Thursday, 19th September 2024

Gold Rate: ಆಭರಣ ಪ್ರಿಯರಿಗೆ ಕೊನೆಗೂ ಸಿಕ್ತು ಗುಡ್‌ನ್ಯೂಸ್‌; ಇಳಿದ ಚಿನ್ನದ ದರ

Gold Rate

ಬೆಂಗಳೂರು: ಆಭರಣ ಪ್ರಿಯರಿಗೆ ಇಂದು (ಸೆಪ್ಟೆಂಬರ್‌ 17) ಗುಡ್‌ನ್ಯೂಸ್‌ ಸಿಕ್ಕಿದೆ (Gold Rate).  ಸತತವಾಗಿ ಏರಿಕೆಯಾಗಿದ್ದ ಚಿನ್ನದ ದರ ಕೊನೆಗೂ ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 15 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 16 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 6,865 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 7,489 ರೂ. ಇದೆ.

22 ಕ್ಯಾರಟ್‌ ಚಿನ್ನದ ದರಗಳ ವಿವರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 54,920 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 68,650 ರೂ. ಮತ್ತು 100 ಗ್ರಾಂಗೆ 6,86,500 ರೂ. ಪಾವತಿಸಬೇಕಾಗುತ್ತದೆ.

24 ಕ್ಯಾರಟ್‌ ಚಿನ್ನದ ದರಗಳ ವಿವರ

24 ಕ್ಯಾರಟ್‌ನ 8 ಗ್ರಾಂ ಚಿನ್ನ 59,912 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 74,890 ರೂ. ಮತ್ತು 100 ಗ್ರಾಂಗೆ 7,48,900 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
 ಬೆಂಗಳೂರು 6,865 ರೂ.  7,489 ರೂ.
 ದೆಹಲಿ 6,880 ರೂ. 7,504 ರೂ.
 ಮುಂಬೈ 6,865 ರೂ. 7,489 ರೂ.
 ಚೆನ್ನೈ 6,865 ರೂ. 7,489 ರೂ.
 ಹೈದರಾಬಾದ್ 6,865 ರೂ. 7,489 ರೂ.

ಬೆಳ್ಳಿ ಬೆಲೆ

ಇತ್ತ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ 85 ರೂ. ಇದೆ. 8 ಗ್ರಾಂಗೆ 680 ರೂ., 10 ಗ್ರಾಂಗೆ 8,500 ರೂ. ಮತ್ತು 1 ಕೆಜಿಗೆ 85,000 ರೂ. ಪಾವತಿಸಬೇಕಾಗುತ್ತದೆ.

ಚಿನ್ನಾಭರಣ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶ

ಶುದ್ಧತೆ: ಚಿನ್ನಾಭರಣ ಖರೀದಿಸುವ ಮುನ್ನ ಅದರ ಶುದ್ಧತೆಯನ್ನು ಪರಿಶೀಲಿಸುವುದು ಅಗತ್ಯ. ಚಿನ್ನದ ಮೇಲೆ ಶುದ್ಧತೆಯನ್ನು ಸೂಚಿಸುವ ಬಿಐಎಸ್‌ (BIS) ಹಾಲ್‌ಮಾರ್ಕ್‌ ಇದೆ ಎನ್ನುವುದನ್ನು ಖಚಿತಪಡಿಸಿ. ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂಬುದನ್ನು ಆ ಮೂಲಕ ಪ್ರಮಾಣೀಕರಿಸಬಹುದು.

ಬೆಲೆ: ಚಿನ್ನದ ಬೆಲೆ ಪ್ರತಿ ದಿನ ಬದಲಾಗುತ್ತಿರುತ್ತದೆ. ಖರೀದಿಸುವ ಮುನ್ನ ಬೆಲೆ ಎಷ್ಟಿದೆ ಎನ್ನುವುದನ್ನು ಗಮನಿಸಿ. ಇದಕ್ಕಾಗಿ ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ಹೋಲಿಕೆ ಮಾಡಿ: ಮತ್ತೊಂದು ಮುಖ್ಯ ವಿಚಾರ ಎಂದರೆ ಬೆಲೆಗಳ ಹೋಲಿಕೆ. ಬೇರೆ ಬೇರೆ ಜ್ಯುವೆಲ್ಲರಿಗಳಲ್ಲಿ ವ್ಯತ್ಯಸ್ತ ಬೆಲೆಗಳಿರುತ್ತವೆ. ನೀವು ಚಿನ್ನ ಖರೀದಿಸುವ ಮುನ್ನ ಬೆಲೆಗಳನ್ನು ಹೋಲಿಸಿ ನೋಡಿ. ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯು ಮಾಡಬಹುದಾಗಿದೆ.

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ (Making Charges) ಮತ್ತು ವೇಸ್ಟೇಜ್ ಚಾರ್ಜ್ (Wastage Charges) ಎಂದಿರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲ ಆಭರಣಗಳಿಗೆ ಮೇಕಿಂಗ್, ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರ ವರೆಗೆ ಇದೆ.

ವಿನ್ಯಾಸ: ಮೊದಲೇ ಹೇಳಿದಂತೆ ಆಭರಣಗಳ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಸೂಕ್ಷ್ಮ ಕೆತ್ತನೆಯ, ಕೈಯಿಂದ ತಯಾರಿಸುವ ಆಭರಣ ಸ್ವಲ್ಪ ದುಬಾರಿಯಾಗಿತ್ತವೆ. ಆದ್ದರಿಂದ ಈ ಬಗ್ಗೆಯೂ ಗಮನ ಹರಿಸಿ.

ಈ ಸುದ್ದಿಯನ್ನೂ ಓದಿ: UPI Payment: ಇಂದಿನಿಂದ ನೀವು ಯುಪಿಐನಲ್ಲಿ 5 ಲಕ್ಷ ರೂ.ವರೆಗೂ ಹಣ ಪಾವತಿ ಮಾಡಬಹುದು

Leave a Reply

Your email address will not be published. Required fields are marked *