Saturday, 14th December 2024

ಪ್ಲಾಸ್ಟರ್ ಆಫ್ ಪ್ಯಾರಿಷ್ ಗಣೇಶ ಮಾರಾಟ ನಿಷೇಧಿಸಲು ಆಗ್ರಹಿಸಿ ಮನವಿ

ಬಸವನಬಾಗೇವಾಡಿ: ಗಣೇಶ ಚತರ‍್ಥಿ ಹಬ್ಬದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಷ್ ಗಣೇಶ ಮರ‍್ತಿಗಳ ಮಾರಾಟ ಮಾಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಜೇನುಗೂಡು ಸಂಸ್ಥೆಯ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಸಂಸ್ಥೆಯ ಸದಸ್ಯ ಸತೀಶ ಕ್ವಾಟಿ ಮಾತನಾಡಿ, ಗಣೇಶ ಚತರ‍್ಥಿ ಹಬ್ಬದಲ್ಲಿ ಪಟ್ಟಣದಲ್ಲಿ ಸರ‍್ವಜನಿಕವಾಗಿ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ಮರ‍್ತಿಗಳನ್ನು ಕಡ್ಡಾಯ ವಾಗಿ ಪರಿಸರಕ್ಕೆ ಪೂರಕವಾದ ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಿದ ಗಣೇಶ ಮರ‍್ತಿಗಳನ್ನು ಪ್ರತಿಷ್ಠಾಪಸುವಂತಾಗಬೇಕು. ಈ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಷ್ ಮರ‍್ತಿ ತಯಾರಿಸುವುದು ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಸರಕಾರ ಈಗಾ ಗಲೇ ನಿಷೇಧಿಸಿದೆ. ಅದರಂತೆ ಪಟ್ಟಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಷ್ ಗಣೇಶ ಮರ‍್ತಿಗಳ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಹಲವು ರ‍್ಷಗಳಿಂದ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಪುರಸಭೆಯವರು ಪ್ಲಾಸ್ಟರ್ ಆಫ್ ಪ್ಯಾರಿಷ್ ಗಣೇಶ ಮರ‍್ತಿ ತಯಾರಕರ ಹಾಗೂ ಮಾರಾಟಗಾರರ ಸಭೆ ಕರೆದು ಕಟ್ಟು ನಿಟ್ಟಿನ ಸೂಚನೆ ಗಳನ್ನು ನೀಡಬೇಕು. ಕೇವಲ ಪರಿಸರಸ್ನೇಹಿ ಮಣ್ಣಿನ ಮರ‍್ತಿಗಳನ್ನು ತಯಾರಿಸುವಂತೆ ನರ‍್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಜೇನುಗೂಡು ಸಂಸ್ಥೆಯ ಸದಸ್ಯರಾದ ಪ್ರದೀಪ ಮುಂಜಾನಿ, ಮಹಾಂತೇಶ ಅವಟಿ, ಗುರು ಹಿರೇಮಠ, ಬಸವಂತ ಕಮತ, ಬಸವರಾಜ ಮಾದನಶೆಟ್ಟಿ, ಸಿದ್ದಲಿಂಗ ಒಡೆಯರ, ಹಣಮಂತ ಮೇಟಿ, ಸಂಗಮೇಶ ಪೂಜಾರಿ ಇದ್ದರು.