Thursday, 12th December 2024

Ganesh Chaturthi 2024: ಗೌರಿ-ಗಣೇಶ ಹಬ್ಬದ ಗ್ರ್ಯಾಂಡ್‌ ಮೇಕಪ್‌‌‌ಗೆ ಇಲ್ಲಿದೆ 5 ಸಿಂಪಲ್‌ ರೂಲ್ಸ್!

Ganesh Chaturthi 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗೌರಿ-ಗಣೇಶ ಹಬ್ಬದ (Ganesh Chaturthi 2024) ಫೆಸ್ಟಿವ್‌ ಸೀಸನ್‌ ಗ್ರ್ಯಾಂಡ್‌ ಮೇಕಪ್‌ (Grand Makeup) ಇದೀಗ ಟ್ರೆಂಡಿಯಾಗಿದೆ. ಹೌದು, ಹಬ್ಬದ ಮೇಕಪ್‌ ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು. ನಮ್ಮ ಮನೆಯ ಆಚರಣೆ, ಸಂಪ್ರದಾಯ ಹಾಗೂ ಟ್ರೆಡಿಷನ್‌ಗೆ ಹೊಂದುವಂತಿರಬೇಕು. ಅಲ್ಲದೇ, ನ್ಯಾಚುರಲ್ ಆಗಿಯೂ ಕಾಣಿಸಬೇಕು. ನೋಡಿದ ತಕ್ಷಣ ಎಲ್ಲರಿಗೂ ಇಷ್ಟವಾಗುವಂತಿರಬೇಕು ಎನ್ನುತ್ತಾರೆ ಮೇಕಪ್‌ ಎಕ್ಸ್ಪರ್ಟ್ ಮಂಗಲಾ. ಹಬ್ಬದ ಮೇಕಪ್‌ನಲ್ಲಿ ಏನೇನಿರಬೇಕು? ಏನಿರಬಾರದು? ಎಂಬುದರ ಬಗ್ಗೆ ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್‌

ಅತ್ಯುತ್ತಮ ಬ್ರಾಂಡ್‌ನ ಫೌಂಡೇಶನ್‌ ಆಯ್ಕೆ ಮಾಡಿ

ಹಬ್ಬದ ಮೇಕಪ್‌ಗೆ ಹೈಡೆಫನೇಷನ್‌ ವಾಟರ್‌ ಪ್ರೂಫ್‌ ಮೇಕಪ್‌ ಸೌಂದರ್ಯವರ್ಧಕ ಬಳಸಿ. ಸಾಮಾನ್ಯ, ಜಿಡ್ಡು ಹಾಗೂ ಒಣ ತ್ವಚೆಗೆ ತಕ್ಕಂತೆ ಹೊಂದುವಂತಹ ಫೌಂಡೇಷನ್‌ ಹಚ್ಚಿ. ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವುದು ಮುಖ್ಯ. ಇದೇ ರೀತಿ ಕನ್ಸಿಲರ್‌, ಬ್ಲಷರ್‌ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಬಳಸಿ.

ಈ ಸುದ್ದಿಯನ್ನೂ ಓದಿ | Money Tips: PPF ಖಾತೆ ಹೊಂದಿದ್ದೀರಾ? ಬದಲಾದ ಈ ಹೊಸ ನಿಯಮ ತಿಳಿದಿರಲಿ

ಮೇಕಪ್‌ಗೂ ಮುನ್ನ ಪಾಲಿಸಬೇಕಾದ ರೂಲ್ಸ್

ಮೇಕಪ್‌ಗೂ ಮೊದಲು ಕ್ಲೆನ್ಸಿಂಗ್‌ನಿಂದ ಮುಖವನ್ನು ಕ್ಲೀನ್‌ ಮಾಡಿ. ನಂತರ ಆಯಿಲ್‌ ಫ್ರೀ ಸನ್‌ಸ್ಕ್ರೀನ್‌ ಹಚ್ಚಿ. 5 ನಿಮಿಷದ ನಂತರ ಫೌಂಡೇಷನ್‌ ಲೇಪಿಸಿ. ಮೇಕಪ್‌ ಶುರು ಮಾಡಿ.

ಅಂದದ ಮುಖಕ್ಕೆ ಚೆಂದದ ಲಿಪ್‌ಸ್ಟಿಕ್‌

ಇಡೀ ಮೇಕಪ್‌ ಆಕರ್ಷಕವಾಗಿ ಕಾಣಿಸುವುದು ಒಂದು ಲಿಪ್‌ಸ್ಟಿಕ್‌ನಿಂದ. ಹಾಗಾಗಿ ತುಟಿಗೆ ಹಚ್ಚುವ ಲಿಪ್‌ಸ್ಟಿಕ್‌ ನೋಡಲು ಚೆಂದವಾಗಿ ಕಾಣಿಸಬೇಕು. ಅಲ್ಲದೇ, ಧರಿಸುವ ಅಥವಾ ಉಡುವ ಸೀರೆಗೆ ಹೊಂದುವಂತಿರಬೇಕು. ಹಾಗೆಂದು ಟ್ರೆಂಡ್‌ ಹೆಸರಲ್ಲಿ ಗಾಢ ವರ್ಣದ ಲಿಪ್‌ಶೇಡ್ ಬಳಕೆ ಬೇಡ. ತಿಳಿ ಗುಲಾಬಿ, ರೆಡ್‌ ಅಥವಾ ಬ್ರಿಕ್‌ ರೆಡ್‌ ಶೇಡ್‌ ಆಯ್ಕೆ ಮಾಡಿ, ಲೇಪಿಸಿ.

ಐ ಮೇಕಪ್‌ ಹೀಗಿರಲಿ

ಐ ಮೇಕಪ್‌ ಯಾವುದೇ ಕಾರಣಕ್ಕೂ ಗಾಢವಾಗಿರಬಾರದು. ಅದರಲ್ಲೂ ಸ್ಮೋಕಿ ಮೇಕಪ್‌ಗೆ ನೋ ಹೇಳಿ. ನೋಡಿದಾಗ ಆಕರ್ಷಕವಾಗಿ ಕಾಣುವಂತಹ ನಿಮ್ಮ ಟ್ರೆಡಿಷನಲ್‌ ಔಟ್‌ಫಿಟ್‌ಗೆ ಹೊಂದುವಂತಹ ಐ ಶ್ಯಾಡೋ ಲೇಪಿಸಿ. ಗ್ರಾಂಡ್‌ ಲುಕ್‌ಗಾಗಿ ಎರಡು ಬಣ್ಣದ ಐ ಶ್ಯಾಡೋಗಳನ್ನು ಮರ್ಜ್‌ ಮಾಡಿ. ಬೇಕಿದ್ದಲ್ಲಿ, ಗ್ಲಿಟರ್‌ ಬಳಸಿ. ಐ ಲೈನರ್‌ ಹಾಗೂ ಕಾಡಿಗೆ ಮರೆಯದೇ ಹಚ್ಚಿ.

ಈ ಸುದ್ದಿಯನ್ನೂ ಓದಿ | Job Cut: ಆಗಸ್ಟ್ ತಿಂಗಳಲ್ಲಿ 27 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಟೆಕ್ ದೈತ್ಯ ಕಂಪೆನಿಗಳು

ಟ್ರೆಡಿಷನಲ್‌ ಆಗಿರಲಿ ಹೇರ್‌ಸ್ಟೈಲ್‌

ಮೇಕಪ್‌ಗೆ ಸಾಥ್‌ ನೀಡುವ ಹೇರ್‌ಸ್ಟೈಲ್‌ ಮೊದಲೇ ಪ್ಲಾನ್‌ ಮಾಡಿ. ಮೇಕಪ್‌ಗೂ ಮೊದಲು ಹೇರ್‌ಸ್ಟೈಲ್‌ ಮಾಡುವುದು ಮುಖ್ಯ. ಉದ್ದನಾದ ಕುಚ್ಚಿನ ಹೂವಿನ ಜಡೆ ಈ ಹಬ್ಬಕ್ಕೆ ಮ್ಯಾಚ್‌ ಆಗುವುದು. ತೀರಾ ಗ್ರ್ಯಾಂಡ್‌ ಬೇಡ ಎನ್ನುವವರು ಜಡೆ ಬಂಗಾರ ಧರಿಸಬಹುದು.