Saturday, 2nd November 2024

Fraud Case: ಟ್ರ್ಯಾಕಿಂಗ್ ಐಡಿ ಬದಲಿಸಿ ಅಮೆಜಾನ್‌ಗೆ 30 ಕೋಟಿ ರೂ. ವಂಚನೆ; ಇಬ್ಬರು ಖದೀಮರ ಸೆರೆ

Fraud Case

ಮಂಗಳೂರು: ಅಮೆಜಾನ್‌ ಕಂಪನಿಗೆ ಬರೊಬ್ಬರಿ 30 ಕೋಟಿ ರೂ. ವಂಚಿಸಿದ್ದ (Fraud Case) ಇಬ್ಬರು ಖದೀಮರನ್ನು ಮಂಗಳೂರಿನ ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು.

ಅಮೆಜಾನ್​ನಲ್ಲಿ ಬೆಲೆಬಾಳುವ ವಸ್ತುಗಳನ್ನು ಆರ್ಡರ್​​ ಮಾಡುತ್ತಿದ್ದ ಆರೋಪಿಗಳು, ಆರ್ಡರ್ ಪಡೆಯಲು ಟಯರ್ ಟು ಸಿಟಿ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ವಿಮಾನದಲ್ಲಿ ಹೋಗುತ್ತಿದ್ದ ಇವರು, ವಸ್ತುವಿನ ಬಾಕ್ಸ್​ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚನೆ ಮಾಡುತ್ತಿದ್ದರು.

ವಸ್ತುಗಳು ಡೆಲಿವರಿಯಾದ ಮೇಲೆ ಅವುಗಳ ಮೇಲಿನ ಟ್ರ್ಯಾಕಿಂಗ್ ಲೇಬಲ್​ಗಳನ್ನು ಅದೇ ರೀತಿಯ ಕಡಿಮೆ ಬೆಲೆಯ ವಸ್ತುಗಳ ಬಾಕ್ಸ್​​ ಮೇಲೆ ಹಚ್ಚುತ್ತಿದ್ದರು. ನಂತರ, ರಿಟರ್ನ್​​ ಮಾಡುತ್ತಿದ್ದರು. ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇಟ್ಟುಕೊಂಡು ಸೆಕೆಂಡ್ ಹ್ಯಾಂಡ್​ಗೆ ಮಾರಾಟ ಮಾಡುತ್ತಿದ್ದರು. ಐಟಂ ರಿಟರ್ನ್ ಆದ ಬಳಿಕ ಆರ್ಡರ್​ಗೆ ಬಳಸಿದ ಸಿಮ್ ಕಿತ್ತೆಸೆಯುತ್ತಿದ್ದರು. ವಸ್ತು ಅಮೆಜಾನ್ ಗೋಡೌನ್‌ ತಲುಪಿದ ಬಳಿಕ ವಂಚನೆ ಬೆಳಕಿಗೆ ಬರುತ್ತಿತ್ತು.

ಆರೋಪಿಗಳು ಕಳೆದ‌ ಐದು ವರ್ಷಗಳಿಂದಲೂ ಈ ರೀತಿ ವಂಚನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆಲೆಸಿ ವಂಚನೆ ಮಾಡಿದ್ದಾರೆ. ಇದೀಗ ಮಂಗಳೂರಿನ ಉರ್ವ ಪೊಲೀಸರು ಈ ಖತರ್ನಾಕ್‌ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಉರ್ವ ಠಾಣೆಯಲ್ಲಿ ಸೆ.21ರಂದು ಅಮೆಜಾನ್ ಕಂಪನಿಯ ಡೆಲಿವರಿ ಬಾಯ್ ಪ್ರಕರಣ ದಾಖಲಿಸದ್ದನು. ತನಿಖೆ ನಡೆಸಿ ಖದೀಮರ ಮೋಸದ ಜಾಲ ಭೇದಿಸಿದ ಮಂಗಳೂರಿನ‌ ಉರ್ವ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Bomb Threat : ಸ್ಕೂಲ್‌, ವಿಮಾನ, ಹೊಟೇಲ್‌ ಆಯ್ತು..ಈಗ ರೈಲಿಗೂ ಬಂತೂ ಬಾಂಬ್‌ ಬೆದರಿಕೆ! ಭಾರೀ ಆತಂಕ ಸೃಷ್ಟಿ

ಬೆಂಗಳೂರಲ್ಲಿ ಪಟಾಕಿ ಅಕ್ರಮ ಮಾರಾಟ, ದಾಸ್ತಾನು: 56 ವ್ಯಾಪಾರಿಗಳ ವಿರುದ್ಧ ಎಫ್‌ಐಆರ್‌

Cracker Sales

ಬೆಂಗಳೂರು: ನಗರದಲ್ಲಿ ಪಟಾಕಿ ಅಕ್ರಮ ಮಾರಾಟ, ದಾಸ್ತಾನು ಮಾಡಿದ್ದ 56 ವ್ಯಾಪಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅ.31 ರಿಂದ ನವೆಂಬರ್ 1ರವರೆಗೆ ಬೆಂಗಳೂರಿನ ಎಲ್ಲಾ ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಪರಿಶೀಲನೆ ವೇಳೆ 56ಕ್ಕೂ ಅಧಿಕ ವ್ಯಾಪಾರಿಗಳು ನಿಯಮ ಉಲ್ಲಂಘಿಸಿ ಪಟಾಕಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.

ಈ ಸುದ್ದಿಯನ್ನೂ ಓದಿ | Physical Abuse: ಮಹಿಳೆಯ ನಗ್ನ ದೃಶ್ಯ ಸೆರೆಹಿಡಿದು ಬ್ಲ್ಯಾಕ್‌ಮೇಲ್, ಅತ್ಯಾಚಾರ: ಆರೋಪಿ ಪರಾರಿ

ಬೆಂಗಳೂರಿನ 72 ಮೈದಾನಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ 315 ಪರವಾನಗಿ ನೀಡಲಾಗಿತ್ತು. ಪರವಾನಗಿ ಪಡೆದುಕೊಳ್ಳದೆ ಕೆಲವರು ರಸ್ತೆ ಬದಿ, ತಳ್ಳುವ ಗಾಡಿಗಳಲ್ಲಿಯೂ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಉತ್ತರ ವಲಯದಲ್ಲಿ 9, ಆಗ್ನೇಯ ವಲಯದಲ್ಲಿ 9, ಈಶಾನ್ಯ ವಲಯದಲ್ಲಿ 19, ವೈಟ್‌ಫೀಲ್ಡ್‌ ವಲಯದಲ್ಲಿ 9 ಸೇರಿ ಒಟ್ಟು 56 ಪ್ರಕರಣ ದಾಖಲಾಗಿವೆ. ಶನಿವಾರ ಮತ್ತು ಭಾನುವಾರ ಕೂಡ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ.