Sunday, 15th December 2024

ಫ್ಲೈಯಿಂಗ್‌ ಸಿಖ್‌ ಮಿಲ್ಖಾ ಸಿಂಗ್ ಪಂಚಭೂತದಲ್ಲಿ ಲೀನ

ಚಂಡೀಗಢ : ಫ್ಲೈಯಿಂಗ್‌ ಸಿಖ್‌ ಖ್ಯಾತಿಯ ಓಟಗಾರ ಮಿಲ್ಖಾ ಸಿಂಗ್ ಅವರ ಅಂತಿಮ ವಿಧಿಗಳನ್ನ ಶನಿವಾರ ಚಂಡೀಗಢದ ಮಟ್ಕಾ ಚೌಕ್‌ನಲ್ಲಿರುವ ಶವಾಗಾರದಲ್ಲಿ ನಡೆಸಲಾಯಿತು.

ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು, ಪಂಜಾಬ್ ಗವರ್ನರ್ ವಿ.ಪಿ.ಸಿಂಗ್ ಮತ್ತು ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಸುಮಾರು ಒಂದು ತಿಂಗಳ ಕಾಲ ಕರೋನಾ ಸೋಂಕಿನೊಂದಿಗೆ ಹೋರಾಡಿದ ಮಿಲ್ಖಾ ಸಿಂಗ್ ಶನಿವಾರ ನಿಧನರಾದರು. ಶುಕ್ರವಾರ ಸಂಜೆಯಿಂದ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತು. ಜ್ವರದ ಜೊತೆಗೆ ಆಕ್ಸಿಜನ್‌ ಪ್ರಮಾಣವೂ ಕಡಿಮೆಯಾಗಿತ್ತು.