Saturday, 14th December 2024

Gold Price Today: ಮತ್ತೆ ಗಗನಮುಖಿಯಾಯ್ತು ಚಿನ್ನದ ದರ; ಇಂದು ಭಾರಿ ಬೆಲೆ ಏರಿಕೆ

Gold Price Today

ಬೆಂಗಳೂರು: ಚಿನ್ನದ ದರದಲ್ಲಿ ಇಂದು(ಅಕ್ಟೋಬರ್‌ 18) ಮತ್ತೆ ಏರಿಕೆ ಕಂಡಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 80 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 87 ರೂ. ಏರಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,240 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,898 ರೂ. ಇದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 57,280 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,600 ರೂ. ಮತ್ತು 100 ಗ್ರಾಂಗೆ
7,16,000 ರೂ. ಪಾವತಿಸಬೇಕಾಗುತ್ತದೆ.

24 ಕ್ಯಾರಟ್‌ ಚಿನ್ನದ ದರಗಳ ವಿವರ

24 ಕ್ಯಾರಟ್‌ನ 8 ಗ್ರಾಂ ಚಿನ್ನ 62,488 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 78,110 ರೂ. ಮತ್ತು 100 ಗ್ರಾಂಗೆ 7,81,100 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
 ಬೆಂಗಳೂರು7,240 ರೂ.7,898 ರೂ
 ದೆಹಲಿ7,255 ರೂ.7,913 ರೂ.
 ಮುಂಬೈ7,240 ರೂ.7,898 ರೂ
 ಚೆನ್ನೈ7,240 ರೂ.7,898 ರೂ
 ಹೈದರಾಬಾದ್7,240 ರೂ.7,898 ರೂ

ಬೆಳ್ಳಿ ಬೆಲೆ

ಇತ್ತ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ 1 ಗ್ರಾಂನ ಬೆಲೆ 94.10 ರೂ.ಗೆ ತಲುಪಿದೆ. 8 ಗ್ರಾಂಗೆ 752.80 ರೂ., 10 ಗ್ರಾಂಗೆ 941 ರೂ. ಮತ್ತು 1 ಕೆಜಿಗೆ 94,100 ರೂ. ಪಾವತಿಸಬೇಕಾಗುತ್ತದೆ.

ಚಿನ್ನದ ಬೆಲೆ ಏರಿಕೆಗೆ ಕಾರಣ

ಭಾರತದಲ್ಲಿ ಚಿನ್ನದ ದರ ಪ್ರತಿ ದಿನ ಏರಳಿತವಾಗುತ್ತಲೇ ಇರುತ್ತದೆ. ಅದರಲ್ಲಿಯೂ ಚಿನ್ನದ ಬೆಲೆ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಯಾವುವು ಎನ್ನುವುದನ್ನು ನೋಡೋಣ.

ಬೇಡಿಕೆ ಮತ್ತು ಪೂರೈಕೆ: ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರ ವೃದ್ಧಿಯಾಗುತ್ತದೆ. ಅದೇ ರೀತಿ ಪೂರೈಕೆಯಲ್ಲಿನ ಅಡೆತಡೆಗಳು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸರ್ಕಾರದ ನೀತಿ: ಸರ್ಕಾರ ಆಮದು ಸುಂಕ, ತೆರಿಗೆ ಹೆಚ್ಚಿಸಿದರೆ ಚಿನ್ನದ ಬೆಲೆಯಲ್ಲಿಯೂ ಏರಿಕೆಯಾಗುತ್ತದೆ. ಹಣದುಬ್ಬರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರಗಳ ದೊಡ್ಡ ಪ್ರಮಾಣದ ಖರೀದಿ ಅಥವಾ ಮಾರಾಟವು ಚಿನ್ನದ ಮಾರುಕಟ್ಟೆಯಲ್ಲಿ ಅಲೆಗಳನ್ನು ಸೃಷ್ಟಿಸುತ್ತದೆ.

ಹಣದುಬ್ಬರ: ಚಿನ್ನವನ್ನು ಸಾಮಾನ್ಯವಾಗಿ ಹಣದುಬ್ಬರದ ವಿರುದ್ಧ ಹೂಡಿಕೆ ಎಂದು ಪರಿಗಣಿಸಲಾಗಿದೆ. ದೇಶದಲ್ಲಿ ಹೊಸ ನೋಟು, ನಾಣ್ಯಗಳನ್ನು ಹೊರತರಬೇಕಾದರೆ ಅಷ್ಟೇ ಪ್ರಮಾಣದ ಚಿನ್ನವನ್ನು ಆರ್‌ಬಿಐ (RBI) ತೆಗೆದಿರಿಸುತ್ತದೆ. ದೇಶದಲ್ಲಿ ಹಣದುಬ್ಬರದ ಒತ್ತಡದಿಂದಾಗಿ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಆಗ ಚಿನ್ನದ ಬೆಲೆ ತನ್ನಿಂತಾನೇ ಏರಿಕೆಯಾಗುತ್ತದೆ.

ಕಡಿಮೆ ಬಡ್ಡಿ ದರಗಳು: ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಕಡಿಮೆಯಾದಾಗ ಜನರಲ್ಲಿ ಹಣದ ಹರಿವಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದರಿಂದ ಚಿನ್ನ ಖರೀದಿ ಪ್ರಮಾಣ ಹೆಚ್ಚಾಗುತ್ತದೆ. ಇದು ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಈ ಸುದ್ದಿಯನ್ನೂ ಓದಿ: Reliance Jio: ಜಿಯೊ ಕ್ಲೌಡ್ ಪಿಸಿ! ಮನೆಯ ಟಿವಿ ಕೇವಲ 100 ರೂ.ಯಲ್ಲಿ ಇನ್ನು ಕಂಪ್ಯೂಟರ್!