Saturday, 14th December 2024

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಶಕ್ತರಾಗಬೇಕು: ಸಂಸದ ಎ.ನಾರಾಯಣ್ ಸ್ವಾಮಿ

ಪಾವಗಡ: ತಾಲೂಕಿನ ಕೆ.ಟಿ ಹಳ್ಳಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ನೂತನ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗ ಸಂಸದರು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತರುತ್ತಿದೆ. ಈ ಹಿಂದೆ ಜಾರಿಯಾದ ಐ.ಟಿ.ಐ., ಜೆ.ಒ.ಸಿ.ಇನ್ನೂ ಮೊದಲಾದ ಕೋರ್ಸ್ ಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧನೆಯಾಗಿಲ್ಲ. ಆಧುನಿಕತೆಯ ಸವಾಲುಗಳನ್ನು ಎದುರಿಸಲು ಅಗತ್ಯ ಇರುವ ಸಾಮರ್ಥ್ಯ ಪಡೆಯುವ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನ ಮಾಡಬೇಕು.ಎಂದು ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಹಾಲಿ ಶಾಸಕರಾದ ವೆಂಕಟರ ಮಣಪ್ಪ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸಾಕಷ್ಟು ಅನುದಾನ ಕೊಡಲು ಸಹಕಾರ ನೀಡುವುದಾಗಿ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಆರ್ಥಿಕ ವಾಗಿ ಸಶಕ್ತವಾಗಿ ಬೆಳೆದರೆ ಸಮಾಜದ ಪ್ರಗತಿಗೆ ಪೂರಕ ಎಂದು ಶಾಸಕರು ಹೇಳಿದರು.

ಈ ವೇಳೆ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪನವರು, ಜಿ.ಪಂ.ಸದಸ್ಯರಾದ ಎ.ಚ್.ವಿ.ವೆಂಕಟೇಶ್, ತಾ.ಪಂ.ಸದಸ್ಯರಾದ. ಶಿವಮ್ಮ, ಪ್ರಾಂಶುಪಾಲ ಡಾ.ವೆಂಕಟೇಶ್..ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ರಂಗೇಗೌಡರು, ಚಿಕ್ಕಣ್ಣ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.