Saturday, 14th December 2024

ಗಾಂಜಾ ಮಾರಾಟ: ಬಂಧನ

ಗಂಗಾವತಿ: ತಾಲೂಕಿನ ಆನೆಗುಂದಿ ಹತ್ತಿರ ಇರುವ ಹನುಮನಹಳ್ಳಿಯಲ್ಲಿರುವ ಓಂ ಕೆಫೆ ಹತ್ತಿರ ಗಾಂಜಾ ಮಾರಾಟ ಮಾಡು ತ್ತಿದ್ದ ಸೀತಾರಾಂ ಎಂಬುವವನನ್ನು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊಸಪೇಟೆ ಅಬಕಾರಿ ಉಪ ಆಯುಕ್ತ ಮತ್ತು ಕೊಪ್ಪಳ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎನ್ಡಿಪಿಎಸ್ ಕಾಯ್ದೆ 1985 ಕಾಲಂ 8 ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಗೆ ಒತ್ತಾಯ: ಈ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರ ಗ್ಯಾಂಗ್ ಉಪಟಳ ಹೆಚ್ಚಾಗಿದೆ ಎಂದು ಜನಜಾಗೃತಿ ಸಮಿತಿ ರಾಜ್ಯ ಅಧ್ಯಕ್ಷ ಮಚ್ಛಿ ಗಣೇಶ ಆರೋಪಿಸಿದ್ದಾರೆ. ಪ್ರಭಾವಶಾಲಿ ರಾಜಕಾರಣಿಗಳ ಕ್ರಪೆಯಿಂದ ಇಂತಹ ಘಟನೆಗಳು ಸಂಘಟಿಸುತ್ತವೆ ಎಂದು ಹೇಳಿದ್ದಾರೆ.