– ಮುಂದೇನು ಎನ್ನುವ ಆತಂಕದಲ್ಲಿ ದಿನದೂಡುತ್ತಿ\ರುವ ಕಮಲ ನಾಯಕರು
– ಅಭ್ಯರ್ಥಿ ಘೋಷಣೆಗೆ ಬಿಜೆಪಿ ಮೀನಾಮೇಷ
– ಬುಧವಾರದ ತೀರ್ಪಿನ ನಂತರ ಅಭ್ಯರ್ಥಿ ಘೋಷಿಸಲು ಸಿದ್ಧತೆ
ಒಂದೆಡೆ ರಾಜ್ಯದಲ್ಲಿ ಎದುರಾಗಿರುವ ಉಪಚುನಾವಣೆಯಾದರೆ, ಇನ್ನೊೊಂದೆಡೆ ಅನರ್ಹರ ಸುಪ್ರೀಂ ಕೋರ್ಟ್ ತೀರ್ಪು. ಈ ಎರಡರ ನಡುವೆ ಬಿಜೆಪಿ ನಾಯಕರು ಹಾಗೂ ಅನರ್ಹ ಶಾಸಕರು ಸಿಕ್ಕಿಿಹಾಕಿಕೊಂಡು, ಒದ್ದಾಾಡುವ ಪರಿಸ್ಥಿಿತಿ ನಿರ್ಮಾಣವಾಗಿದೆ.
ಈಗಾಗಲೇ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರದಲ್ಲಿ ಎಂಟು ಕ್ಷೇತ್ರಗಳಿಗೆ ಕಾಂಗ್ರೆೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ ಬಿಜೆಪಿ ಈ ಪ್ರಕ್ರಿಿಯೆ ಮಾಡಲು, ಅನರ್ಹರ ಸುಪ್ರೀಂ ಕೋರ್ಟ್ ಪ್ರಕರಣ ಅಡ್ಡಿಿಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಬರುವ ತನಕ ಬಿಜೆಪಿ ಹಾಗೂ ಶಾಸಕರು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲದೇ ಇರುವುದರಿಂದ, ಇದೀಗ ಇಕ್ಕಟ್ಟಿಿಗೆ ಸಿಲುಕಿದೆ.
ಬಿಜೆಪಿಯದ್ದು ಅನರ್ಹ ಸಮಸ್ಯೆೆಯಾದರೆ, ಕಾಂಗ್ರೆೆಸ್ ಹಾಗೂ ಜೆಡಿಎಸ್‌ಗೆ ಅಭ್ಯರ್ಥಿಗಳನ್ನು ಆಯ್ಕೆೆ ಮಾಡುವುದೇ ಸವಾಲಾಗಿದೆ. ಬದಲಿ ಅಭ್ಯರ್ಥಿಗಳಿದ್ದ ಎಂಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಒಂದು ತಿಂಗಳ ಮೊದಲೇ ಕಾಂಗ್ರೆೆಸ್ ಪ್ರಕಟಿಸಿದೆ. ಆದರೆ ಬಾಕಿಯಿರುವ ಏಳು ಕ್ಷೇತ್ರದ ಅಭ್ಯರ್ಥಿಗಳನ್ನು, ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಆಧರಿಸಿ ನಿರ್ಧರಿಸಲು ಕಾದು ಕುಳಿತಿದೆ.
ಬಿಜೆಪಿ ಈಗಾಗಲೇ 15 ಕ್ಷೇತ್ರಗಳಿಗೆ ಅನರ್ಹರನ್ನೇ ಕಣಕ್ಕಿಿಳಿಸುವುದು ಎನ್ನುವ ಹೇಳಿದೇಯಾದರೂ ಅಧಿಕೃತವಾಗಿ ಈ ಬಗ್ಗೆೆ ಯಾವೊಬ್ಬ ನಾಯಕರು ಮಾತನಾಡಿಲ್ಲ. ಈ ಹಂತದಲ್ಲಿ ಅನರ್ಹರು ಬಿಜೆಪಿ ಪರವಾಗಿ ಅಥವಾ ಬಿಜೆಪಿಯಿಂದ ಟಿಕೆಟ್ ಭರವಸೆ ನೀಡಿದರೆ ಸುಪ್ರಿಿಂನಲ್ಲಿ ಸಮಸ್ಯೆೆಯಾಗುವುದರಿಂದ, ಬುಧವಾರದ ನಂತರವೇ ಟಿಕೆಟ್ ಹಂಚಿಕೆ ಬಗ್ಗೆೆ ಚರ್ಚಿಸುವ ನಿರ್ಧಾರಕ್ಕೆೆ ಬಿಜೆಪಿ ನಾಯಕರು ಬಂದಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರದ ಬಳಿಕ ಪಟ್ಟಿ ಸಾಧ್ಯತೆ
ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಬೆ.10.30ಕ್ಕೆೆ ಅನರ್ಹರ ಪ್ರಕರಣ ದಾಖಲಾಗಿರುವುದರಿಂದ, ತೀರ್ಪು ನೀಡುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಬುಧವಾರದವರೆಗೆ ಕಾದು ನೋಡುವ ತಂತ್ರಕ್ಕೆೆ ಬಿಜೆಪಿ ನಾಯಕರು ಮುಂದಾಗಿದ್ದಾಾರೆ. ಒಂದು ವೇಳೆ ಬುಧವಾರ ತೀರ್ಪು ಅನರ್ಹರ ಪರ ಬಂದರೆ, ನಾಮಪತ್ರ ಸಲ್ಲಿಸಲು ನಾಲ್ಕು ದಿನ ಸಮಯವಿರುತ್ತದೆ. ಆ ಸಮಯದಲ್ಲಿ ಅನರ್ಹರನ್ನು ಕಮಲ ಚಿಹ್ನೆೆಯಡಿ ಸ್ಪರ್ಧಿಸಲು ಬಿ.ಫಾರ್ಮ್ ನೀಡಬಹುದು. ಒಂದು ವೇಳೆ ಅನರ್ಹರ ವಿರುದ್ಧವಾಗಿ ಟಿಕೆಟ್ ಬಂದರೆ, ಮೇಲ್ವಿಿಚಾರಣೆಗೆ ಅರ್ಜಿ ಸಲ್ಲಿಸುವುದರೊಂದಿಗೆ ಅನರ್ಹರ ಆಪ್ತರೊಬ್ಬರಿಗೆ ಟಿಕೆಟ್ ಘೋಷಿಸುವ ನಿರ್ಧಾರವನ್ನು ಬಿಜೆಪಿ ನಾಯಕರು ಮಾಡಿದ್ದಾಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಈ ಸಂಬಂಧ ಅನರ್ಹರೊಂದಿಗೆ ಮಾತನಾಡಿದ್ದು, ನಾಮಪತ್ರ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಅನರ್ಹ ಶಾಸಕರು ಹಾಗೂ ಅವರ ಆಪ್ತರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಖಚಿತ ಎನ್ನುವ ಭರವಸೆ ನೀಡಿದ್ದಾಾರೆ ಎಂದು ತಿಳಿದುಬಂದಿದೆ.
ಕಾನೂನು ತಜ್ಞರ ಸಭೆ ನಡೆಸಿದ ಅನರ್ಹರು
ಸುಪ್ರೀಂ ಕೋರ್ಟ್‌ನ ಬುಧವಾರದ ನಿರ್ಣಯದ ಮೇಲೆ ಅನರ್ಹರ ಭವಿಷ್ಯ ನಿರ್ಧಾರವಾಗಿರುವುದರಿಂದ, ಆತಂಕದಲ್ಲಿದ್ದಾಾರೆ. ಈಗಾಗಲೇ ಚುನಾವಣಾ ಪ್ರಕ್ರಿಿಯೆ ಮುಂದೆ ಹಾಕಲು ಸುಪ್ರೀಂ ಕೋರ್ಟ್ ಒಪ್ಪಿಿಲ್ಲ. ಒಂದು ವೇಳೆ ತೀರ್ಪುನ್ನು ನೀಡದಿದ್ದರೆ ಏನು ಮಾಡಬೇಕು ಎನ್ನುವ ಪ್ರಶ್ನೆೆ 15 ಶಾಸಕರ ಮುಂದಿದ್ದು, ಈ ಬಗ್ಗೆೆ ಚರ್ಚಿಸಲು ಎಲ್ಲ ಅರ್ನಹರು ದೆಹಲಿಯಲ್ಲಿ ಬೀಡುಬಿಟ್ಟಿಿದ್ದಾಾರೆ. ತಮ್ಮ ವಕೀಲರೊಂದಿಗೆ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯಿಂದಲೂ ಅಭಯ
ರಾಜಕೀಯ ಭವಿಷ್ಯದ ಬಗ್ಗೆೆ ಆತಂಕಗೊಂಡಿರುವ ಅನರ್ಹ ಶಾಸಕರಿಗೆ ಬಿಜೆಪಿ ನಾಯಕರು ಅಭಯ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನವರೆಗೆ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವುದಿಲ್ಲ. ಸುಪ್ರಿಿಂನಿಂದ ಸಕಾರಾತ್ಮಕವಾಗಿಯೇ ತೀರ್ಪು ಬರಲಿದೆ ಎನ್ನುವ ವಿಶ್ವಾಾಸದಲ್ಲಿ ಆದ್ದರಿಂದ ಟಿಕೆಟ್ ಬಗ್ಗೆೆ ಕೈತಪ್ಪುುವ ಆತಂಕದ ಬಗ್ಗೆೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಕಾನೂನು ಹೋರಾಟದ ಬಗ್ಗೆೆ ಹೆಚ್ಚು ಗಮನಹರಿಸುವಂತೆ ಹೇಳಿದ್ದಾಾರೆ ಎನ್ನಲಾಗಿದೆ.
ಬಿಜೆಪಿ ಆತಂಕವೇನು?
* ಉಪಚುನಾವಣೆಗೆ ಬಾಕಿಯಿರುವ ದಿನದಲ್ಲಿ ಪ್ರಚಾರ ಸಾಧ್ಯಯೇ?
* ಅನರ್ಹರಿಗೆ ಚುನಾವಣೆ ಸ್ಪರ್ಧಿಸಲು ಅವಕಾಶ ಸಿಕ್ಕರೂ, ಕಡಿಮೆ ಅವಧಿಯಲ್ಲಿ ಹೇಗೇ ನಿಭಾಯಿಸಬೇಕು
* ಅನರ್ಹರಿಗೆ ವ್ಯತಿರಿಕ್ತವಾಗಿ ತೀರ್ಪು ಬಂದರೆ ಏನು ಮಾಡಬೇಕು?
* ಕಡೆ ಕ್ಷಣದಲ್ಲಿ ಬಂಡಾಯ ವೇಳುವ ಬಿಜೆಪಿ ನಾಯಕರನ್ನು ಸಂತೈಸುವುದು
* ಕನಿಷ್ಠ ಏಳು ಸೀಟು ಗೆಲ್ಲುವುದಕ್ಕೆೆ ಸಾಧ್ಯವಾಗದಿದ್ದರೆ, ಮುಂದೇನು ಮಾಡಬೇಕು?
ಜೆಡಿಎಸ್-ಕಾಂಗ್ರೆೆಸ್ 17 ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳ ಪೈಕಿ 15 ಕ್ಷೇತ್ರದಲ್ಲಿ ಡಿ.5ರಂದು ಚುನಾವಣೆ ನಡೆಯಲಿದೆ. ಈ ಹಿಂದೆ ಸಲ್ಲಿಸಿರುವ ನಾಮಪತ್ರಗಳೊಂದಿಗೆ ಸೋಮವಾರದಿಂದ ಪುನಃ ನಾಮಪತ್ರ ಪ್ರಕ್ರಿಿಯೆ ಹಾಗೂ ನೀತಿ ಸಂಹಿತೆ ಜಾರಿಗೆ ಬರಲಿದೆ.
– ಸಂಜೀವ್‌ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ
ಕಾಂಗ್ರೆೆಸ್ಗೆ ರಾಜು ‘ಕಾಗೆ’ ?
ಡಿಕೆಶಿ ಭೇಟಿಯಾದ ರಾಜು ಕಾಗೆ, ಅಶೋಕ್ ಪೂಜಾರಿ
ಪಕ್ಷದ ಸಿದ್ಧಾಾಂತ ಬಂದವರಿಗೆ ಸ್ವಾಾಗತ
ಪಕ್ಷದ ಅಭ್ಯರ್ಥಿ ಆಯ್ಕೆೆ ಸಂಬಂಧ ಕೆಪಿಸಿಸಿಯಲ್ಲಿ ಸಭೆ
ಕಾಂಗ್ರೆೆಸ್-ಜೆಡಿಎಸ್‌ನಿಂದ ರಾಜೀನಾಮೆ ನೀಡಿದ ಶಾಸಕರ ಕ್ಷೇತ್ರಗಳಿಗೆ ನಡೆಯುತ್ತಿಿರುವ ಚುನಾವಣಾ ಪ್ರಕ್ರಿಿಯೆ ಚುರುಕುಗೊಳ್ಳುತ್ತಿಿದ್ದಂತೆ, ಬಿಜೆಪಿಯಲ್ಲಿ ಬಂಡಾಯ ಹಾಗೂ ರಾಜೀನಾಮೆ ಪರ್ವ ಶುರುವಾಗಿದೆ.
15 ಕ್ಷೇತ್ರಗಳಲ್ಲಿ ಅನರ್ಹರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿರುವುದರಿಂದ, ಬಿಜೆಪಿ ಟಿಕೆಟ್ ಆಕಾಂಕ್ಷಿಿಗಳು ಕಾಂಗ್ರೆೆಸ್‌ನತ್ತ ವಾಲುತ್ತಿಿದ್ದಾಾರೆ. ಇದರ ಭಾಗವಾಗಿ ಬಿಜೆಪಿಯ ಇಬ್ಬರು ಟಿಕೆಟ್ ಆಕಾಂಕ್ಷಿಿಗಳು ಭಾನುವಾರ ಬೆಳಗ್ಗೆೆ ಡಿಕೆ ಶಿವಕುಮಾರ್ ಭೇಟಿ ನೀಡಿ ಚರ್ಚಿಸಿದ್ದಾಾರೆ.
ಕಾಗವಾಡ ಕ್ಷೇತ್ರದ ಬಿಜೆಪಿ ಆಕಾಂಕ್ಷಿಿ ಹಾಗೂ ಕಳೆದ ಚುನಾವಣೆಯಲ್ಲಿ ಪರಾಭಾವಗೊಂಡಿದ್ದ ರಾಜು ಕಾಗೆ ಹಾಗೂ ಗೋಕಾಕ ಟಿಕೆಟ್ ಆಕಾಂಕ್ಷಿಿ ಅಶೋಕ್ ಪೂಜಾರಿ ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸಕ್ಕೆೆ ಭೇಟಿ ನೀಡಿರುವುದು ಹಲವು ಕುತೂಹಲಕ್ಕೆೆ ಕಾರಣವಾಗಿದೆ.
ಭಾನುವಾರ ಬೆಳಗ್ಗೆೆ ಇಬ್ಬರು ನಾಯಕರು ಡಿಕೆಶಿ ಅವರನ್ನುಭೇಟಿಯಾಗಿ, ಕಾಂಗ್ರೆೆಸ್ ಸೇರುವ ಹಾಗೂ ಉಪಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾಾರೆ ಎನ್ನಲಾಗಿದೆ. ಭೇಟಿ ವೇಳೆ, ಕಾಂಗ್ರೆೆಸ್‌ನಿಂದ ಟಿಕೆಟ್ ಸಿಗುವುದು ಖಚಿತವಾದರೆ ಪಕ್ಷಾಾಂತರ ಮಾಡಲು ಸಿದ್ಧ ಎನ್ನುವ ಮಾತನ್ನು ಹೇಳಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರಕ್ಕೆೆ ಸಂಬಂಧಿಸಿದಂತೆ ಡಿಕೆಶಿ ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕರೊಂದಿಗೆ ಚರ್ಚಿಸುವ ಭರವಸೆ ನೀಡಿದ್ದಾಾರೆ ಎನ್ನಲಾಗಿದೆ. ಈ ವಿಚಾರವಾಗಿ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಪ್ರಸ್ತಾಾಪಿಸಲಾಗಿದ್ದು, ಪಕ್ಷದಿಂದ ಅರ್ಹ ಅಭ್ಯರ್ಥಿಗಳು ಸಿಗದಿದ್ದರೆ ಇವರನ್ನು ನಿಲ್ಲಿಸುವ ಲೆಕ್ಕಾಾಚಾರದಲ್ಲಿ ರಾಜ್ಯ ನಾಯಕರು ಚರ್ಚಿಸಿದ್ದಾಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ಧಾಾಂತ ಒಪ್ಪಿಿ ಬಂದರೆ ಬರಲಿ
ಇನ್ನು ಇದೇ ವಿಚಾರವಾಗಿ ಕೆಪಿಸಿಸಿ ನಡೆದ ಸಭೆಯಲ್ಲಿ ಚರ್ಚಿಸಿದ್ದು, ಕೆಲ ಕ್ಷೇತ್ರದಲ್ಲಿ ಕಾಂಗ್ರೆೆಸಿಗೂ ಅಭ್ಯರ್ಥಿಗಳ ಕೊರತೆಯಿರುವುದರಿಂದ, ಬಿಜೆಪಿಯಿಂದ ಗೆಲ್ಲುವ ಅಭ್ಯರ್ಥಿ ಬಂದರೆ ಟಿಕೆಟ್ ನೀಡುವ ಬಗ್ಗೆೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆ ಬಳಿಕ ಈ ಬಗ್ಗೆೆ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜು ಕಾಗೆ ಅವರು ಡಿ.ಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಪಕ್ಷದ ಸಿದ್ದಾಂತ ಒಪ್ಪಿಿ ಯಾರು ಬೇಕಾದರೂ ಪಕ್ಷಕ್ಕೆೆ ಬರಬಹುದು. ಆದರೆ ಟಿಕೆಟ್ ನೀಡುವ ವಿಚಾರ ಹೈಕಮಾಂಡ್ ತೀರ್ಮಾನ ತೆಗದುಕೊಳ್ಳಲಿದೆ ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರು ಕೇಂದ್ರ, ಉತ್ತರ, ಬೆಳಗಾವಿ, ಬಳ್ಳಾಾರಿ ಹಾಗೂ ಮಂಡ್ಯ ಜಿಲ್ಲೆಗಳಿಗೆ ಉಪಚುನಾವಣೆ ಸಂಬಂಧ ನೇಮಕಗೊಂಡಿರುವ ವೀಕ್ಷಕರ ಸಭೆ ನಡೆಸಿದರು. ಸಭೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಎಸ್‌ಆರ್ ಪಾಟೀಲ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿಿ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು.