ಹಿಂದುಳಿದ ವರ್ಗಗಳ ವಿಧ್ಯಾರ್ಥಿ ನಿಲಯ
ಹರಪನಹಳ್ಳಿ: ಪಟ್ಟಣದ ಬಾಪೂಜಿನಗರ ಹಿಂಭಾಗದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣದ ಕಾಮಗಾರಿ, ಹಾಗೂ ರಸ್ತೆ ಕಾಮಗಾರಿಗೆ ಶಾಸಕ ಜಿ. ಕರುಣಾಕರ ರೆಡ್ಡಿ ಭೂಮಿ ಪೂಜೆಯನ್ನು ಸಲ್ಲಿಸಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ತಾಲೂಕಿ ವಿವಿಧ ಕಡೆ ಒಟ್ಟು ೯.ಕೋಟಿ ರೂ.ಗಳ ವೆಚ್ಚದ ವಿವಿಧ ಕಾಮಗಾರಿಗಳನ್ನು ಶಂಕುಸ್ಥಾಪನೆ ನೆರವೆರಿಸಿ ದರು. ರಸ್ತೆ, ನೂತನ ಹಿಂದುಳಿದ ವಿಧ್ಯಾರ್ಥಿ ನಿಯಗಳ ಕಟ್ಟಡ ಕಾಮಗಾರಿಗಳಿಗೆ ಭೂಮಿ ಪೂಜೆ, ಶಂಕುಸ್ಥಾಪನೆ ನೆರವೆರಿಸಿ ಬಳಿಕ ಮಾತನಾಡಿದ ಅಧಿಕಾರಿಗಳು ಗುಟ್ಟಮಟ್ಟದ ಸಾಮಗ್ರಿಗಳನ್ನು ಬಳಸಿ, ಉತ್ತಮವಾದ , ಕಟ್ಟಡ, ಮತ್ತು ರಸ್ತೆಗಳ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು. ವಿಧ್ಯಾರ್ಥಿಗಳ ವಸತಿ ನಿಲಯದ ಮಕ್ಕಳು ನೆಲಿಸುವ ಕಟ್ಟಡವು ಪರಿಪೂರ್ಣವಾಗಿ ಉಳಿಯುವಂತೆ ಕಾರ್ಯನಿರ್ವಹಿಸಬೇಕು ಮಾಡಬೇಕೆಂದರು.
ನಂತರ ಶಾಸಕ ಜಿ. ಕರುಣಾಕರ ರೆಡ್ಡಿ ತಾಲೂಕು ಬಿಜೆಪಿ ಕಛೇರಿಗೆ ತೆರಳಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ರವರ ೭೯ ನೇ ಹುಟ್ಟು ಹಬ್ಬದ ಪ್ರಯುಕ್ತ ಕಛೇರಿಯಲ್ಲಿ ಕಾರ್ಯಕರ್ತರೊಂದಿಗೆ ಬೇರೆತು ಸಿಹಿ ಹಂಚಿ ಸಂಭ್ರಮಿಸಿ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಭೀಮಪ್ಪ, ಚಂದ್ರಪ್ಪ, ಪುರಸಭೆ ಸದಸ್ಯ ಎಸ್.ಕೆ.ಜಾವೀದ್, ತಾ.ಪಂ.ಉಪಾಧ್ಯಕ್ಷ ಎಲ್. ಮಂಜ್ಯಾನಾಯ್ಕ, ಆರ್. ಲೊಕೇಶ್, ಸಣ್ಣ ಹಾಲಪ್ಪ, ಕಣಿವಿಹಳ್ಳಿ ಮಂಜು ನಾಥ್, ವಕೀಲರಾದ ಕೆ. ಪ್ರಕಾಶ್, ಮುತ್ತಿಗಿ ರೇವಣಸಿದ್ದಪ್ಪ, ಲ್ಯಾಂಡ್ ಆರ್ಮಿ ಇಲಾಕೆಯ ಅಭಿಯಂತರರಾದ ಆನಂದ,ಯು.ಪಿ. ನಾಗರಾಜ್, ರಾಘವೇಂದ್ರ ಶೆಟ್ಟಿ, ಮಾಡಲಗೇರಿ ನಾಗರಾಜ್ ಎಂ.ಮಲ್ಲೇಶ್, ರಂಗಾಪುರ ಬಸವರಾಜ್, ಚಂದ್ರಪ್ಪ ಮತ್ತು ಇತರರು ಹಾಜರಿದ್ದರು.