Thursday, 12th December 2024

ಶಿವರಾತ್ರಿ ಉತ್ಸವ ಹಾಗೂ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ

ಕೊಲ್ಹಾರ: ತಾಲೂಕಿನ ಮಲಘಾಣ ಗ್ರಾಮದ ಐಎಎಸ್ ಫೌಂಡೇಶನ್ ವತಿಯಿಂದ ಶಿವರಾತ್ರಿ ಉತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರಾಜ ಮಾತಾ ಅಹಿಲ್ಯಾಬಾಯಿ ಹೋಳ್ಕರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಮಾ.8 ರ ಶುಕ್ರವಾರ ಸಾಯಂಕಾಲ 6 ಗಂಟೆಗೆ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಲಘಾಣ ನಾಗಲಿಂಗೇಶ್ವರ ಜ್ಞಾನ ಯೋಗಾಶ್ರಮದ ಪೀಠಾಧಿಪತಿಗಳಾದ ಶ್ರೀ ಸದಾನಂದ ಮಹಾರಾಜರು ಹೇಳಿದರು.

ಮಲಘಾಣ ಗ್ರಾಮದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಕಾರ್ಯಕ್ರಮದ ನಿಮಿತ್ತ ಕನ್ನಡದ ಹೆಸರಾಂತ ಟಿ.ವ್ಹಿ ವಾಹಿನಿಗಳಲ್ಲಿ ನಟಿಸಿರುವ ಪ್ರಖ್ಯಾತ ಕಲಾವಿದರಿಂದ ವಿಶೇಷ ಸಂಗೀತ ಹಾಗೂ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.

ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ರಾಜಕೀಯ ಧುರೀಣರು, ಗಣ್ಯ ಮಾನ್ಯರ ಸಹಿತ ಅನೇಕರು ಉಪಸ್ಥಿತರಿರುವರು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ ಕಾಗಲ್, ಪರಶುರಾಮ ಮುಳವಾಡ, ಸಂತೋಷ ಪಾಟೀಲ್, ಮಲ್ಲು ಚಂ ಆಸಂಗಿ, ಸದಾಶಿವಯ್ಯ ಹಿರೇಮಠ, ಸಿದ್ದು ಎತ್ತಿನಮನಿ, ರಾಘವೇಂದ್ರ ಕಲಗುರ್ಕಿ, ಪರಶುರಾಮ ಹಡಪದ, ಭೀಮಶಿ ಅಂಬಿಗರ, ಭೀರಪ್ಪ ಅನಗವಾಡಿ, ಮುತ್ತು ಅಂಬಿಗೇರ, ಮಹೇಶ್ ಕಲಗುರ್ಕಿ ಹಾಗೂ ಇತರರು ಇದ್ದರು.