Thursday, 12th December 2024

ಬಿಜೆಪಿಯಿಂದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತಿç ಜನ್ಮ ದಿನಾಚರಣೆ

ಹರಪನಹಳ್ಳಿ: ತಾಲೂಕು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿರುವ ಗಾಂಧಿ ಮೊಮರಿಯಲ್ ಹಾಲ್‌ಗೆ ತೆರಳಿ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಪುರಸಭೆ ಅಧ್ಯಕ್ಷ ಮಂಜುನಾಥ್ ಇಜಂತ್ಕರ್, ಹಿರಿಯ ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಬಿ.ವೈ.ವೆಂಕಟೇಶ್ ನಾಯ್ಕ, ತಿಮ್ಮಣ್ಣ, ಮಂಜ್ಯಾನಾಯ್ಕ, ಎಸ್.ಪಿ.ಲಿಂಬ್ಯಾನಾಯ್ಕ, ಪುರಸಭೆ ಸದಸ್ಯರಾದ ಡಿ.ರೊಕ್ಕಪ್ಪ, ಎಂ.ಕೆ.ಜಾವೀದ್, ಲತಾ ನಾಗರಾಜ್, ರೇಕಮ್ಮ. ಪೂಜಾರ್ ಮಹೇಶ್ ಸೇರಿದಂತೆ ಮತ್ತಿತರರು ಇದ್ದರು.