Sunday, 15th December 2024

ಕ್ವಾಟಿ ಲಕ್ಷ್ಮೀ ದೇವಿ ಜಾತ್ರೆ

ಬಸವನಬಾಗೇವಾಡಿ: ಪಟ್ಟಣದ ಲಕ್ಷ್ಮೀ ನಗರದಲ್ಲಿನ ಕ್ವಾಟಿ ಲಕ್ಷ್ಮೀ ದೇವಿ ಜಾತ್ರೆಯು ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ಲಕ್ಷ್ಮೀದೇವಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿತು. ಭಕ್ತರು ಕುಟುಂಬ ಸದಸ್ಯರೊಂದಿಗೆ ಕಾಯಿ ಕರ್ಪೂರ, ನೈವೇದ್ಯದೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಭಕ್ತರ ಜಯ಼ಘೋಷಣೆಯೊಂದಿಗೆ ಆನೆ, ಕರಡಿ ಮಜಲು, ಡೊಳ್ಳಿನ ವಾದ್ಯ, ಕುದುರೆ ಕುಣಿತ ಸೇರಿಸದಂತೆ ವಿವಿಧ ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಮೆರವಣಿಗೆಯು ಬಸವೆಶ್ವರ ದೇವಸ್ಥಾನದ ಬಸವತೀರ್ಥ ಬಾವಿಗೆ ತೆರಳಿದ ನಂತರ ಗಂಗಸ್ಥಳ ಪೂಜೆ ನೆರವೇರಿತು.

ನಂತರ ಪಲ್ಲಕ್ಕಿ ಉತ್ಸವವು ಬಸವೇಶ್ವರ ವೃತ್ತ ಅಗಸಿ ಮಾರ್ಗವಾಗಿ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ತಲುಪಿತು, ಶಾಸಕ ಶಿವಾನಂದ ಪಾಟೀಲ ಅವರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಪಲ್ಲಕ್ಕಿ ಹೊತ್ತು ಉತ್ಸವದಲ್ಲಿ ಭಾಗಿಯಾದರು.

ಪಲ್ಲಕ್ಕಿ ಉತ್ಸವದಲ್ಲಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರಾಜು ಪಟ್ಟಣಶೆಟ್ಟಿ, ಉಪಾಧ್ಯಕ್ಷ ಶಿವಾನಂದ ಮಸಬಿನಾಳ, ಮುಖಂಡ ಪರಶುರಾಮ ಅಡಗಿಮನಿ, ಶ್ರೀಕಾಂತ ಪಟ್ಟಣಶೆಟ್ಟಿ, ಮಲ್ಲು ಮಿಣಜಗಿ, ಬಸವರಾಜ ಕೋಟಿ, ಲಕ್ಷ್ಮಣ ಅಂಬಿಗೇರ, ಗಣಪತಿ ಬಡಿಗೇರ, ಬಸವರಾಜ ಚಿಂಚೊಳಿ, ಈರಪ್ಪ ಕುಂಬಾರ, ವೈ.ಎನ್.ಮಿಣಜಗಿ, ಈರಣ್ಣ ಕಾರಕೂನ, ಸಿದ್ದು ಕುಂಬಾರ, ಶರಣು ಮಿಣಜಗಿ, ರಮೇಶ ಮಿಣಜಗಿ, ಭೀಮಣ್ಣ ಗುತ್ತೆದಾರ, ಶಿವಾನಂದ ಚವ್ಹಾಣ, ಗೋಲಪ್ಪ ಜಾಡರ, ಕೊಟ್ರೇಶ ಹೆಗಡ್ಯಾಳ, ಪರು ಬಾಗೇವಾಡಿ, ಎಸ್,ಪಿ ಮಡಕೇಶ್ವರ, ಚಂದ್ರಶೇಖರ ಹದಿಮೂರ, ಸಿದ್ದು ಬಾಗೇವಾಡಿ ಇದ್ದರು.