್ನೂ ಓದಿ | Winter Headband Fashion: ವಿಂಟರ್ ಹೇರ್ ಸ್ಟೈಲ್ ವಿನ್ಯಾಸಕ್ಕೆ ಬಂತು ಆಕರ್ಷಕ ಹೆಡ್ ಬ್ಯಾಂಡ್ಸ್!

ಫೆದರ್ ಆಕ್ಸೆಸರೀಸ್ ಪ್ರಿಯರಿಗೆ ಸಲಹೆ

  • ನೀರು ತಾಗಿಸಬಾರದು.
  • ವೈಬ್ರೆಂಟ್ ಕಲರ್ಸ್ ಉಡುಪುಗಳಿಗೆ ಸಖತ್ ಮ್ಯಾಚ್ ಆಗುತ್ತವೆ.
  • ಕ್ಯಾಶುವಲ್ಸ್ ಹಾಗೂ ಫಾರ್ಮಲ್ಸ್ ಎರಡಕ್ಕೂ ಧರಿಸಬಹುದು.
  • ನ್ಯಾಚುರಲ್ ಬಣ್ಣಗಳದ್ದನ್ನು ಆಯ್ಕೆ ಮಾಡಿ.
  • ಮೆತ್ತಗಿನ ಪೇಪರ್‌ನಲ್ಲಿ ಸಂರಕ್ಷಿಸಿಡಬೇಕು.
  • ಹೆಲ್ಮೆಟ್ ಹಾಕುವಾಗ ಬಳಸಬೇಡಿ. ಮುರಿದು ಹೋಗುವುದು.
  • ಕೂದಲು ಬಾಚಿದ ಹಾಗೂ ಮೇಕಪ್ ಮುಗಿದ ನಂತರ ಧರಿಸಬೇಕು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)