Monday, 18th November 2024

Gadag News: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ದುರ್ಮರಣ

Gadag News

ಗದಗ: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದು (Gadag News) ಗದಗ ತಾಲೂಕಿನ ಹುಲಕೋಟಿ ಹೊರವಲಯದಲ್ಲಿ ನಡೆದಿದೆ. ಸಮೀರ್ ಗುಡಿಸಲಮನಿ (20) ಉಳಿವೇಶ್ ಅಂಗಡಿ (16) ಮೃತರು.

ಹುಲಕೋಟಿಯ ಹೊಸಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದ ಉಳವೇಶ್ ಬೈಕ್, ಎದುರಿನಿಂದ ಬಂದ ಸಮೀರ್ ಬೈಕ್‌ಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಬೈಕ್‌ಗಳು ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳವೇಶ್ ಬೈಕ್‌ನಲ್ಲಿದ್ದ ನೇತ್ರಾವತಿ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ | Anmol Bishnoi: ಅಮೆರಿಕದಲ್ಲಿ ಗ್ಯಾಂಗ್​ಸ್ಟರ್ ಅನ್ಮೋಲ್ ಬಿಷ್ಣೋಯ್‌ ಬಂಧನ

ಹಳೆ ವೈಷಮ್ಯಕ್ಕೆ ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

ಚಿಂತಾಮಣಿ: ಹಳೇ ವೈಷಮ್ಯದ ಹಿನ್ನೆಲೆ ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗಮಲ್ಲ ಹಾಗೂ ಗಂಡ್ರಗಾನಹಳ್ಳಿ ಮಧ್ಯ ಇರುವ ದುಗ್ಗನಾರೆಪಲ್ಲಿ ಬಳಿ ನಡೆದಿದೆ.

ಹಲ್ಲೆಗೆ ಒಳಗಾದ ವ್ಯಕ್ತಿ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿ ಗಂಡ್ರಗಾನಹಳ್ಳಿ ಗ್ರಾಮದ ಖದೀರ್  ಬೇಗ್ ಅವರ ಪುತ್ರ ರೋಷನ್ ಬೇಗ್(೩೦ ವರ್ಷ)ಪತ್ನಿ ಅಸ್ಮ ಸುಲ್ತಾನ(೨೮ ವರ್ಷ)ಎಂದು ಗುರುತಿಸಲಾಗಿದೆ.

ರೋಷನ್ ಬೇಗ್ ಸುಮಾರು ಎರಡು ವರ್ಷಗಳಿಂದ ಕಲ್ಪವೃಕ್ಷ ಖಾಸಗಿ ಬಸ್‌ನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡು ಬರುತ್ತಿದ್ದು ಮುರುಗಮಲ್ಲ ಗ್ರಾಮದ ರಘು ಅವರ ಅನುಯಾಯಿ ಗಂಡ್ರಗಾನಹಳ್ಳಿ ಗ್ರಾಮದ ವಾಸಿಯಾದ ಸುರೇಶ್ ಬಿನ್ ನಾರಾಯಣಸ್ವಾಮಿ(೩೨ ವರ್ಷ)ಇವರಿಗೂ ಹಾಗೂ ರೋಷನ್ ಬೇಗ್ ನಡುವೆ ಎರಡು ತಿಂಗಳ ಹಿಂದೆ ಈದ್ ಮಿಲಾದ್ ಹಬ್ಬದಂದು ಗಲಾಟೆಯಾಗಿದ್ದು,ಗ್ರಾಮದ ಹಿರಿಯ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಮಾಡಿಸಿದ್ದರು.

ಹೀಗಿರುವಾಗ ಮತ್ತೆ ಪದೇ ಪದೇ ಸುರೇಶ್ ಹಾಗೂ ಅವನ ಅನುಯಾಯಿಗಳನ್ನು ಕರೆದುಕೊಂಡು ಹೋಗಿ ರೋಷನ್ ಬೇಗ್ ಗೆ ಗುರಾಯಿಸು ವುದು ರೇಗಿಸುವುದು ಮಾಡುತ್ತಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Koratagere News: ಕೆರೆ ನೋಡಲು ಹೋಗಿ ಬೆಂಗಳೂರು ಮೂಲದ ತಂದೆ-ಮಗಳು ನೀರುಪಾಲು

ಭಾನುವಾರ ರಾತ್ರಿ೧೦:೩೦ಕ್ಕೆ ಡ್ರೈವರ್ ಕೆಲಸ ಮುಗಿಸಿ ಮನೆ ಕಡೆ ರೋಷನ್ ಬೇಗ್ ತನ್ನ ದ್ವಿಚಕ್ರ ವಾಹನದಲ್ಲಿ  ಹೋಗುತ್ತಿದ್ದಾಗ ಸುರೇಶ್ ಹಿಂಬಾಲಿಸಿ ಚಾಕುವಿನಿಂದ ಮರಣಾಂತಿಕ ಹಲ್ಲೆ ನಡೆಸಿದ್ದಾನೆ.ಇನ್ನೂ ಅಲ್ಲಿಗೆ ಬಂದ ರೋಶನ್ ಬೇಗ್ ರವರ ಧರ್ಮಪತ್ನಿ ಅಸ್ಮ ಸುಲ್ತಾನ ಅವರ ಮೇಲೆಯೂ ಸಹ ಹಲ್ಲೆ ನಡೆಸಿದ್ದು.ಹಲ್ಲೆಗೆ ಒಳಗಾದ ಪತಿ-ಪತ್ನಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಂಚಾರ್ಲಹಳ್ಳಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಧಾವಿಸಿ ಇಬ್ಬರಿಂದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.