ಕೋಟಕ್ ಮಹೀಂದ್ರ ಬ್ಯಾಂಕ್, ಬಿಎಫ್ಎಸ್ಐ ನ ಮಣಿಪಾಲ್ ಅಕಾಡೆಮಿಯೊಂದಿಗೆ ಕೋಟಕ್ ನೆಕ್ಸ್ಟ್ ಜೆನ್ ಬ್ಯಾಂಕರ್‌ಗಳ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ; ಇದು, ಬ್ಯಾಂಕಿಂಗ್ ವೃತ್ತಿಜೀವನಕ್ಕೆ ಒಂದು ಗೇಟ್‌ವೇ ಆಗಲಿದೆ.
ಬ್ಯಾಂಕಿಂಗ್‌ನಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್ ಅನ್ನು ನೀಡುತ್ತದೆ.
ಬೆಂಗಳೂರು: ಕೋಟಕ್ ಮಹೀಂದ್ರ ಬ್ಯಾಂಕ್ (“ಕೆಎಂಬಿಎಲ್” / ” ಕೋಟಕ್”) BFSI ನ ಮಣಿಪಾಲ್ ಅಕಾಡೆಮಿಯೊಂದಿಗೆ ಸಹಭಾಗಿತ್ವದಲ್ಲಿ ಕೋಟಕ್ ನೆಕ್ಸ್ಟ್ ಜೆನ್ ಬ್ಯಾಂಕರ್ಸ್ ಕಾರ್ಯಕ್ರಮವನ್ನು ಪ್ರಾರಂಭಿಸಲು ಮತ್ತು ವಿಕಾಸಗೊಳ್ಳುತ್ತಿರುವ ಬ್ಯಾಂಕಿಂಗ್ ಉದ್ಯಮದ ಅಗತ್ಯಗಳನ್ನು ಪರಿಹರಿಸಲು ಉದ್ಯಮಕ್ಕೆ-ಸಿದ್ಧ ಪ್ರತಿಭೆಗಳನ್ನು ಬೆಳೆಸಲು. ರಿಲೇಶನ್ ಶಿಪ್ ನಿರ್ವಹಣೆಯಲ್ಲಿ 12-ತಿಂಗಳ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಕೋರ್ಸ್ ಮೂಲಕ ಬ್ಯಾಂಕಿಂಗ್ ವೃತ್ತಿ ಆಕಾಂಕ್ಷಿಗಳಿಗೆ ಗ್ರಾಹಕರ ಅನುಭವದ ತರಬೇತಿ ನೀಡುತ್ತದೆ ಮತ್ತು ಕೊನೆಯಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಲಿಮಿಟೆಡ್‌ನಲ್ಲಿ ಬ್ರಾಂಚ್ ರಿಲೇಶನ್‌ಶಿಪ್ ಮ್ಯಾನೇಜರ್ (ಡೆಪ್ಯುಟಿ ಮ್ಯಾನೇಜರ್) ಆಗಿ ಕೆಲಸ ಸಿಗುವುದನ್ನು ಖಚಿತಗೊಳಿಸುತ್ತದೆ.
ಬದಲಾಗುತ್ತಿರುವ ಬ್ಯಾಂಕಿಂಗ್ ಮತ್ತು ಹಣಕಾಸಿನ ಸನ್ನಿವೇಶ, ಗ್ರಾಹಕರ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಕೆಲಸಮಾಡುವ ಸಾಮರ್ಥ್ಯಗಳುಳ್ಳ ಪ್ರತಿಭೆಗಳಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿದೆ. ಕೋಟಕ್ ನೆಕ್ಸ್ಟ್ ಜೆನ್ ಬ್ಯಾಂಕರ್ಸ್ ಪ್ರೋಗ್ರಾಂ, ಬ್ಯಾಂಕಿಂಗ್ ಉದ್ಯಮದ ಅಗತ್ಯತೆಗಳನ್ನು ಪರಿಹರಿಸುತ್ತದೆ ಮತ್ತು ಗ್ರಾಹಕ-ಕೇಂದ್ರಿತ ಸೇವೆಗಳನ್ನು ಹಿತಕರವಾಗಿ ತಲುಪಿಸುವಲ್ಲಿ ಬ್ಯಾಂಕಿಗೆ ನೆರವಾಗುತ್ತದೆ. ಬ್ಯಾಂಕಿಂಗ್ ತಜ್ಞರು ಮತ್ತು ಬ್ಯಾಂಕಿನ ನಾಯಕರು ನೀಡುವ ಸಮಗ್ರ ತರಗತಿ ಮತ್ತು ಕೆಲಸದ ತರಬೇತಿಯು ಕೋಟಕ್ ಮಹೀಂದ್ರ ಬ್ಯಾಂಕ್‌ನ ಸಂಸ್ಕೃತಿ ಮತ್ತು ಉದ್ಯಮ-ಮಾನ್ಯತೆ ಪಡೆದ ಪ್ರಕ್ರಿಯೆಗಳಲ್ಲಿ ಪ್ರತಿಭಾನ್ವಿತರಿಗೆ ಅವಕಾಶ ನೀಡುತ್ತದೆ.
ಕೋಟಕ್ ಮಹೀಂದ್ರ ಬ್ಯಾಂಕ್ ಲಿಮಿಟೆಡ್‌ನ ಗ್ರೂಪ್ ಅಧ್ಯಕ್ಷ ಮತ್ತು ಗ್ರಾಹಕ ಬ್ಯಾಂಕ್ ಮುಖ್ಯಸ್ಥ ವಿರಾಟ್ ದಿವಾಂಜಿ: “ಪ್ರತಿಭೆಗಳನ್ನು ಪೋಷಿಸಲು ಮತ್ತು ಬ್ಯಾಂಕಿಂಗ್ ಉದ್ಯಮಕ್ಕೆ ಹೊಸ-ತಲೆಮಾರಿನ ರಿಲೇಶನ್ ಶಿಪ್ ವ್ಯವಸ್ಥಾಪಕರನ್ನು ತಯಾರಿಸಲು ನಾವು ಬಿಎಫ್ಎಸ್ಐ ನ ಮಣಿಪಾಲ್ ಅಕಾಡೆಮಿಯೊಂದಿಗೆ ಕೈಜೋಡಿಸಲು ಸಂತೋಷವಾಗುತ್ತಿದೆ. ಕೋಟಕ್ ಮಹೀಂದ್ರ ನೆಕ್ಸ್ಟ್ ಜೆನ್ ಬ್ಯಾಂಕರ್ಸ್ ಕಾರ್ಯಕ್ರಮ, ಮಹತ್ವಾಕಾಂಕ್ಷಿ ಯುವಜನರಿಗೆ ಒಂದು ಸೂಕ್ತವಾದ ಉಡಾವಣಾ ಪ್ಯಾಡ್ ಆಗಿದೆ. ಬ್ಯಾಂಕಿಂಗ್ ವೃತ್ತಿಜೀವನದಲ್ಲಿ ಬೆಳೆಯಲು ಮತ್ತು ಯಶಸ್ವಿಯಾಗಲು ಅಗತ್ಯವಾದ ಕೌಶಲಗಳೊಂದಿಗೆ ಅವರನ್ನು ಸಜ್ಜುಗೊಳಿಸುತ್ತದೆ.
ಬಿಎಫ್ಎಸ್ಐ ನ ಮಣಿಪಾಲ್ ಅಕಾಡೆಮಿಯ ಮುಖ್ಯ ವ್ಯಾಪಾರ ಅಧಿಕಾರಿ ರಾಬಿನ್ ಭೌಮಿಕ್ ಅವರು ಹೇಳುತ್ತಾರೆ: ” ನೆಕ್ಸ್ಟ್ ಜೆನ್ ಬ್ಯಾಂಕರ್ಸ್ ಕಾರ್ಯಕ್ರಮಕ್ಕಾಗಿ ಕೋಟಕ್ ಮಹೀಂದ್ರ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಲು ನಾವು ಉತ್ಸುಕರಾಗಿದ್ದೇವೆ. ಹಣಕಾಸು ಸೇವೆಗಳಾದ್ಯಂತ ತರಬೇತಿ ನೀಡಲು ನಾವು ಬಿಎಫ್ಎಸ್ಐ ನ ಶ್ರೀಮಂತ ಉದ್ಯಮಾನುಭವದ ಸದುಪಯೋಗ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಮತ್ತು ಸಾಫ್ಟ್ ಕೌಶಲಗಳ ತರಬೇತಿ ಇರುತ್ತದೆ, ದೃಢವಾದ ಗ್ರಾಹಕ-ಕೇಂದ್ರಿತ ವಿಧಾನದೊಂದಿಗೆ. ಬ್ಯಾಂಕಿನ ಯಶಸ್ಸಿಗೆ ಚಾಲನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಮುಂದಿನ ಪೀಳಿಗೆಯ ಬ್ಯಾಂಕರ್‌ಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಮುಖ್ಯ ಗುರಿ.”
ಕೋಟಕ್ ನೆಕ್ಸ್ಟ್ ಜೆನ್ ಬ್ಯಾಂಕರ್‌ಗಳ ಕಾರ್ಯಕ್ರಮದ ಭಾಗವಾಗಿ ಬಿಎಫ್‌ಎಸ್‌ಐ ನ ಬೆಂಗಳೂರು ಕ್ಯಾಂಪಸ್‌ನಲ್ಲಿರುವ ಮಣಿಪಾಲ್ ಅಕಾಡೆಮಿಯಲ್ಲಿ 4-ತಿಂಗಳ ವಸತಿ ಸಹಿತವಾದ ತರಗತಿಯ ತರಬೇತಿ ಇರುತ್ತದೆ. ನಂತರ 2 ತಿಂಗಳ ಆನ್-ದಿ-ಜಾಬ್ ಟ್ರೈನಿಂಗ್ (ಒಜೆಟಿ). ಅಂತಿಮವಾಗಿ, ಭಾರತದಲ್ಲಿರುವ ನಿಯೋಜಿತ ಕೋಟಕ್ ಮಹೀಂದ್ರ ಬ್ಯಾಂಕ್‌ನ ಶಾಖೆ/ಕಛೇರಿಯಲ್ಲಿ 6 ತಿಂಗಳ ಇಂಟರ್ನ್‌ಶಿಪ್‌ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.
ಪಠ್ಯಕ್ರಮದಲ್ಲಿ ಬಿಎಫ್ಎಸ್ಐ ನ ಮಣಿಪಾಲ್ ಅಕಾಡೆಮಿ ಬೋಧಕವರ್ಗದವರು ಮತ್ತು ಉದ್ಯಮದ ನಾಯಕರು ಸಿದ್ಧಪಡಿಸಿದ ಪ್ರಮುಖ ಬ್ಯಾಂಕಿಂಗ್ ಪರಿಕಲ್ಪನೆಗಳು ಇರುತ್ತವೆ. ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ ನ ವಿವಿಧ ಅಂಶಗಳ ಕುರಿತು ಮಾರ್ಗದರ್ಶನ ಮತ್ತು ನಿಯೋಜಿಸಲಾದ ಯೋಜನೆಗಳು ಮತ್ತು ಗುರಿಗಳ ಮೂಲಕ ವ್ಯಕ್ತಿಗತ ಮಾರ್ಗದರ್ಶನವನ್ನು ಒದಗಿಸಲಾಗುತ್ತದೆ. ಕೋಟಕ್ ಮಹೀಂದ್ರ ಬ್ಯಾಂಕ್, ಕಲಿಕಾ ಕಾರ್ಯಕ್ರಮದ ಮೂರು ಹಂತಗಳಲ್ಲಿ ಸ್ಟೈಪೆಂಡ್‌ಗಳ ಮೂಲಕ ಹಣಕಾಸಿನ ನೆರವು ನೀಡುತ್ತದೆ ಜೊತೆಗೆ ಖಚಿತವಾದ** ಬೋನಸ್ ಸಹ ನೀಡುತ್ತದೆ.
ಕೋಟಕ್ ನೆಕ್ಸ್ಟ್ ಜೆನ್ ಬ್ಯಾಂಕರ್ಸ್ ಕಾರ್ಯಕ್ರಮದ ಮೊದಲ ಬ್ಯಾಚ್ ಮಾರ್ಚ್ 2024 ರಿಂದ ಪ್ರಾರಂಭವಾಗುತ್ತದೆ. ನೋಂದಾಯಿಸಿಕೊಳ್ಳಲು ಮತ್ತು ನೆಕ್ಸ್ಟ್ ಜೆನ್ ಬ್ಯಾಂಕರ್ಸ್ ಪ್ರೋಗ್ರಾಂನ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸಂದರ್ಶಿಸಿ: https://www.kotak.com/en/about-us/careers/nextgen.html
ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ:
ಈ ಕಾರ್ಯಕ್ರಮಕ್ಕೆ ಅರ್ಹರಾಗಲು:
• ಅರ್ಜಿದಾರರು ಯಾವುದೇ ವಿಷಯಗಳಲ್ಲಿ ಬ್ಯಾಚಲರ್ಸ್/ಗ್ರ್ಯಾಜುಯೇಷನ್ ಪೂರ್ಣಗೊಳಿಸಿರಬೇಕು
• ಅರ್ಜಿದಾರರು ಪದವಿ/ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದು ಪರೀಕ್ಷೆ ಬರೆದು ಫಲಿತಾಂಶಗಳಿಗಾಗಿ ಕಾಯುತ್ತಿದ್ದರೆ: ಅಂತಹವರೂ ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಸೇರುವ ದಿನಾಂಕದ ವೇಳೆಗೆ ಅಂತಿಮ ವರ್ಷದ ಅಂಕಗಳ ಪಟ್ಟಿ ಮತ್ತು ಪದವಿ ಪ್ರಮಾಣಪತ್ರವು ಲಭ್ಯವಿರಬೇಕು.
• ಕಾರ್ಯಕ್ರಮಕ್ಕಾಗಿ ನೋಂದಾಯಿಸಿಕೊಳ್ಳುವ ಸಮಯದಲ್ಲಿ: ಆಕಾಂಕ್ಷಿಗಳು 27 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
• ಬಿಎಸ್/ಬಿಇ/ಬಿಟೆಕ್ ಪದವಿಯಲ್ಲಿ ಒಟ್ಟಾರೆ ಶೇ.60+ ಸ್ಕೋರ್ ಗಳಿಸಿರಬೇಕು.
• ಇತರ ಸ್ಪೆಶಲಿಸೇಷನ್ ಗಳಾದರೆ: ಪದವಿಯಲ್ಲಿ ಒಟ್ಟಾರೆ ಶೇ.50+ ಸ್ಕೋರ್ ಅಗತ್ಯವಿದೆ.
ಆಯ್ಕೆ ಪ್ರಕ್ರಿಯೆ
• ನೋಂದಣಿಗೆ ಸಂದರ್ಶಿಸಿ: https://www.kotak.com/en/about-us/careers/nextgen.html
• ನಂತರ, ಕಾರ್ಯಕ್ರಮಕ್ಕೆ ಆಯ್ಕೆಯಾಗಲು ಮೌಲ್ಯಮಾಪನ ಪರೀಕ್ಷೆ ಮತ್ತು ಒಂದು ಸಂದರ್ಶನ ಇರುತ್ತದೆ.
• ಮೌಲ್ಯಮಾಪನದಲ್ಲಿ ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಅರಿವಿನ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
• ಮೌಲ್ಯಮಾಪನ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಸಮಿತಿಯು ಸಂದರ್ಶಿಸುತ್ತದೆ.
• ಮೌಲ್ಯಮಾಪನ ಪರೀಕ್ಷೆ ಮತ್ತು ಸಂದರ್ಶನದ ದಿನಾಂಕಗಳನ್ನು ಅಭ್ಯರ್ಥಿಗಳಿಗೆ ಮುಂಚಿತವಾಗಿ ತಿಳಿಸಲಾಗುತ್ತದೆ.
• ಅಭ್ಯರ್ಥಿಯು ಕಾರ್ಯಕ್ರಮದ ಎಲ್ಲ 3 ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೇಲೆ ಕೆಲಸವು ಖಚಿತವಾಗುತ್ತದೆ.
• ಅನುಕ್ರಮವಾಗಿ 12 ಮತ್ತು 24 ತಿಂಗಳುಗಳ ಕಾಲ ಕೆಲಸ ಮಾಡಿದ ಬಳಿಕ 1.5 ಲಕ್ಷ ರೂಗಳ ಬೋನಸ್ ಖಚಿತ ಮತ್ತು ಇದನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ.