ಬೆಂಗಳೂರು: ಚಿನ್ನದ ದರ ಇಂದು (ನವೆಂಬರ್ 6) ಏರಿಕೆ ಕಂಡಿದೆ(Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್ 1 ಗ್ರಾಂ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ ತಲಾ 10 ರೂ. ಮತ್ತು 11ರೂ. ಇಳಿಕೆ ಆಗಿದೆ. ಆ ಮೂಲಕ ಇಂದಿನ ದರ 7,365 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 8,035 ರೂ. ಇದೆ.
22 ಕ್ಯಾರಟ್ ಚಿನ್ನದ ದರಗಳ ವಿವರ
22 ಕ್ಯಾರಟ್ನ 8 ಗ್ರಾಂ ಚಿನ್ನ 58,920 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 73,650ರೂ. ಮತ್ತು 100 ಗ್ರಾಂಗೆ 7,36,500 ರೂ. ಪಾವತಿಸಬೇಕಾಗುತ್ತದೆ.
24 ಕ್ಯಾರಟ್ ಚಿನ್ನದ ದರಗಳ ವಿವರ
24 ಕ್ಯಾರಟ್ನ 8 ಗ್ರಾಂ ಚಿನ್ನ 64,280 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 80,350 ರೂ. ಮತ್ತು 100 ಗ್ರಾಂಗೆ 8,03,500ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
ಬೆಂಗಳೂರು | 7,365 ರೂ. | 8,035 ರೂ |
ದೆಹಲಿ | 7,380 ರೂ. | 8,050 ರೂ. |
ಮುಂಬೈ | 7,365 ರೂ. | 8,050 ರೂ. |
ಚೆನ್ನೈ | 7,365 ರೂ. | 8,050 ರೂ. |
ಹೈದರಾಬಾದ್ | 7,365 ರೂ. | 8,050 ರೂ. |
ಬೆಳ್ಳಿ ಬೆಲೆ
ಇತ್ತ ಬೆಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬೆಳ್ಳಿ 1 ಗ್ರಾಂನ ಬೆಲೆ 96 ರೂ., 8 ಗ್ರಾಂಗೆ 768 ರೂ., 10 ಗ್ರಾಂಗೆ 960 ರೂ. ಮತ್ತು 1 ಕೆಜಿಗೆ 96,000 ರೂ. ಪಾವತಿಸಬೇಕಾಗುತ್ತದೆ.
ಆಭರಣ ಕೊಂಡುಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳಿವು
ದೇಶದಲ್ಲಿ ಚಿನ್ನ ಎನ್ನುವುದು ಬಹು ಬೇಡಿಕೆಯ ಮತ್ತು ಅತ್ಯಮೂಲ್ಯ ಲೋಹ ಎನಿಸಿಕೊಂಡಿದೆ. ಆಭರಣದ ಜತೆಗೆ ಹೂಡಿಕೆಗೂ ಚಿನ್ನವನ್ನು ಪರಿಗಣಿಸಲಾಗುತ್ತದೆ. ಅದರಲ್ಲಿಯೂ ಮದುವೆ ಸೀಸನ್, ಹಬ್ಬಗಳ ಋತುಗಳಲ್ಲಿ ಚಿನ್ನದ ಆಭರಣಕ್ಕೆ ಉತ್ತಮ ಬೇಡಿಕೆ ಕಂಡು ಬರುತ್ತದೆ. ಮೊದಲ ಬಾರಿಗೆ ಆಭರಣ ಖರೀದಿಸುವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ವಿವರ ಇಲ್ಲಿದೆ.
ಶುದ್ಧತೆ
ಚಿನ್ನದ ಶುದ್ಧತೆಯನ್ನು ಕ್ಯಾರಟ್ಗಳಲ್ಲಿ ಅಳೆಯಲಾಗುತ್ತದೆ. 24 ಕ್ಯಾರಟ್ ಚಿನ್ನವನ್ನು 99.9% ಶುದ್ಧವೆಂದು ಪರಿಗಣಿಸಲಾಗುತ್ತದೆ. ನೀವು 22 ಕ್ಯಾರಟ್, 18 ಕ್ಯಾರಟ್, 14 ಕ್ಯಾರಟ್ ಇತ್ಯಾದಿಗಳನ್ನು ಆರಿಸುವಾಗ ಶುದ್ಧತೆಯ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ನೀವು ಯಾವ ರೀತಿಯ ಚಿನ್ನದ ಖರೀದಿಸಲು ಬಯಸುತ್ತಿದ್ದೇರಿ ಎನ್ನುವುದನ್ನು ಮೊದಲೇ ನಿರ್ಧರಿಸಿ. ಹಾಲ್ಮಾರ್ಕ್ ಶುದ್ಧತೆಯನ್ನು ಸೂಚಿಸುವ ಮತ್ತೊಂದು ವಿಧಾನ. ಹೀಗಾಗಿ ಹಾಲ್ಮಾರ್ಕ್ ಇರುವ ಆಭರಣಗಳನ್ನೇ ಖರೀದಿಸಿ.
ದರ
ಆಭರಣದ ಬೆಲೆಯು ಅದರ ಶುದ್ಧತೆ ಮತ್ತು ಅದನ್ನು ಯಾವ ಮಿಶ್ರಲೋಹದೊಂದಿಗೆ ಬೆರೆಸಿ ತಯಾರಾಗಿಸಲಾಗಿದೆ ಮತ್ತು ಹೇಗೆ ತಯಾರಾಗಿಸಲಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ. ಅಂದರೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಆಭರಣಗಳು ದುಬಾರಿಯಾಗಿರುತ್ತವೆ. ಹೀಗಾಗಿ ದರದ ಬಗ್ಗೆ ಯೋಚಿಸುವಾಗ ಡಿಸೈನ್ ಕೂಡ ನಿಮ್ಮ ಗಮನದಲ್ಲಿರಲಿ. ಜತೆಗೆ ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿನ ಕೊಡುಗೆಯನ್ನು ಗಮನಿಸಿ ದರಗಳನ್ನು ಹೋಲಿಸಿ ನೋಡಿ.
ಭಾರ
ಹಣ ಪಾವತಿಸುವ ಮೊದಲು ನೀವು ಖರೀದಿಸಿದ ಚಿನ್ನದ ತೂಕವನ್ನು ಪರಿಶೀಲಿಸುವುದನ್ನು ಮರೆಯಬೇಡಿ. ಅಲ್ಲದೆ ಖರೀದಿಯ ಬಿಲ್ ಅನ್ನು ತಪ್ಪದೆ ಪಡೆದುಕೊಳ್ಳಿ.
ಈ ಸುದ್ದಿಯನ್ನೂ ಓದಿ: Indian Bank: ವಾಣಿಜ್ಯ ವಾಹನಗಳಿಗೆ ಹಣಕಾಸು ಉತ್ಪನ್ನಗಳನ್ನು ನೀಡಲು ಟಾಟಾ ಮೋಟಾರ್ಸ್ ಜೊತೆಗೆ ಎಂಒಯುಗೆ ಸಹಿ ಹಾಕಿದ ಇಂಡಿಯನ್ ಬ್ಯಾಂಕ್