Sunday, 15th December 2024

250 ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್, ಮಾಸ್ಕ್ ವಿತರಣೆ

ಪಾವಗಡ : ಪಟ್ಟಣದ ಎಸ್.ಎಸ್.ಕೆ.ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಕಾರ್ಯ ನಿರ್ವಹಿಸುತ್ತಿರುವ ತಾಲೂಕಿನ ಎಲ್ಲಾ 250 ಆಶಾ ಕಾರ್ಯಕರ್ತೆಯರಿಗೆ ದಿನಸಿ ಹಾಗೂ ಮಾಸ್ಕ್ ವಿತರಣೆ ಮಾಡಿ ನಂತರ ಮಾತನಾಡಿದ ಅವರು
ಮಾಜಿ ಸಚಿವ, ಹಾಲಿ ಶಾಸಕ ವೆಂಕಟರವಣಪ್ಪ ನವರ ಆಶಾ ಕಾರ್ಯಕರ್ತರು ಪ್ರಾಣದ ಹಂಗು ತೊರೆದು ರಾತ್ರಿ ಹಗಲು ಜನರ ಸೇವೆ ಮಾಡುತ್ತಿರುವುದು ಶ್ಲಾಘನೀಯ.
ಜನರ ಸೇವೆ ಜನಾರ್ಧನ ಸೇವೆ ಎಂದು ಭಾವಿಸಿ ಕೋವಿಡ್ ರೋಗಿಗಳ ಮಧ್ಯ ಕೆಲಸ ಮಾಡುತ್ತಿದ್ದಿರಾ. ನಿಮಗೆ ಆ ದೇವರು ಉತ್ತಮ ಆರೋಗ್ಯ ನೀಡಲಿ ಎಂದರು. ಹಣ ಮಾಡಿದರೆ ಯಾರಿಗೂ ತಿಳಿಯದಂತೆ ಮಾಡಬಹುದು ಅಂದರೆ ಶಾಶ್ವತ ವಾಗಿ ಜನರಿಗೆ ಬೇಕಾ ಗುವ ಕೆಲಸ ಮಾಡಿದರೆ ಮಾತ್ರ ಜನರಿಗೆ ತಿಳಿಯು ವುದು. ನಾನು ಸತ್ತರೆ  ನೆನಪಾಗಿ ಉಳಿಯುವುದು ನಾನ ತಾಲೂಕಿನ ಅಭಿವೃದ್ಧಿ ಕೆಲಸ ಹೊರೆತು ನಾನು ಅಲ್ಲ ಎಂದರು.
ಜಿ.ಪಂ ಸದಸ್ಯರಾದ ಹೆಚ್. ವಿ.ವೆಂಕಟೇಶ್ ರವರ ವೈಯಕ್ತಿಕ ಹಣದಿಂದ ಉಚಿತ ಆಹಾರ ಕಿಟ್ ಗಳನ್ನು ವಿತರಣೆ ಮಾಡಿ ನಂತರ ಮಾತನಾಡಿದ ಅವರು ಪ್ರಪಂಚವೆ ತಲ್ಲಣ ಗೊಳಿಸಿರು ಕರೋನ ಮಹಾಮಾರಿ ರೋಗದಿಂದ ಇತ್ತೀಚಿಗೆ ತಾಲ್ಲೂಕಿನ ಹಲವು ಮಂದಿ ಕರೋನ ರೋಗಕ್ಕೆ ಪ್ರಾಯದ ಯುವಕರು ಮೃತಪಟ್ಟಿದ್ದಾರೆ. ಅಂತಹ ವೇಳೆಯಲ್ಲಿ ತಮ್ಮ ಕುಟುಂಬದ ಸದಸ್ಯರ ಬಗ್ಗೆ ಸಹ ಯೋಜನೆ ಮಾಡದೆ ಹಗಲು ರಾತ್ರಿ ಸಾರ್ವಜನಿಕರ ಸೇವೆ ಮಾಡು ತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ನಿಜಕ್ಕೂ ನಿಮ್ಮ ಗಣನೀಯ ಸೇವೆ.
ಕೋವಿಡ್ ರೋಗದಿಂದ ಮೃತಪಟ್ಟ ವ್ಯಕ್ತಿಗಳಿಗೆ ಮಣ್ಣು ಮಾಡಲು ಬಹಳಷ್ಟು ಕಷ್ಟಕರವಾದ ಸನ್ನಿವೇಶಗಳು ಗಮನಿಸಿ, ತಾಲ್ಲೂಕಿನಲ್ಲಿ ಎಲ್ಲಾದರೂ ಮೃತಪಟ್ಟರು. ಅವರಿಗೆ ತೊಂದರೆ ಆಗಬಾರದು ಎಂದು ಉಚಿತವಾಗಿ ಜೆಸಿಬಿ ವ್ಯವಸ್ಥೆ ಮಾಡಿ ಕೊಟ್ಟಿದ್ದೇನೆ. ಲಾಕ್ ಡೌನ್ ಯಿಂದ ಯಾರಿಗೂ ಊಟ ಸಿಗುತ್ತಿಲ್ಲ ಎಂಬ ಉದ್ದೇಶದಿಂದ ಪ್ರತಿ ದಿನ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದ್ದೆನೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸುದೇಶ್ ಬಾಬುರವರು, ಪುರಸಭಾ ಅಧ್ಯಕ್ಷರಾದ ರಾಮಂಜಿನಪ್ಪ, ಮುಖಂಡರಾದ ಶಂಕರ್ ರೆಡ್ಡಿ, ಪುರಸಭಾ ಸದಸ್ಯರಾದ ರವಿ, ರಾಜೇಶ್, ಮಣಿ, ಯುವ ಮುಖಂಡರಾದ ಕಿರಣ್, ಹರೀಶ್, ಅನಿಲ್, ವಿಜಯ್ ಭಾಸ್ಕರ್ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.