Saturday, 14th December 2024

Ganjeefa Raghupathi Bhatta: ಗಂಜೀಫಾ ರಘುಪತಿ ಭಟ್ಟರಿಗೆ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್

kalidas award

ನವದೆಹಲಿ: 2023ನೇ ಸಾಲಿನ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿ(Kalidasa Samman Award)ಗೆ ಮಧ್ಯಪ್ರದೇಶ ಸರ್ಕಾರ ಜೀವಿತಾವಧಿಯ ಶ್ರೇಷ್ಠತೆ ಆಧಾರದ ಮೇಲೆ ಸರ್ವಾನುಮತದಿಂದ ರಘುಪತಿ ಭಟ್ಟ(Ganjeefa Raghupathi Bhatta)ರನ್ನು ಆಯ್ಕೆ ಮಾಡಿದೆ . 5 ಲಕ್ಷ ರೂ. ನಗದು ಶಾಲು ಶ್ರೀಫಲಕ ನೀಡಿ ರಘಪತಿ ಭಟ್ಟರನ್ನು ಗೌರವಿಸಲಾಗುತ್ತದೆ. ನವೆಂಬರ್‌ 12ರಂದು ಉಜ್ಜಯಿನಿಯಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ರಘುಪತಿ ಭಟ್ಟರಿಗೆ ಈ ಗೌರವ ಪ್ರದಾನ ಮಾಡಲಾಗುತ್ತದೆ. ಭಾರತೀಯ ಶಾಸ್ತ್ರೀಯ ಚಿತ್ರ ರಚನೆಯಲ್ಲಿ ಅವರ ಸುಮಾರು 50 ವರ್ಷದ ಕೊಡಿಗೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

1957 ರಲ್ಲಿ ಉಡುಪಿಯಲ್ಲಿ ಜನಿಸಿದ ರಘುಪತಿ ಭಟ್ ಅವರು ತಮ್ಮ ತಂದೆ ಅರ್ಚಕರಾಗಿದ್ದ ಕಾರಣ ಅಗ್ರಹಾರದ ವಾತಾವರಣದಲ್ಲೇ ಬೆಳೆದರು. ಕಲೆಯ ಮೇಲಿನ ಅವರ ಉತ್ಸಾಹದಿಂದ, ಅವರು ಕಲೆಯನ್ನು ಅಧ್ಯಯನ ಮಾಡಲು ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಸೇರಿದರು ಮತ್ತು ನಂತರ ಮ್ಯೂರಲ್ ಪೇಂಟಿಂಗ್ ಮತ್ತು ನೈಸರ್ಗಿಕ ಬಣ್ಣಗಳೊಂದಿಗೆ ಕೆಲಸ ಮಾಡುವ ತಂತ್ರಗಳನ್ನು ಕರಗತ ಮಾಡಿಕೊಳ್ಳಲು ಕೊಟ್ಟಾಯಂನಲ್ಲಿರುವ ಸಂಸ್ಥೆಯನ್ನು ಸೇರಿದರು.

ಮೈಸೂರು ಗಂಜೀಫಾ ವರ್ಣಚಿತ್ರಗಳ ಪುನರುಜ್ಜೀವನದ ಕೀರ್ತಿಗೆ ಪಾತ್ರರಾದ ಅವರು ಗಂಜೀಫ ರಘುಪತಿ ಭಟ್ ಎಂಬ ಬಿರುದನ್ನು ಗಳಿಸಿದ್ದಾರೆ. ಅವರ ಕಲೆಯನ್ನು ಭಾರತದಾದ್ಯಂತ ಪ್ರದರ್ಶಿಸಲಾಗಿದೆ ಮತ್ತು ಲಂಡನ್, ಹೇಗ್, ಟೋಕಿಯೋ, ಒಸಾಕಾ, ಒಟ್ಟಾವಾ ಮತ್ತು ಟುನೀಶಿಯಾದಲ್ಲಿ ಚಿತ್ರ ಪ್ರದರ್ಶನಗಳಲ್ಲಿ ಅಂತರರಾಷ್ಟ್ರೀಯ ಸಹ ಕಾಣಿಸಿಕೊಂಡಿದೆ. ಅವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕಲಾ ಪುರಸ್ಕಾರ, ಪರ್ಯಾಯ ಮಠ, ಉಡುಪಿ ಮತ್ತು ಡಾ ರಾಜ್ ಅಮೋಘ ನಾಗರೀಕ ಪ್ರಶಸ್ತಿ ಸೇರಿವೆ. ಅವರ ಗಂಗೀಫಾ ಚಿತ್ರ ಕಲೆ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಮತ್ತು ಮೈಸೂರಿನ ಅರಮನೆ ಮ್ಯೂಸಿಯಂ ಸೇರಿದಂತೆ ವಿವಿಧ ವಸ್ತು ಸಂಗ್ರಹಾಲಯದಲ್ಲಿದೆ.

ಏನಿದು ಗಂಜೀಫಾ?
ಗಾಂಜೀಫಾ ಇಸ್ಪೀಟಿನಂಥ ಒಂದು ಆಟ. ಇದಕ್ಕೆ ಛದ್ ಎಂಬ ಇನ್ನೊಂದು ಹೆಸರೂ ಇದೆ. ಬಾಬರ್ ನಾಮ, ಐನೆ ಅಕ್ಬರಿ, ಕಾಬೂನೆ ಇಸ್ಲಾಮ್, ಗಿರಿಧರ ಕೃತ ಗಂಜೀಫ್ ಲೇಖನ, ಶ್ರೀತತ್ತ್ವನಿಧಿ ಇತ್ಯಾದಿ ಗ್ರಂಥಗಳಲ್ಲಿ ಈ ಗಂಜೀಬಾ ಬಗ್ಗೆ ಉಲ್ಲೇಖ ಇದೆ. ಆಟದ ಪ್ರಕಾರ ಮತ್ತು ವಿವರಣೆಗಳಲ್ಲಿ ಒಂದು ಗ್ರಂಥಕ್ಕೂ ಇನ್ನೊಂದು ಗ್ರಂಥಕ್ಕೂ ವ್ಯತ್ಯಾಸವಿದೆ. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದಿತ್ತು. ಗಾಂಜೀಫಾ ಆಟವನ್ನು ಹೆಚ್ಚಾಗಿ ಮೊಘಲರು ಆಡುತ್ತಿದ್ದರು. ನಂತರ ಈ ಆಟ ಭಾರತೀಯ ಆಟವಾಗಿ ಖ್ಯಾತಿ ಪಡೆಯಿತು. ಗಾಂಜೀಫಾ ಆಟ 8-19ನೇ ಶತಮಾನದಲ್ಲಿ ಹಿಂದೆ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.

3 ರಿಂದ 3.5 ಇಂಚು ವ್ಯಾಸವುಳ್ಳ ವೃತ್ತಾಕಾರದ ಎಲೆಗಳನ್ನು(ಕಾರ್ಡ್) ಇದಕ್ಕೆ ಉಪಯೋಗಿಸಲಾಗುತ್ತದೆ. ಒಂದು ಬದಿಯಲ್ಲಿ ಸಾಂಕೇತಿಕವಾಗಿ ಬರೆದ ಒಂದು ಚಿತ್ರವಿರುತ್ತಿತ್ತು. ಇನ್ನೊಂದು ಬದಿ ಖಾಲಿ. ಇದರಲ್ಲಿ 97 – 260 ಎಲೆಗಳನ್ನು ಬಳಸಿ ಆಡುವ ವಿವಿಧ ರೀತಿಯ ಆಟಗಳಿರುತ್ತಿದ್ದವು. ಆಟದ ಪದ್ಧತಿಗೆ ಹೊಂದಿಕೊಂಡು ಅದರ ಮೇಲೆ ಚಿತ್ರಗಳಿರುತ್ತವೆ. ಪೌರಾಣಿಕ ವ್ಯಕ್ತಿಗಳು, ಸಾಮಾಜಿಕ, ಹೆಣ್ಣು, ಹೂ, ಪ್ರಾಣಿಗಳು ಮುಂತಾದ ಚಿತ್ರಗಳನ್ನು ಚಿತ್ರಿಸಲಾಗಿರುತ್ತಿತ್ತು. ದಂತದಿಂದ ಮಾಡಿದ ಎಲೆಗಳನ್ನು ಆಟಕ್ಕೆ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಇನ್ನು ಇದುವರೆಗೆ ರಾಜ್ಯದ ಏಳು ಗಣ್ಯರಿಗೆ ಕಾಳಿದಾಸ್‌ ಸಮ್ಮಾನ್‌ ಪ್ರಶಸ್ತಿ ಗೌರವ ಸಂದಿದೆ. ಮಲ್ಲಿಕಾರ್ಜುನ್​ ಮನ್ಸೂರು, ಕುಮಾರ್​ ಗಂಧರ್ವ, ಬಿವಿ ಕಾರಂತ್​, ಗಿರೀಶ್​ ಕಾರ್ನಾಡ್​​, ಪಂಡಿತ ಪಟ್ಟರಾಜ್​ ಗವಾಯಿ, ಸರೋಜಾ, ವೈದ್ಯನಾಥನ್, ವೆಂಕಟೇಶ​ ಕುಮಾರ್​ ಅವರು ಈ ಪ್ರಶಸ್ತಿ ಪಡೆದ ಗಣ್ಯರು.

ಈ ಸುದ್ದಿಯನ್ನೂ ಓದಿ: Shrikant Pangarkar: ಗೌರಿ ಲಂಕೇಶ್‌ ಹತ್ಯೆ ಪ್ರಮುಖ ಆರೋಪಿ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆ